ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಕಂದಾಯ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ ದಾಸ್ತಾನಿರಿಸಿದ ಸುಮಾರು 100 ಮೆಟ್ರಿಕ್ ಟನ್ ಮರಳನ್ನು ವಶಪಡಿಸಿಕೊಂಡ ಘಟನೆ ಬಂಟ್ವಾಳ ತಾಲೂಕಿನ ದೇವರಪಾಲ್ ಪುದುವಿನಲ್ಲಿ ನಡೆದಿದೆ.

ಸ್ಥಳೀಯರು ನೀಡಿದ ದೂರಿನನ್ವಯ ಮರಳು ದಾಸ್ತಾನು ಇಟ್ಟಿದ್ದ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ದೋಣಿ, ತುಂಬಿಸಿಟ್ಟ 2 ಲೋಡ್ ಮರಳು ಹಾಗೂ ಇದಕ್ಕೆ ಸಂಬಂಧಪಟ್ಟ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ವಶಪಡಿಸಿಕೊಂಡ 100 ಮೆಟ್ರಿಕ್ ಟನ್ ಮರಳು ಮುಟ್ಟುಗೋಲು ಹಾಕಲಾಗಿದೆ.