ಟಿ20 ವಿಶ್ವಕಪ್ ಟೂರ್ನಿಯಿಂದ ವೆಸ್ಟ್ ಇಂಡೀಸ್ನ ಸ್ಫೋಟಕ ಬ್ಯಾಟ್ಸ್ಮನ್, ಶಿಮ್ರಾನ್ ಹೆಟ್ಮಾಯರ್ ಔಟ್ ಆಗಿದ್ದಾರೆ.

ಹೌದು ಈಗಾಗಲೇ ಆಸ್ಟ್ರೇಲಿಯಾ-ವೆಸ್ಟ್ ಇಂಡೀಸ್ ನಡುವೆ ಟಿ20 ಸರಣಿ ಆರಂಭವಾಗಿದೆ. ಈ ಸರಣಿ ನಂತರ ವೆಸ್ಟ್ ಇಂಡೀಸ್ ತಂಡ ಆಸ್ಟ್ರೇಲಿಯಾದಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಟೆಸ್ಟ್ ಸರಣಿ ನಂತರ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲಿದೆ.
ಆದ್ರೆ ಇದೇ ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಶುರುವಾಗಲಿದೆ. ಈ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳುತ್ತಿವೆ. ಆದ್ರೆ ಆಸ್ಟ್ರೇಲಿಯಾ ಫ್ಲೈಟ್ ಮಿಸ್ ಮಾಡಿಕೊಂಡ ಕಾರಣ ಹಟ್ಮಾಯರ್ರನ್ನ ವಿಶ್ವಕಪ್ ತಂಡದಿಂದ ಕೈ ಬಿಡಲಾಗಿದೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.