Sunday, April 14, 2024

ಸರಳವಾಸ್ತು ಗುರೂಜಿ ಚಂದ್ರಶೇಖರ ಹತ್ಯೆ ಪ್ರಕರಣ : ಹತ್ಯೆಗೆ ಕಾರಣ ಬಿಚ್ಚಿಟ್ಟ ಹಂತಕರು

ಹುಬ್ಬಳ್ಳಿ: ಸರಳವಾಸ್ತು ಗುರೂಜಿ ಚಂದ್ರಶೇಖರ ಹತ್ಯೆ ಪ್ರಕರಣದ ಬಗ್ಗೆ ಹಂತಕರು ಹತ್ಯೆಗೆ ಪ್ರಮುಖ ಕಾರಣ ಏನು ಎಂಬುನ್ನು ಬಿಚ್ಚಿಟ್ಟಿದ್ದಾರೆ.

ಚಂದ್ರಶೇಖರ ಗುರೂಜಿ ಕಂಪನಿಗೆ ಕಷ್ಟಪಟ್ಟು ದುಡಿದವರು ನಾವು. ಕಂಪನಿ ಅಭಿವೃದ್ದಿಯಾಗಲು ನಾವು ಕಷ್ಟಪಟ್ಟಿದ್ದೇವೆ. ಆದರೆ ಗುರೂಜಿ ಕಂಪನಿಯೊಳಕ್ಕೆ ಅಣ್ಣನ ಮಕ್ಕಳನ್ನು ಬಿಟ್ಟುಕೊಂಡಿದ್ದಕ್ಕೆ ಬೇಸತ್ತು ಹತ್ಯೆ ಮಾಡಿದೆವು ಎಂದು ಸರಳವಾಸ್ತು ಗುರೂಜಿ ಹಂತಕರು ಕಾರಣ ಬಿಚ್ಚಿಟ್ಟಿದ್ದಾರೆ. ಏಕೆ ನಿಮ್ಮ ಅಣ್ಣನ ಮಕ್ಕಳು ಕಂಪನಿಗೆ ಎಂಟ್ರಿ ಕೊಟ್ಟರು..? ಅಣ್ಣನ ಮಕ್ಕಳು ಎಂಟ್ರಿ ಬಳಿಕ ನಿಮ್ಮ ಅವನತಿ ಪ್ರಾರಂಭವಾಗಿದೆ. ಕಂಪನಿಯಿಂದ 400 ಜನರನ್ನ ಏಕಾಏಕಿ ತೆಗೆದು ಹಾಕಿದಿರಿ. ಸಿಬ್ಬಂದಿಯ ಶಾಪ ನಿಮ್ಮನ್ನ ಸುಮ್ನೆ ಬಿಡುವುದಿಲ್ಲ ಎಂದು ಗೂರುಜಿ ಹಂತಕರು ವಾಟ್ಸಪ್‌ಗೆ ಮೆಸೇಜ್ ಕಳುಹಿಸಿದ್ದರು.

ಡಿಯರ್ ಗುರೂಜಿ… ನೀವು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಸಿಬ್ಬಂದಿಗೆ ಎರಡನೇ ತಂದೆಯಾಗಿದ್ದಿರಿ. ನಿಮ್ಮ ಏಳಿಗೆಗಾಗಿ ನಾವು ಕಷ್ಟಪಟ್ಟು ದುಡಿದ್ವಿ. ಆದರೆ ಯಾವಾಗ ನಿಮ್ಮ ಅಣ್ಣ ಮಕ್ಕಳು ಕಂಪನಿಗೆ ಎಂಟ್ರಿ ನೀಡಿದರೋ ಆಗ ಎಲ್ಲವೂ ಬದಲಾಯಿತು. ನೀವು ಸಿಬ್ಬಂದಿಯನ್ನು ಮಕ್ಕಳಂತೆ ಕಾಣುತ್ತಿದ್ದಿರಿ. ಆದರೆ ನಿಮ್ಮ ಅಣ್ಣ ಮಕ್ಕಳು ನಿಮ್ಮನ್ನು ಮತ್ತು ನಮ್ಮನ್ನು ಬೇರೆ ಮಾಡಲು ಸ್ಟಾರ್ಟ್ ಮಾಡಿದರು. ನಿಮ್ಮ ಅಣ್ಣ ಮಕ್ಕಳು ಯಾವಾಗ ಕಂಪನಿಗೆ ಬಂದರೋ ಆಗ ನಿಮ್ಮ ‌ಅವನತಿ‌ ಆರಂಭವಾಯಿತು. ನೀವು ನಮ್ಮ ಪಾಲಿನ ದೇವರು ಅಂತ ತಿಳಿದುಕೊಂಡಿದ್ವಿ. ನಿಮಗೆ ನಾವು ಏನು ಮಾಡಿದ್ವಿ? ನಮ್ಮ ಕಣ್ಣೀರು ನಿಮ್ಮನ್ನಾ ಕ್ಷಮಿಸೋದಿಲ್ಲ. 400 ಜನ ಸಿಬ್ಬಂದಿಗಳನ್ನು ಕೆಲಸದಿಂದ ತೆಗದುಹಾಕಿದ್ರಿ, ಅವರ ಕಣ್ಣೀರು ಸುಮ್ಮನೆ ಬಿಡೋದಿಲ್ಲ. ಆದರೂ ನಿಮಗೆ ನಾವು ಒಳ್ಳೆಯದನ್ನೆ ಬಯಸುತ್ತೀವಿ.

ಗುರೂಜಿ ಹತ್ಯೆ ಆರೋಪಿ ಮಂಜುನಾಥ ಮರೆವಾಡ ಗುರೂಜಿಗೆ ಮಾಡಿದ್ದ ವಾಟ್ಸ್ ಆಪ್ ಮೇಸೆಜ್ ಅನ್ನು ಉಲ್ಲೇಖಿಸಿ, ಹುಬ್ಬಳ್ಳಿ ಪೊಲೀಸರು ಸಲ್ಲಿಸಿರುವ ಜಾರ್ಜ್ ಶೀಟ್ ನಲ್ಲಿ ಈ ಅಂಶಗಳೆಲ್ಲಾ ಅಡಕವಾಗಿದೆ.

More from the blog

ಪ್ರಧಾನಿ ಮೋದಿ ರೋಡ್ ಶೋ ಸಮಯ ಬದಲಾವಣೆ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಸಮಯದಲ್ಲಿ ಬದಲಾವಣೆಯಾಗಿದ್ದು, ಏ.14ರಂದು ಸಂಜೆ 7.45ಕ್ಕೆ ರೋಡ್ ಶೋ ಆರಂಭವಾಗಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಚುನಾವಣಾ ಸಂಚಾಲಕ ವಿ. ಸುನಿಲ್ ಕುಮಾರ್...

ಆಟವಾಡುತ್ತಾ ಜಮೀನಿನಲ್ಲಿದ್ದ ಬೋರ್‌ವೆಲ್​ಗೆ ಬಿದ್ದ 6 ವರ್ಷದ ಬಾಲಕ

ಆರು ವರ್ಷದ ಬಾಲಕನೋರ್ವ ತೆರೆದ ಬೋರ್​ವೆಲ್ ಒಳಕ್ಕೆ ಬಿದ್ದ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ಬೆಳಕಿಗೆ ಬಂದಿದೆ. ಬೋರ್​ವೆಲ್​ಗೆ ಬಿದ್ದ ಬಾಲಕನನ್ನು ರೇವಾ ಜಿಲ್ಲೆಯ ಜಾನೆ ಪೊಲೀಸ್ ಠಾಣೆ ವ್ಯಾಪ್ತಿಯ ಮಾಣಿಕಾ ಗ್ರಾಮದ ಮಯಾಂಕ್ ಎಂದು...

ಇಂದಿನಿಂದ ಅಂಚೆ ಮತದಾನ ಪ್ರಾರಂಭ

ಇಂದಿನಿಂದ 85 ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನರಿಂದ ಅಂಚೆ ಮತದಾನ ನಡೆಯಲಿದೆ. ಏಪ್ರಿಲ್ 18ರವರೆಗೆ ಮನೆಯಿಂದಲೇ ಗೌಪ್ಯ ಮತದಾನಕ್ಕೆ ಅವಕಾಶ ಮಾಡಲಾಗಿದೆ. ಇಂದಿನಿಂದ ಏಪ್ರಿಲ್ 18ರವರೆಗೆ ಮನೆಯಿಂದಲೇ ಗೌಪ್ಯ ಮತದಾನಕ್ಕೆ ಅವಕಾಶವಿದೆ. ಬೆಂಗಳೂರು...

ಕುಮಾರಧಾರಾ ನದಿಯಲ್ಲಿ ಮೊಸಳೆ ಮೃತದೇಹ ಪತ್ತೆ

ಸುಬ್ರಹ್ಮಣ್ಯ: ಕುಮಾರಧಾರಾ ನದಿಯ ಪಂಜ – ಕಡಬ ಸಂಪರ್ಕ ರಸ್ತೆಯಲ್ಲಿ ಸಿಗುವ ಪುಳಿಕುಕ್ಕು ಸೇತುವೆಯ ಕೆಳಭಾಗದಲ್ಲಿ ಮೊಸಳೆಯ ಮೃತದೇಹ ಪತ್ತೆಯಾಗಿದೆ. ಶುಕ್ರವಾರ ನದಿಯ ಒಂದು ಬದಿಯ ನೀರಿನಲ್ಲಿ ಅಂದಾಜು 1.5 – 2 ವರ್ಷದ ಮೊಸಳೆಯ...