ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ತಾಲೂಕು ಬಾಲಭವನ ಸೊಸೈಟಿ ಬಂಟ್ವಾಳ ಇದರ ಸಂಯುಕ್ತ ಆಶ್ರಯದಲ್ಲಿ 2022-23ನೇ ಸಾಲಿನ ಗಾಂಧೀ ಜಯಂತಿ ದಿನಾಚರಣೆಯ ಅಂಗವಾಗಿ ಚಿತ್ರಕಲಾ ಸ್ಪರ್ಧೆಯು ಅ.03 ರಂದು ಮಂಚಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಪ್ರಾಸ್ತಾವಿಕ ಮಾತುಗಳನ್ನಾಡಿ, ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ಬಾಯಿ.ಹೆಚ್ ರವರು ಈ ಚಿತ್ರಕಲಾ ಸ್ವರ್ಧೆಯು ಮಕ್ಕಳಿಗೆ ಇರುವ ಕಲೆಯ ಅಭಿ ರುಚಿಯನ್ನು ವ್ಯಕ್ತಪಡಿಸುತ್ತದೆ. ರಜೆಯ ಸಂದರ್ಭದಲ್ಲಿಯೂ ಸ್ಪರ್ಧೆಗೆ ಬಹಳ ಉತ್ಸಾಹದಿಂದ ಸ್ಪರ್ಧಿಸಲು ಮಕ್ಕಳು ಹಾಜರಾಗುವುದು ಸಂತಸದ ವಿಷಯ ಎಂದು ನುಡಿದರು. ಸ್ಪರ್ಧೆಯ ರೀತಿ ಹಾಗೂ ಉದ್ದೇಶಗಳನ್ನು ಎಲ್ಲರಿಗೂ ತಿಳಿಸಿದರು.
ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪ ಕಾಮತ್ ಅವರು ಇಂತಹ ಉತ್ತಮ ಕಾರ್ಯಕ್ರಮ ನಮ್ಮ ಗ್ರಾಮ ಪಂಚಾಯತ್ ನಲ್ಲಿ ಆಯೋಜಿಸಿರುವುದು ಬಹಳ ಸಂತಸ ತಂದಿದೆ. ಇನ್ನು ಮುಂದೆಯೂ ಇಂತಹ ಕಾರ್ಯಕ್ರಮ ನಡೆಸುವುದಾದಲ್ಲಿ ನಮ್ಮಿಂದ ಪೂರ್ಣ ರೀತಿಯ ಸಹಕಾರ ನೀಡಲು ಸದಾ ಸಂತಸದಿಂದ ಒಪ್ಪಿಕೊಳುತ್ತೀವೆ ಎಂದು ನುಡಿದರು.
ಸ್ಪರ್ಧೆಗೆ ತೀರ್ಪುಗಾರರಾಗಿ ಆಗಮಿಸಿದ ಉಪನ್ಯಾಸಕ ಮುರುಳಿಕೃಷ್ಣ ಹಾಗೂ ಶ್ರೀ ಚೆನ್ನಕೇಶವ ಚಿತ್ರಕಲಾ ಶಿಕ್ಷಕರು, ಮಕ್ಕಳ ಚಿತ್ರಕಲಾ ಸ್ಪರ್ಧೆಯನ್ನು ನಡೆಸಿಕೊಟ್ಟರು.
ಇನ್ನು ಈ ಸ್ಪರ್ಧೆಯಲ್ಲಿ 5 ವರ್ಷದಿಂದ 8, 9-12, 13-16 ವರ್ಷ ಎಂದು 3 ಹಂತಗಳಲ್ಲಿ ಗಾಂಧೀಜಿಯ ಚಿತ್ರ ಬಿಡಿಸುವ ಮೂಲಕ ಸ್ಪರ್ಧೆ ನಡೆಸಲಾಯಿತು. 3 ಹಂತಗಳಲ್ಲಿಯೂ ಮಕ್ಕಳಿಗೆ ನಗದು ಬಹುಮಾನವನ್ನು ವಿತರಿಸಲಾಯಿತು. ಉಳಿದ ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರ ವಿತರಿಸಲಾಯಿತು. ಇನ್ನು ಸ್ಪರ್ಧೆಯಲ್ಲಿ ಒಟ್ಟು 53 ಮಕ್ಕಳು ಭಾಗವಹಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಮಂಚಿ ಹಾಗೂ ಸಾಲೆತ್ತರ್ನ ಸಿ.ಆರ್.ಪಿ ಯವರಾದ ಮಲ್ಲಿಕಾರ್ಜುನ ಹಾಗೂ ಇಂದಿರಾ, ವಿಟ್ಲ ಶಿಶು ಅಭಿವೃದ್ಧಿ ಯೋಜನಾ ಕಛೇರಿಯಿಂದ ಹಿರಿಯ ಮೇಲ್ವಿಚಾರಕಿ ಶಾರದಾ, ಮೇಲ್ವಿಚಾರಕಿ ಲೀಲಾವತಿ, ವಿವಿಧ ಶಾಲಾ ಅಧ್ಯಾಪಕರು, ಮಕ್ಕಳು, ಪೋಷಕರು, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬಂಟ್ವಾಳ ಮೇಲ್ವಿಚಾರಕಿ ಗುಣವತಿಯವರು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ವಿಟ್ಲ ಮೇಲ್ವಿಚಾರಕಿ ಲೋಲಾಕ್ಷಿ ಕಾರ್ಯಕ್ರಮ ನಿರುಪಿಸಿದರು. ಬಂಟ್ವಾಳ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿಲಾವತಿಯವರು ವಂದಿಸಿದರು.