Saturday, April 6, 2024

ಮಾನಸಿಕ ಅಸ್ವಸ್ಥತೆಯ ಚಿಕಿತ್ಸೆಗೆ ನೆರವಾದ ಧರ್ಮ ಮ್ರತ್ಯುಂಜಯ ತುಳುನಾಡ್ ತಂಡ

ಬಂಟ್ವಾಳ: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಇದೀಗ ಬಲದ ಭಾಗದಲ್ಲಿ ಬಲಹೀನಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಗೆ ಧರ್ಮ ಮ್ರತ್ಯುಂಜಯ ತುಳುನಾಡ್ ತಂಡದ ಯುವಕರು ಭವತಿ ಬಿಕ್ಷಂದೇಹಿ ಅಭಿಯಾನದ ಮೂಲಕ ಸಂಗ್ರಹಿಸಿದ ಧನ ಸಹಾಯವನ್ನು ಯುವತಿ ಕುಟುಂಬಕ್ಕೆ ಹಸ್ತಾಂತರಿಸಿದರು.

ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಕಡಮಾಜೆ ನಿವಾಸಿಯಾಗಿರುವ ಪ್ರಮೀಳ ಎಂಬ ಯುವತಿ ಸುಮಾರು ವರ್ಷಗಳಿಂದ ಮಾನಸಿಕಳಾಗಿದ್ದು ಇದೀಗ ಬಲದ ಭಾಗದಲ್ಲಿ ಬಲಹೀನಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ತೀರ ಬಡತನದಲ್ಲಿದ್ದ ಈ ಬಡ ಕುಟುಂಬಕ್ಕೆ ಹಣ ಸಂಗ್ರಹಕೋಸ್ಕರ ಬಂಟ್ವಾಳ ದಸರಾದಲ್ಲಿ ಧರ್ಮ ಮ್ರತ್ಯುಂಜಯ ತುಳುನಾಡ್ ತಂಡದ ಯುವಕರು ಅ. 6 ರಂದು ಭವತಿ ಬಿಕ್ಷಂದೇಹಿ ಅಭಿಯಾನದ ಮೂಲಕ  ಸಂಗ್ರಹವಾದ ಒಟ್ಟು ಮೊತ್ತ 15,340 ರೂ ಗಳನ್ನು ಪ್ರಮೀಳ ಕುಟುಂಬಕ್ಕೆ ಭಜರಂಗದಳ ಬಂಟ್ಟಾಳ ಪ್ರಖ೦ಡ ಸಹಸಂಚಾಲಕ ಸಂತೋಷ ಸರಪಾಡಿ ಹಾಗೂ ಬಂಟ್ಟಾಳ ಪ್ರಖಂಡ ಸೇವಾ ಪ್ರಮುಖ ಪ್ರಸಾದ್ ಬೆಂಜನಪದವು ಹಾಗೂ ಸರಪಾಡಿ ಖಂಡ ಸಮಿತಿ ವಿಶ್ವ ಹಿಂದೂ ಪರಿಷದ್ ಕಾರ್ಯದಶಿ೯ ಪ್ರಶಾಂತ್ ಕೊಟ್ಟಾರಿ ಹಾಗೂ ಭವತಿ ಭಿಕ್ಷಾದೇಹಿ ಸಿಂತಾನಿಕಟ್ಟೆ ಪೂಪಾಡಿಕಟ್ಟೆ ತಂಡದ ಕಾರ್ಯಕರ್ತರು ಹಾಗೂ ಧರ್ಮ ಮೃತ್ಯುಂಜಯ ತುಳುನಾಡ್ ತಂಡದ ಸಕ್ರೀಯ ಕಾರ್ಯಕತ೯ರ ಉಪಸ್ಥಿತಿಯಲ್ಲಿ ಹಸ್ತಾಂತರಿಸಲಾಯಿತು.

More from the blog

ಗ್ರಾಮೀಣ ಪುನರ್ವಸತಿ ಕಾರ್ಯಕತರಿಗೆ ಮತದಾನ ಜಾಗೃತಿ

ಬಂಟ್ವಾಳ ತಾಲೂಕು ಪಂಚಾಯತ್, ತಾಲೂಕು ಕಚೇರಿ ಹಾಗೂ ತಾಲೂಕು ಸ್ವೀಪ್ ಸಮಿತಿಯಿಂದ ಗ್ರಾಮೀಣ ಪುನರ್ವಸತಿ ಕಾರ್ಯಕತರಿಗೆ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ತಾಲೂಕು ಆಡಳಿತ ಸೌಧದಿಂದ ಹಮ್ಮಿಕೊಂಡ ಜಾಥಾ ಬಿ.ಸಿ.ರೋಡ್ ಖಾಸಗಿ ಬಸ್ ನಿಲ್ದಾಣ...

ಭಾರತೀಯ ಜನತಾ ಪಾರ್ಟಿ ಸ್ಥಾಪನಾ ದಿನದ ಅಂಗವಾಗಿ ಬಂಟ್ವಾಳ ಮಂಡಲ ಬಿಜೆಪಿ ಕಾರ್ಯಾಲಯದಲ್ಲಿ ಧ್ವಜಾರೋಹಣ

ಭಾರತೀಯ ಜನತಾ ಪಾರ್ಟಿ ಸ್ಥಾಪನಾ ದಿನದ ಅಂಗವಾಗಿ ಬಂಟ್ವಾಳ ಮಂಡಲದ ಅಧ್ಯಕ್ಷರಾದ ಆರ್ ಚೆನ್ನಪ್ಪ ಕೋಟ್ಯಾನ್ ಅವರು ಮಂಡಲ ಬಿಜೆಪಿ ಕಾರ್ಯಾಲಯದಲ್ಲಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ದೇವಪ್ಪ ಪೂಜಾರಿ,ರವೀಶ್ ಶೆಟ್ಟಿ, ಡೊಂಬಯ...

ರಾಜ್ಯದಲ್ಲಿ 60 ಮಂದಿಯ ನಾಮಪತ್ರ ತಿರಸ್ಕೃತ

ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯದ ಮೊದಲ ಹಂತದ 14 ಕ್ಷೇತ್ರಗಳಲ್ಲಿ 358 ಅಭ್ಯರ್ಥಿಗಳು 492 ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ 13 ಕ್ಷೇತ್ರದಲ್ಲಿ ಪರಿಶೀಲನೆ ಕಾರ್ಯ ಮುಗಿದಿದೆ. 276 ನಾಮಪತ್ರಗಳು ಕ್ರಮಬದ್ಧವಾಗಿದ್ದು, 60 ನಾಮಪತ್ರಗಳು...

ಮಂಗಳೂರು: ‘ಸ್ವೀಟ್ ಸಿಂಫನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್’ ಸಂಸ್ಥೆಯ ಸಂಗೀತ ಕ್ಷೇತ್ರದಲ್ಲಿ ಸಂಪುಟ 2′ ರ ನೂತನ ಕೃತಿ ಲೋಕಾರ್ಪಣೆ

ಮಂಗಳೂರು: ಮಂಗಳೂರಿನ ಕುಲಶೇಖರದಲ್ಲಿರುವ 'ಸ್ವೀಟ್ ಸಿಂಫನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್' ಸಂಸ್ಥೆಯ ಪ್ರಕಾಶನದಲ್ಲಿ ಇಂಗ್ಲಿಷ್, ಹಿಂದಿ ಮತ್ತು ಕನ್ನಡದ ಜನಪ್ರಿಯ ಹಾಡುಗಳನ್ನು ಪಾಶ್ಚಿಮಾತ್ಯ ನೊಟೇಶನ್ ಮೂಲಕ ವಯಲಿನ್, ಗಿಟಾರ್ ಮತ್ತು ಕೀಬೋರ್ಡ್ ನಲ್ಲಿ...