Saturday, April 6, 2024

ಅಮಲು ಪದಾರ್ಥಗಳ ವಿರುದ್ಧ ಜಾಗ್ರತಿ ಅಭಿಯಾನಕ್ಕೆ ಮಿತ್ತಬೈಲ್ ಜಮಾತ್ ನಿಂದ ಚಾಲನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳ್ಳಾಲ ನಂತರ ಅತ್ಯಂತ ದೊಡ್ಡ ಜಮಾತ್ ಆಗಿರುವ ಬಂಟ್ವಾಳ ತಾಲೂಕಿನ ಮಿತ್ತಬೈಲ್ ಜಮಾತ್ ಅಮಲು ಪದಾರ್ಥಗಳ ವಿರುದ್ಧ ಜಾಗ್ರತಿ ಅಭಿಯಾನಕ್ಕೆ ಚಾಲನೆ ನೀಡಿದ್ದು, ದಿಟ್ಟ ಮತ್ತು ಶ್ಲಾಘನೀಯ ಕಾರ್ಯವಾಗಿದೆ.

ಕಳೆದ ಒಂದು ತಿಂಗಳ ಹಿಂದೆ ಮಿತ್ತಬೈಲ್ ಜಮಾತ್ ಗೆ ಒಳಪಟ್ಟ ಶಾಂತಿ ಅಂಗಡಿ ಯುವಕ ಆಸೀಫ್ ಅಮಲು ಪದಾರ್ಥಗಳ ವಿಷಯದಲ್ಲಿ ನಡೆದ ಸಣ್ಣ ಗಲಾಟೆಯಲ್ಲಿ ಮೃತನಾಗಿದ್ದನು. ಅದೇ ರೀತಿ 2 ದಿವಸ ಮೊದಲು ಮತ್ತಿಬ್ಬರು ಗಾಂಜಾ ವ್ಯಸನಿಗಳ ಹಾವಳಿಗೆ ಆಸ್ಪತ್ರೆ ಸೇರುವಂತಾಯಿತು. ಇದೀಗ ಜಮಾತ್ ನ ಈ ಅಭಿಯಾನದಲ್ಲಿ ಮಾದಕ ದ್ರವ್ಯ ವ್ಯಸನಿಗಳ ಜೊತೆ ಸಮಾಲೋಚನೆ, ಅದೇ ರೀತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಮಾದರಿ ನಡೆಯಾಗಿದೆ.

ಮಿತ್ತಬೈಲ್ ಜಮಾತ್ ನಲ್ಲಿ ಮುದರಿಸ್ ಆಗಿರುವ ಉಮರ್ ಫಾರೂಕ್ ಫೈಝಿ ಚಾಲನೆ ನೀಡಿದರು.

ಜಮಾತ್ ಅಧ್ಯಕ್ಷರಾಗಿರುವ ಹಾಜಿ ಮೊಹಮ್ಮದ್ ಸಾಗರ್,ಉಪಾಧ್ಯಕ್ಷರಾದ ಅಬ್ದುಲ್ ರಹಿಮಾನ್, ನುಸ್ರತ್ ಮಿಲದುನ್ನೆಬಿ ಸಂಘದ ಅಧ್ಯಕ್ಷರಾದ ಹನೀಫ್, ಜಮಾತ್ ಸದಸ್ಯರು ಮತ್ತು ನಾಗರಿಗರು ಪಾಲ್ಗೊಂಡಿದ್ದರು.

ಅದೇ ರೀತಿ ಮಿತ್ತಬೈಲ್ ಜಮಾತ್ ಗೆ ಒಳಪಟ್ಟ ತಾಳಿಪಡ್ಪು ಮಸೀದಿಯಲ್ಲಿ ಇರ್ಷಾದ್ ಫೈಝಿ ಚಾಲನೆ ನೀಡಿದರು.

More from the blog

ನೀತಿ ಸಂಹಿತೆ ಇರುವಾಗ ಆಶ್ಲೇಷ ಬಲಿ ಮಂಟಪ ಕಾಮಗಾರಿ ಆರಂಭ ಸಮರ್ಪಕವಲ್ಲ- ಹರೀಶ್ ಇಂಜಾಡಿ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಹಿಂದಿನ ಆಡಳಿತ ಮಂಡಳಿಯ ಕೊನೇ ದಿನಗಳಲ್ಲಿ ದಾನಿಗಳು ಕ್ಷೇತ್ರದಲ್ಲಿ ಆಶ್ಲೇಷ ಬಲಿ ಮಂಟಪ ನಿರ್ಮಿಸಲು ಮುಂದೆ ಬಂದರು. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ...

ಪ್ರಧಾನಿ ಮೋದಿ ಕರೆ : ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ  ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ “ಮೆಹಂದಿ ಅಭಿಯಾನ" ನಡೆಸುವಂತೆ ಸೂಚನೆ ನೀಡಿದ್ದಾರೆ. ಜತೆಗೆ ಮೋದಿ...

ದಿನದಿಂದ ದಿನಕ್ಕೆ ಏರುತ್ತಿದೆ ತಾಪಮಾನ : ಕಡಬ, ಅಜೆಕಾರಿನಲ್ಲಿ ದಾಖಲೆಯ ಉಷ್ಣಾಂಶ

ಮಂಗಳೂರು: ಮುಂದಿನ ಎರಡು ದಿನಗಳ ಕಾಲ ಬಿಸಿಲಿನ ಶಾಕ ಮತ್ತಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ ಕರಾವಳಿ ಭಾಗದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಎ. 4ರಿಂದ 5ರ...

ಮತದಾನ ಜಾಗೃತಿ ಅಂಗವಾಗಿ ಸೆಲ್ಫಿ, ಸಹಿ ಅಭಿಯಾನಕ್ಕೆ ಚಾಲನೆ

ಮತದಾರರರಲ್ಲಿ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಬಂಟ್ವಾಳ ತಾಲೂಕು ಪಂಚಾಯತ್, ತಾಲೂಕು ಆಡಳಿತ ಮತ್ತು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಎ‌.5ರಂದು ಸೆಲ್ಫಿ, ಸಹಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ...