Saturday, April 6, 2024

ಹೆಂಡತಿಯನ್ನ ಕೊಲೆಗೈದ ಗಂಡ ತಾನು ನೇಣಿಗೆ ಶರಣಾದ : ಸಂಶಯದಿಂದ ಕೃತ್ಯ

ಉಳ್ಳಾಲ: ಪತ್ನಿಯ ಮೇಲಿನ ಸಂಶಯದಿಂದ ಆಕೆಯನ್ನು ಕತ್ತು ಹಿಸುಕಿ ಕೊಂದು ಬಳಿಕ ತಾನೂ ಆತ್ಮಹತ್ಯೆಗೈದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಪಿಲಾರು ಪಂಜಮ್ದಾಯ ದೈವಸ್ಥಾನದ ಬಳಿ ನಡೆದಿದೆ.

ಪಿಲಾರು ನಿವಾಸಿಗಳಾದ ಶೋಭಾ ಪೂಜಾರಿ ಕೊಲೆಯಾದ ಮಹಿಳೆಯಾಗಿದ್ದು, ಮತ್ತು ಆಕೆಯ ಪತಿ ಶಿವಾನಂದ ಪೂಜಾರಿ ಆತ್ಮಹತ್ಯೆಗೈದವರು ಎಂದು ತಿಳಿದು ಬಂದಿದೆ.

ಇಂದು ಮಧ್ಯಾಹ್ನ 12 ಗಂಟೆ ವೇಳೆಗೆ ಶೋಭಾ ಅವರ ಹಿರಿಯ ಮಗ ಕಾರ್ತಿಕ್ ಶೋಭಾ ಅವರಿಗೆ ಕರೆ ಮಾಡಿದ್ದು ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಪಕ್ಕದ ಮನೆಯವರಿಗೆ ವಿಚಾರಿಸಲು ತಿಳಿಸಿದ್ದಾನೆ. ಪಕ್ಕದ ಮನೆಯ ಶಕುಂತಳ ಶೆಟ್ಟಿ ಅವರು ಶೋಭಾ ಅವರ ಮನೆಯೊಳಗೆ ಪ್ರವೇಶಿಸಿದಾಗ ಶೋಭಾ ಅವರು ಬೆಡ್ ರೂಮಿನ‌ ಮಂಚದಲ್ಲಿ ಹೆಣವಾಗಿದ್ದರು. ಗಾಬರಿಗೊಂಡ ಶಕುಂತಳಾ ಅವರು ಮನೆಮಂದಿಗೆ ತಿಳಿಸಿದಾಗ ಪಕ್ಕದ ತೋಟದಲ್ಲಿ ಮರಕ್ಕೆ ಗಂಡ ಶಿವಾನಂದ ಅವರು ನೇಣು ಬಿಗಿದುಕೊಂಡಿದ್ದು ತಿಳಿದುಬಂದಿದೆ.

ಇನ್ನು ಶಿವಾನಂದ ಪೂಜಾರಿ ಅವರು ಪೈಂಟರ್ ಕೆಲಸ ಮಾಡುತ್ತಿದ್ದು ಪತ್ನಿ ಅಲ್ಲದೆ ಮಗಳ ಮೇಲೂ ನಿರಂತರವಾಗಿ ಸಂಶಯ ಪಡುತ್ತಿದ್ದರು ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಫಾರೆನ್ಸಿಕ್‌ ತಂಡ ಭೇಟಿ ನೀಡಿ ಎರಡು ಮೃತದೇಹಗಳನ್ನು ಪರಿಶೀಲಿಸುತ್ತಿದ್ದು, ಎಸಿಪಿ ದಿನಕರ್‌ ಶೆಟ್ಟಿ ನೇತೃತ್ವದಲ್ಲಿ ಉಳ್ಳಾಲ ಪೊಲೀಸ್‌ ಠಾಣೆಯ ತಂಡ ತನಿಖೆ ಕೈಗೆತ್ತಿಕೊಂಡಿದೆ. ಫಾರೆನ್ಸಿಕ್‌ ತಂಡ ನೀಡಿದ ವರದಿ ನಂತರವಷ್ಟೇ ಶೋಭಾ ಕೊಲೆ ಎಂಬುದುನ್ನು ಸ್ಪಷ್ಟಪಡಿಸಬಹುದು ಅನ್ನುವ ಮಾಹಿತಿಯನ್ನು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

More from the blog

ರಾಜ್ಯದಲ್ಲಿ 60 ಮಂದಿಯ ನಾಮಪತ್ರ ತಿರಸ್ಕೃತ

ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯದ ಮೊದಲ ಹಂತದ 14 ಕ್ಷೇತ್ರಗಳಲ್ಲಿ 358 ಅಭ್ಯರ್ಥಿಗಳು 492 ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ 13 ಕ್ಷೇತ್ರದಲ್ಲಿ ಪರಿಶೀಲನೆ ಕಾರ್ಯ ಮುಗಿದಿದೆ. 276 ನಾಮಪತ್ರಗಳು ಕ್ರಮಬದ್ಧವಾಗಿದ್ದು, 60 ನಾಮಪತ್ರಗಳು...

ಮಂಗಳೂರು: ‘ಸ್ವೀಟ್ ಸಿಂಫನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್’ ಸಂಸ್ಥೆಯ ಸಂಗೀತ ಕ್ಷೇತ್ರದಲ್ಲಿ ಸಂಪುಟ 2′ ರ ನೂತನ ಕೃತಿ ಲೋಕಾರ್ಪಣೆ

ಮಂಗಳೂರು: ಮಂಗಳೂರಿನ ಕುಲಶೇಖರದಲ್ಲಿರುವ 'ಸ್ವೀಟ್ ಸಿಂಫನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್' ಸಂಸ್ಥೆಯ ಪ್ರಕಾಶನದಲ್ಲಿ ಇಂಗ್ಲಿಷ್, ಹಿಂದಿ ಮತ್ತು ಕನ್ನಡದ ಜನಪ್ರಿಯ ಹಾಡುಗಳನ್ನು ಪಾಶ್ಚಿಮಾತ್ಯ ನೊಟೇಶನ್ ಮೂಲಕ ವಯಲಿನ್, ಗಿಟಾರ್ ಮತ್ತು ಕೀಬೋರ್ಡ್ ನಲ್ಲಿ...

ಹೆರಿಗೆ ವೇಳೆ ವಿಪರೀತ ರಕ್ತಸ್ರಾವ : ಲಾಯಿಲದ ಮಹಿಳೆ ಸಾವು

ಬೆಳ್ತಂಗಡಿ: ಹೆರಿಗೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ತೀವ್ರ ರಕ್ತ ಸ್ರಾವದಿಂದ ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಬದ್ಯಾರ್ ಖಾಸಗಿ ಆಸ್ಪತ್ರೆಯಲ್ಲಿ ಲಾಯಿಲ ಗ್ರಾಮದ ಗಾಂಧಿನಗರ ನಿವಾಸಿ ಗಾಯತ್ರಿ ಎಂಬವರು ಎರಡನೇ...

ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌ : ವಾರಾಂತ್ಯದಲ್ಲಿ ಚಿನ್ನದ ದರ ತುಸು ಇಳಿಕೆ…

ಬೆಂಗಳೂರು: ಚಿನ್ನದ ದರದಲ್ಲಿ ಮತ್ತೆ ಹಾವು ಏಣಿಯಾಟ ಶುರುವಾಗಿದೆ. ಕಳೆದೆರಡು ದಿನಗಳಿಂದ ನಿರಂತರ ಏರಿಕೆ ಕಂಡಿದ್ದ ಬಂಗಾರದ ಬೆಲೆ ಇದೀಗ ಇಳಿಕೆಯಾಗಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ 10ಗ್ರಾಂ ಚಿನ್ನದ ಮೇಲೆ 450 ರೂ...