ರಸ್ತೆ ಗುಂಡಿ ಇದೆ ಎಚ್ಚರಿಕೆಯಿಂದ ಚಲಿಸಿ ಎಂಬುದಕ್ಕೆ ಥರ್ಮೋಕೋಲ್ ರಸ್ತೆಯ ಗುಂಡಿಯಲ್ಲಿ ಅಚ್ಚುಕಟ್ಟಾಗಿ ಇರಿಸಿ ಚಾಲಕರಿಗೆ ಸೂಚನಫಲಕವಾಗಿಸಿದ ಘಟನೆಯೊಂದು ಬಿಸಿರೋಡಿನಲ್ಲಿ ಇಂದು ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ಬೆಂಗಳೂರು ಮಂಗಳೂರಿನ ಬಿಸಿರೋಡಿನ ರಸ್ತೆಯ ಗುಂಡಿಯನ್ನು ಥರ್ಮೋಕೋಲ್ ನಿಂದ ಮುಚ್ಚಿ ಸದ್ಯ ಮೂಲಕ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಎಚ್ಚರಿಕೆ ನೀಡಿದಂತಾಗಿದೆ.
ಬಿಸಿರೋಡಿನ ಸರ್ಕಲ್ ನಿಂದ ಮುಂದೆ ರೈಲ್ವೆ ಮೇಲ್ಸತುವೆ ದಾಟಿ ಮುಂದೆ ಮಂಗಳೂರು ಹಾಗೂ ಬಿಸಿರೋಡು ಪೇಟೆಗೆ ಸರ್ವೀಸ್ ರಸ್ತೆಯನ್ನು ಪ್ರವೇಶ ಮಾಡಬೇಕಾದರೆ ಪ್ರಾಣ ಹಿಂಡುವ ಬೃಹತ್ ಗುಂಡಿಗೆ ಬಿದ್ದು ಎದ್ದು ಹೋಗಬೇಕು. ಈ ಗುಂಡಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಅನೇಕ ತಿಂಗಳಿನಿಂದ ಇದ್ದು ಅನೇಕ ಬಾರಿ ಮಾಧ್ಯಮ ಗಳು ಹೆದ್ದಾರಿ ಇಲಾಖೆ ಯ ಗಮನಕ್ಕೆ ತಂದಿದೆಯಾದರೂ ಇಲಾಖೆ ಎಚ್ಚೆತ್ತುಕೊಂಡಿಲ್ಲ.
ಈ ಗುಂಡಿಯ ಅವಾಂತರದಿಂದಾಗಿ ಇಲ್ಲಿ ಟ್ರಾಫಿಕ್ ಜಾಮ್ ಕೂಡ ಉಂಟಾಗುತ್ತಿದೆ.
ಈ ಎಲ್ಲಾ ಕಾರಣಗಳಿಂದ ಬೇಸತ್ತ ಬಿಸಿರೋಡಿನ ಜನತೆ ಕೊನಗೂ ಬೇರೆ ವಿಧಿಯಿಲ್ಲದೆ ಥರ್ಮೋಕೋಲ್ ಗಳನ್ನು ಸಾಲಾಗಿ ರಸ್ತೆಯ ಗುಂಡಿಯಲ್ಲಿರಿಸಿ ಇಲಾಖೆಗೆ ಮತ್ತೊಮ್ಮೆ ನೆನಪಿಸುವ ಕೆಲಸ ಮಾಡಿದೆ.
ಇನ್ನಾದರೂ ಇಲಾಖೆ ಎಚ್ಚೆತ್ತುಕೊಳ್ಳುತ್ತಾ? ಕಾದುನೋಡಬೇಕಾಗಿದೆ….
