Sunday, April 7, 2024

ಮಹಿಳೆಯರೇ ನೀವು ಗರ್ಭಿಣಿಯಾಗಿದ್ದರೆ ಹೆರಿಗೆಗಾಗಿ ಕೈಲಾಸಕ್ಕೆ ಬನ್ನಿ-ನಿತ್ಯಾನಂದ ಸ್ವಾಮಿ

ಬೆಂಗಳೂರು: ಮಹಿಳೆಯರೇ ನೀವು ಗರ್ಭಿಣಿಯಾಗಿದ್ದರೆ ಹೆರಿಗೆಗಾಗಿ ಕೈಲಾಸಕ್ಕೆ ಬನ್ನಿ ಎಂದು ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ಸಲಹೆ ನೀಡಿದ್ದಾರೆ.

ಭಾರತ ಬಿಟ್ಟು ಹೋಗಿ ಕೈಲಾಸವೆಂಬ ಹೊಸ ರಾಷ್ಟ್ರ ಸ್ಥಾಪಿಸಿರುವ ನಿತ್ಯಾನಂದ ಅಲ್ಲಿ ವಿವಿಧ ಅಭಿವೃದ್ದಿ ಚಟುವಟಿಕೆಗಳನ್ನು ಮಾಡುವುದಾಗಿ ಹೇಳಿಕೊಂಡಿದ್ದಾನೆ. ಶಾಶ್ವತ ಕಾಸ್ಮಿಕ್ ವಿಮಾನ ನಿಲ್ದಾಣ ಮತ್ತು ಇಡೀ ವಿಶ್ವಕ್ಕೆ ಮೀಸಲಾದ ಹೆರಿಗೆ ಆಸ್ಪತ್ರೆಯನ್ನು ಮಾಡುವುದು ಆತನ ಮುಖ್ಯ ಉದ್ದೇಶವಂತೆ. ಈ ಹೆರಿಗೆ ಆಸ್ಪತ್ರೆಯಲ್ಲಿ ಜನಿಸುವ ಮಕ್ಕಳಿಗೆ ಪ್ರೌಢ ಅಲೌಕಿಕ ಪ್ರಕಾಶಮಾನವಾದ ಶಕ್ತಿಯ ಡಿಎನ್‌ಎ ಅಳವಡಿಸುವುದು ಮತ್ತು ಬ್ರಹ್ಮಜ್ಞಾನವುಳ್ಳ ಅನುವಂಶೀಯ ಕೋಡ್ ಕೂಡಾ ನೀಡಲಾಗುತ್ತದೆ ಎಂದು ಹೇಳಿಕೊಂಡಿದ್ದಾನೆ.

ನೀವು ಯಾವುದೇ ದೇಶದಲ್ಲಿರಿ. ಆದರೆ ನಿಮ್ಮ ಮಕ್ಕಳು ವಿಶೇಷ ಚೈತನ್ಯ ಶೀಲರಾಗಬೇಕೆಂದರೆ ಹೆರಿಗೆಗಾಗಿ ಕೈಲಾಸಕ್ಕೇ ಬನ್ನಿ ಎಂದು ವೀಡಿಯೋವೊಂದರಲ್ಲಿ ಗರ್ಭಿಣಿಯರಿಗೆ ಆಹ್ವಾನ ನೀಡಿದ್ದಾನೆ.

More from the blog

ರಾಜ್ಯದಲ್ಲಿ 60 ಮಂದಿಯ ನಾಮಪತ್ರ ತಿರಸ್ಕೃತ

ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯದ ಮೊದಲ ಹಂತದ 14 ಕ್ಷೇತ್ರಗಳಲ್ಲಿ 358 ಅಭ್ಯರ್ಥಿಗಳು 492 ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ 13 ಕ್ಷೇತ್ರದಲ್ಲಿ ಪರಿಶೀಲನೆ ಕಾರ್ಯ ಮುಗಿದಿದೆ. 276 ನಾಮಪತ್ರಗಳು ಕ್ರಮಬದ್ಧವಾಗಿದ್ದು, 60 ನಾಮಪತ್ರಗಳು...

ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌ : ವಾರಾಂತ್ಯದಲ್ಲಿ ಚಿನ್ನದ ದರ ತುಸು ಇಳಿಕೆ…

ಬೆಂಗಳೂರು: ಚಿನ್ನದ ದರದಲ್ಲಿ ಮತ್ತೆ ಹಾವು ಏಣಿಯಾಟ ಶುರುವಾಗಿದೆ. ಕಳೆದೆರಡು ದಿನಗಳಿಂದ ನಿರಂತರ ಏರಿಕೆ ಕಂಡಿದ್ದ ಬಂಗಾರದ ಬೆಲೆ ಇದೀಗ ಇಳಿಕೆಯಾಗಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ 10ಗ್ರಾಂ ಚಿನ್ನದ ಮೇಲೆ 450 ರೂ...

ನೀತಿ ಸಂಹಿತೆ ಇರುವಾಗ ಆಶ್ಲೇಷ ಬಲಿ ಮಂಟಪ ಕಾಮಗಾರಿ ಆರಂಭ ಸಮರ್ಪಕವಲ್ಲ- ಹರೀಶ್ ಇಂಜಾಡಿ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಹಿಂದಿನ ಆಡಳಿತ ಮಂಡಳಿಯ ಕೊನೇ ದಿನಗಳಲ್ಲಿ ದಾನಿಗಳು ಕ್ಷೇತ್ರದಲ್ಲಿ ಆಶ್ಲೇಷ ಬಲಿ ಮಂಟಪ ನಿರ್ಮಿಸಲು ಮುಂದೆ ಬಂದರು. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ...

ಪ್ರಧಾನಿ ಮೋದಿ ಕರೆ : ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ  ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ “ಮೆಹಂದಿ ಅಭಿಯಾನ" ನಡೆಸುವಂತೆ ಸೂಚನೆ ನೀಡಿದ್ದಾರೆ. ಜತೆಗೆ ಮೋದಿ...