Friday, April 12, 2024

ಕಾರ್ಮಿಕರನ್ನು ಕೊಠಡಿಯಲ್ಲಿ ಕೂಡಿ ಹಾಕಿದ ಹಲ್ಲೆ ನಡೆಸಿದ ಮಾಲೀಕ : ಕಾರಣ ಕೇಳಿದ್ರೆ ಶಾಕ್ ಅಗ್ತೀರಾ…?

ಚಿಕ್ಕಮಗಳೂರು: ಕೆಲಸಕ್ಕೆ ಸೇರುವ ವೇಳೆ ತೋಟದ ಮಾಲೀಕನಿಂದ ಮುಂಗಡವಾಗಿ ಪಡೆದ ಹಣವನ್ನು ವಾಪಸ್ಸು ನೀಡದ ಆರೋಪದ ಮೇಲೆ ತೋಟದ ಮಾಲೀಕ ತನ್ನ ಕಾರ್ಮಿಕರನ್ನು ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರಿನ ಬಾಳೆಹೊನ್ನೂರು ಸಮೀಪದ ಜೇನುಗದ್ದೆಯ ಪುರದಲ್ಲಿ ಬೆಳಕಿಗೆ ಬಂದಿದೆ.

ತೋಟದ ಕೆಲಸಕ್ಕೆ ಬಂದಿದ್ದ ಕಾರ್ಮಿಕರು ತೋಟದ ಮಾಲೀಕನಲ್ಲಿ ಮುಂಗಡವಾಗಿ ಒಂಬತ್ತು ಲಕ್ಷ ರೂಪಾಯಿ ಹಣವನ್ನು ಪಡೆದುಕೊಂಡಿದ್ದರು ಎನ್ನಲಾಗಿದೆ. ಆದ್ರೆ ಇದೀಗ ಕಾರ್ಮಿಕರು ಬೇರೆ ಕಡೆಗೆ ಕೆಲಸಕ್ಕೆ ಹೋಗುವುದಾಗಿ ಮಾಲೀಕರಲ್ಲಿ ಹೇಳಿದ್ದಾರೆ. ಇದಕ್ಕೆ ಮಾಲೀಕ ತನ್ನಿಂದ ಮುಂಗಡವಾಗಿ ಪಡೆದಿರುವ ಹಣವನ್ನು ಹಿಂದೆ ಕೊಡುವಂತೆ ಕೇಳಿದ್ದಾರೆ. ಆದ್ರೆ ಈ ವೇಳೆ ಕಾರ್ಮಿಕರು ನಮ್ಮ ಬಳಿ ಹಣ ಇಲ್ಲ ಸ್ವಲ್ಪ ಸಮಯ ಕೊಡಿ ನಿಮ್ಮ ಹಣವನ್ನು ವಾಪಸ್ಸು ನೀಡುತ್ತೇವೆಂದು ಹೇಳಿದ್ದಾರೆ. ಇದರಿಂದ ಕೋಪಗೊಂಡ ಮಾಲೀಕ ಹಣ ಕೊಡುವವರೆಗೆ ಇಲ್ಲಿಂದ ಹೋಗುವಹಾಗಿಲ್ಲ ಎಂದು ಕಾರ್ಮಿಕರನ್ನು ತನ್ನ ತೋಟದ ಮನೆಯ ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ ಎನ್ನಲಾಗಿದೆ.

ಇನ್ನು ಘಟನೆಯ ವಿಡಿಯೋವನ್ನು ಕಾರ್ಮಿಕ ಮಹಿಳೆಯೊಬ್ಬರು ಚಿತ್ರೀಕರಿಸಿದ್ದು, ಇದರಿಂದ ಕೋಪಗೊಂಡ ಮಾಲೀಕ ಆಕೆ ಗರ್ಭಿಣಿ ಎನ್ನದೆ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲದೇ ಇದನ್ನು ತಡೆಯಲು ಬಂದವರ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಸದ್ಯ ಮಹಿಳೆ ಚಿಕ್ಕಮಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಕಾರ್ಮಿಕ ಕುಟುಂಬ  ಪ್ರತಿಕ್ರಿಯೆ ನೀಡಿದ್ದು, ಹಲ್ಲೆ ಕುರಿತು ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಆಗ್ರಹಿಸಿದ್ದಾರೆ.

More from the blog

ಎಳನೀರು ಸೇವಿಸಿ 136 ಮಂದಿ ಅಸ್ವಸ್ಥ ಪ್ರಕರಣ : ಬೊಂಡ ಫ್ಯಾಕ್ಟರಿ ಬಂದ್‌ ಗೆ ಆದೇಶ

ಮಂಗಳೂರು: ನಗರದ ಹೊರವಲಯದ ಅಡ್ಯಾರ್‌ನಲ್ಲಿರುವ ಬೊಂಡ ಫ್ಯಾಕ್ಟರಿಯ ಬೊಂಡ ನೀರು ಸೇವಿಸಿ ನೂರಾರು ಮಂದಿ ಅಸ್ವಸ್ಥಗೊಂಡ ಘಟನೆ ವರದಿಯಾಗಿದ್ದು, ಈ ಪ್ರಕರಣದ ಹಿನ್ನೆಲೆಯಲ್ಲಿ ಅಧಿಕಾರಿಗಳು ಗುರುವಾರ ಬೊಂಡ ಫ್ಯಾಕ್ಟರಿಗೆ ಬೀಗ ಜಡಿದಿದ್ದಾರೆ. ದ.ಕ.ಜಿಲ್ಲಾ ಆರೋಗ್ಯ...

ಸ್ವಿಮ್ಮಿಂಗ್​ ಪೂಲ್​ ನೀರಿಗೆ ಬಿದ್ದು 4ನೇ ತರಗತಿ ವಿದ್ಯಾರ್ಥಿ ಸಾವು

ಉಡುಪಿ‌: ಸ್ವಿಮ್ಮಿಂಗ್​ ಫೂಲ್​ನಲ್ಲಿ ಮುಳುಗಿ 4ನೇ ತರಗತಿಯ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಕುಂದಾಪುರ ತಾಲೂಕಿನ ಹೆಂಗವಳ್ಳಿ ಸಮೀಪದ ಟಿನ್ ಟಾನ್ ಎನ್ವೆಂಚರ್ಸ್ ರೆಸಾರ್ಟ್​​ನಲ್ಲಿ ನಡೆದಿದೆ. ಉಡುಪಿ‌ಯ ಹೊಡೆ ಮೂಲದ ಮುಹಮ್ಮದ್ ಅರೀಝ್ ಮೃತ ವಿದ್ಯಾರ್ಥಿ. ದಾರುಸ್ಸಲಾಮ್...

ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣ : ನಿದ್ದೆಯಲ್ಲಿದ್ದ ಉಗ್ರರನ್ನು ಬಡಿದೆಬ್ಬಿಸಿದ ಎನ್ಐಎ

ಬೆಂಗಳೂರು: ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಭರ್ಜರಿ ಕಾರ್ಯಾಚರಣೆ ನಡೆಸಿ, ಉಗ್ರರ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ರಾಮೇಶ್ವರಂ ಕೆಫೆ ಬಾಂಬರ್‌ ಗ್ಯಾಂಗ್ ಬಂಧಿಸಲು NIA ಭರ್ಜರಿ ಬಲೆ...

ಚಿನ್ನದ ದರ ಮತ್ತೆ ಏರಿಕೆ : ಇಂದು ಗೋಲ್ಡ್​ ರೇಟ್​ ಎಷ್ಟಿದೆ ಗೊತ್ತಾ..?

ಚಿನ್ನ ದಿನದಿಂದ ದಿನಕ್ಕೆ ಶಾಕ್​ ನೀಡುತ್ತಾ ಬರುತ್ತಿದೆ. ಕಳೆದ ತಿಂಗಳು ಮಾರ್ಚ್ ನಲ್ಲಿ ಅರವತ್ತು ಸಾವಿರದ ಗಡಿಯಲ್ಲಿದ್ದ ಬಂಗಾರ ಏಪ್ರಿಲ್ ನಲ್ಲಿ ಇದೀಗ ಎಪ್ಪತ್ತು ಸಾವಿರದ ಗಡಿ ದಾಟಿದೆ. ಕೇವಲ ಒಂದು ತಿಂಗಳ...