Thursday, September 28, 2023

ಎದೆ ನೋವಿನಿಂದ ನಾದಬ್ರಹ್ಮ ಹಂಸಲೇಖ ಆಸ್ಪತ್ರೆಗೆ ದಾಖಲು ; ಇಲ್ಲಿದೆ ಹೆಲ್ತ್​ ಅಪ್​ಡೇಟ್

Must read

ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬೆಂಗಳೂರಿನ ರಾಜಾಜಿನಗರ ಫಸ್ಟ್ ಬ್ಲಾಕ್​ನಲ್ಲಿರುವ ಅಪೋಲೊ ಆಸ್ಪತ್ರೆಯಲ್ಲಿ ಹಂಸಲೇಖ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಹಂಸಲೇಖ ಅವರ ಆರೋಗ್ಯ ತಪಾಸಣೆ ಮಾಡಿರುವ ವೈದ್ಯರು ಯಾವುದೇ ತೊಂದರೆ ಇಲ್ಲ. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಎದೆ ನೋವು ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ. ಈ ವಿಷಯ ತಿಳಿದು ಆಪ್ತರು ಹಾಗೂ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಈ ಹಿಂದೆ ಹಂಸಲೇಖ ಅವರು ಓಪನ್​ ಹಾರ್ಟ್ ಸರ್ಜರಿ ಮಾಡಿಸಿಕೊಂಡಿದ್ದರು. ಈಗ ಒಂದು ದಿನ ವಿಶ್ರಾಂತಿ ಪಡೆಯಲು ಹಂಸಲೇಖಗೆ ವೈದ್ಯರು ಸೂಚಿಸಿದ್ದು, ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಯಲ್ಲಿ ಹಂಸಲೇಖ ಉಳಿದುಕೊಂಡಿದ್ದಾರೆ.

More articles

Latest article