ಮಂಗಳೂರು: ದುಬೈಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ದಾರಣ ಘಟನೆ ನಡೆದಿದೆ.

ಮುಕ್ಕ ನಿವಾಸಿ ಮುಹಮ್ಮದ್ ಮೃತ ಪಟ್ಟ ದುಧೈವಿ ಎಂದು ತಿಳಿದು ಬಂದಿದೆ.
ದುಬೈಯಲ್ಲಿ ಮಗಳ ಮನೆಯಲ್ಲಿದ್ದ ಪತ್ನಿಯನ್ನು ಭೇಟಿಯಾಗಿ ಹಿಂತಿರುಗಿದ್ದ ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದು ಎಮಿಗ್ರೇಶನ್ ವಿಭಾಗದಲ್ಲಿ ನಿರ್ಗಮನದ ಮೊಹರು ಹಾಕಲು ಅಧಿಕಾರಿಗಳಿಗೆ ಪಾಸ್‌ಪೋರ್ಟ್ ನೀಡಿ ಅಲ್ಲೇ ನಿಂತಿದ್ದರು. ಈ ವೇಳೆ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ.
ಕೂಡಲೇ ಅವರನ್ನು ವಿಮಾನ ನಿಲ್ದಾಣದ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆ ವೇಳೆಗಾಗಲೇ ಅವರು ಸಾವನ್ನಪ್ಪಿದ್ದರು ಎಂದು ವೈದ್ಯರು ಮಾಹಿತಿ ನೀಡಿರುವುದಾಗಿ ಮುಹಮ್ಮದ್ ಅವರ ಸಹೋದರಿಯ ಪತಿ ಶರೀಫ್ ತಿಳಿಸಿದ್ದಾರೆ.