Saturday, April 6, 2024

ಅಕ್ಷರ ದಾಸೋಹ ನೌಕರರ ಬಂಟ್ವಾಳ ತಾಲೂಕು ಸಮಾವೇಶ

ಬಂಟ್ವಾಳ: ಅಕ್ಷರ ದಾಸೋಹ ನೌಕರರ ಬಂಟ್ವಾಳ ತಾಲೂಕು ಸಮಾವೇಶವು ಬಿ.ಸಿ.ರೋಡ್ ನಲ್ಲಿ ನಡೆಯಿತು.

ಸಮಾವೇಶವನ್ನುದ್ದೇಶಿಸಿ ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ ಮಾತನಾಡಿ, ರಾಜ್ಯ ಸರಕಾರವು ನಿವೃತ್ತಿ ಹೆಸರಿನಲ್ಲಿ ಅಮಾನವೀಯವಾಗಿ ನೌಕರರನ್ನು ಪಿಂಚಣಿ ನೀಡದೆ ಬಿಡುಗಡೆಗೊಳಿಸುತ್ತಿದ್ದು, ಸರಕಾರದ ಈ ನಡೆಯ ವಿರುದ್ದ ಅಕ್ಷರ ದಾಸೋಹ ನೌಕರರು ಸಂಘಟಿತರಾಗಿ ಹೋರಾಡಬೇಕು. ಮೂರು ತಿಂಗಳ ಬಾಕಿ ಇರುವ ವೇತನ ವನ್ನು ಕೂಡಲೇ ಜಾರಿ ಮಾಡಬೇಕು ಇಲ್ಲದಿದ್ದಲ್ಲಿ ಬಿಸಿಯೂಟ ಬಂದ್ ಮಾಡುವ ಮುಖಾಂತರ ‌ಪ್ರತಿಭಟನೆ ನಡೆಸಲು‌ ನೌಕರರು ಮುಂದಾಗಬೇಕು. ಪ್ರತೀ ತಿಂಗಳ ವೇತನ ವನ್ನು 5 ನೇ ತಾರೀಕಿನಂದು ನೌಕರರ ಖಾತೆಗೆ ಜಮಾ ಮಾಡಬೇಕೆಂದು ಒತ್ತಾಯಿಸಿದರು.

ಕಾರ್ಮಿಕ‌ ಮುಖಂಡ ರಾದ ರಾಬರ್ಟ್ ಡಿ.ಸೋಜ ಸುಳ್ಯ ರವರು ಮಾತನಾಡಿ‌, ಬಿಸಿಯೂಟ ನೌಕರರನ್ನು ಜೀತದಾಳುಗಳಂತೆ ಸರಕಾರವು ನಡೆಸಿಕೊಳ್ಳುತ್ತಿದ್ದು‌ ,ಕೋಟ್ಯಾಂತರ ರೂಪಾಯಿ ಖರ್ಚು‌ ಮಾಡಿ ಬಂಡವಾಳ ಶಾಹಿಗಳ ಹಿತ ಕಾಯುವ ಸರಕಾರಕ್ಕೆ‌ ಬಿಸಿಯೂಟ ನೌಕರರ ಗೋಳು ಅರ್ಥವಾಗುತ್ತಿಲ್ಲ ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ನೌಕರರು‌ ಸಂಘಟಿತರಾಗಿ ಹೋರಾಡ ಬೇಕು. ಸರಕಾರಿ ಶಾಲೆಗಳ ಮೇಲುಸ್ತುವಾರಿ ನೋಡಿಕೊಳ್ಳಲು ಪ್ರತೀ ತಿಂಗಳಿಗೆ 100 ರಂತೆ ಪೋಷಕರಿಂದ ಹಣ ಸಂಗ್ರಹಿಸಲು ಆದೇಶ ನೀಡಿದ ಸರಕಾರದ ಕ್ರಮವನ್ನು ತೀವ್ರ ವಾಗಿ ಖಂಡಿಸಿದರು. ಕಾರ್ಮಿಕ ಮುಖಂಡ ಸುರೇಂದ್ರ ಕೋಟ್ಯಾನ್ ಮಾತನಾಡಿ ಸಂಘಟನೆಯನ್ನು ಬಲಿಷ್ಟ ಗೊಳಿಸಲು ಕರೆ ನೀಡಿದರು.

ಸಮಾವೇಶದ ಅದ್ಯಕ್ಷತೆಯನ್ನು ವಿನಯ ವಹಿಸಿದ್ದರು. ನೂತನ ಬಂಟ್ವಾಳ ತಾಲ್ಲೂಕು ಸಮಿತಿ ಅದ್ಯಕ್ಷರಾಗಿ ಜಯಶ್ರೀ ಉಪಾಧ್ಯಕ್ಷರುಗಳಾಗಿ ವಿನಯ, ಜಯಂತಿ. ಕಾರ್ಯದರ್ಶಿಯಾಗಿ ವಾಣಿಶ್ರೀ ಜೊತೆ ಕಾರ್ಯದರ್ಶಿ ಗಳಾಗಿ ಸೌಮ್ಯ ,ಯಶೋಧ, ಕೋಶಧಿಕಾರಿಯಾಗಿ ಸೇವಂತಿಹಾಗೂ 22 ಜನರ ಕಾರ್ಯಕಾರಿ ಸಮಿತಿ ರಚಿಸಲಾಯಿತು.

More from the blog

ಮಂಗಳೂರು: ‘ಸ್ವೀಟ್ ಸಿಂಫನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್’ ಸಂಸ್ಥೆಯ ಸಂಗೀತ ಕ್ಷೇತ್ರದಲ್ಲಿ ಸಂಪುಟ 2′ ರ ನೂತನ ಕೃತಿ ಲೋಕಾರ್ಪಣೆ

ಮಂಗಳೂರು: ಮಂಗಳೂರಿನ ಕುಲಶೇಖರದಲ್ಲಿರುವ 'ಸ್ವೀಟ್ ಸಿಂಫನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್' ಸಂಸ್ಥೆಯ ಪ್ರಕಾಶನದಲ್ಲಿ ಇಂಗ್ಲಿಷ್, ಹಿಂದಿ ಮತ್ತು ಕನ್ನಡದ ಜನಪ್ರಿಯ ಹಾಡುಗಳನ್ನು ಪಾಶ್ಚಿಮಾತ್ಯ ನೊಟೇಶನ್ ಮೂಲಕ ವಯಲಿನ್, ಗಿಟಾರ್ ಮತ್ತು ಕೀಬೋರ್ಡ್ ನಲ್ಲಿ...

ಹೆರಿಗೆ ವೇಳೆ ವಿಪರೀತ ರಕ್ತಸ್ರಾವ : ಲಾಯಿಲದ ಮಹಿಳೆ ಸಾವು

ಬೆಳ್ತಂಗಡಿ: ಹೆರಿಗೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ತೀವ್ರ ರಕ್ತ ಸ್ರಾವದಿಂದ ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಬದ್ಯಾರ್ ಖಾಸಗಿ ಆಸ್ಪತ್ರೆಯಲ್ಲಿ ಲಾಯಿಲ ಗ್ರಾಮದ ಗಾಂಧಿನಗರ ನಿವಾಸಿ ಗಾಯತ್ರಿ ಎಂಬವರು ಎರಡನೇ...

ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌ : ವಾರಾಂತ್ಯದಲ್ಲಿ ಚಿನ್ನದ ದರ ತುಸು ಇಳಿಕೆ…

ಬೆಂಗಳೂರು: ಚಿನ್ನದ ದರದಲ್ಲಿ ಮತ್ತೆ ಹಾವು ಏಣಿಯಾಟ ಶುರುವಾಗಿದೆ. ಕಳೆದೆರಡು ದಿನಗಳಿಂದ ನಿರಂತರ ಏರಿಕೆ ಕಂಡಿದ್ದ ಬಂಗಾರದ ಬೆಲೆ ಇದೀಗ ಇಳಿಕೆಯಾಗಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ 10ಗ್ರಾಂ ಚಿನ್ನದ ಮೇಲೆ 450 ರೂ...

ನೀತಿ ಸಂಹಿತೆ ಇರುವಾಗ ಆಶ್ಲೇಷ ಬಲಿ ಮಂಟಪ ಕಾಮಗಾರಿ ಆರಂಭ ಸಮರ್ಪಕವಲ್ಲ- ಹರೀಶ್ ಇಂಜಾಡಿ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಹಿಂದಿನ ಆಡಳಿತ ಮಂಡಳಿಯ ಕೊನೇ ದಿನಗಳಲ್ಲಿ ದಾನಿಗಳು ಕ್ಷೇತ್ರದಲ್ಲಿ ಆಶ್ಲೇಷ ಬಲಿ ಮಂಟಪ ನಿರ್ಮಿಸಲು ಮುಂದೆ ಬಂದರು. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ...