ಹಿಂದು ಜಾಗರಣ ವೇದಿಕೆ ರುದ್ರಗಿರಿ ಘಟಕ ಕಾರಿಂಜ ಬಂಟ್ವಾಳ ತಾಲೂಕು ಇದರ ವತಿಯಿಂದ ಕಾರಿಂಜ ಕ್ರಾಸ್ ವಗ್ಗದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಾರ್ವಜನಿಕ ಬಸ್ ತಂಗುದಾಣ ಮತ್ತು ಭಗವಧ್ವಜ ಕಟ್ಟೆ ಉದ್ಘಾಟನೆಗೊಂಡಿತು.

ಹಿಂ.ಜಾ.ವೇ.ರಾಜ್ಯ ಪ್ರಮುಖ ರವಿರಾಜ್ ಬಿಸಿರೋಡ್ ಮಾತನಾಡಿ ಹಿಂದೂ ಜಾಗರಣ ವೇದಿಕೆಯ ಸ್ಥಳೀಯ ಕಾರ್ಯಕರ್ತರನ್ನು ಮತ್ತು ಸಹಕರಿಸಿದ ಎಲ್ಲರನ್ನು ಅಭಿನಂದಿಸುತ್ತಾ ಸ್ವಚ್ಛ ಸದೃರುಡ ಸಮಾಜ ನಿರ್ಮಾಣದತ್ತ ಗಮನಹರಿಸುವಂತೆ ಕರೆನೀಡಿದರು.
ಜಿಲ್ಲಾ ಸಹ ಸಂಯೋಜಕರಾದ ನರಸಿಂಹ ಮಾಣಿ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತ ಶ್ರೀ ಕ್ಷೇತ್ರ ಕಾರಿಂಜದ ಸಂರಕ್ಷಣೆ ಮತ್ತು ಅದಕ್ಕೆ ಪೂರಕವಾಗಿ ಸಮಾಜ ಜಾಗೃತಗೊಂಡು ಕೆಲಸಮಾಡುವತ್ತ ಮುಂದಾಗಬೇಕು ಮತ್ತು ಯಾವುದೇ ಒಳ್ಳೆಯ ಕೆಲಸಮಾಡುವಾಗ ಕೊಂಕು ಮಾತುಗಳು ಅಪಹಾಸ್ಯಗಳು ಸರ್ವೇ ಸಾಮಾನ್ಯ ಅವುಗಳನ್ನೆಲ್ಲ ನಿರ್ಲಕ್ಷಿಸಿ ಸದೃರುಡ ಸಮಾಜ ನಿರ್ಮಾಣದತ್ತ ಮುಂದಾಗೋಣ ಎಂದು ನೂತನ ಸಾರ್ವಜನಿಕ ಬಸ್ಸು ತಂಗುದಾಣದ ನಿರ್ಮಾಣದಲ್ಲಿ ಕೈಜೋಡಿಸಿದ ಎಲ್ಲರಿಗು ಅಭಿನಂದಿಸಿದರು.
ಇದೆ ಸಂದರ್ಭದಲ್ಲಿ ಬಸ್ಸು ತಂಗುದಾಣದ ನಿರ್ಮಾಣದ ಕಾರ್ಯದಲ್ಲಿ ಹಗಲು ರಾತ್ರಿ ಶ್ರಮಿಸಿದ ಶರತ್ ಕುಮಾರ್ ಮತ್ತು ನಮಿತ್ ಬೊಲ್ಲೊಟ್ಟು ಇವರನ್ನು ಸಾರ್ವಜನಿಕರ ಪರವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹಿಂ.ಜಾ.ವೇ.ರಾಜ್ಯ ಪ್ರಮುಖರಾದ ರವಿರಾಜ್ ಬಿಸಿರೋಡ್ ,ವಿಭಾಗ ಪ್ರಮುಖರಾದ ರತ್ನಾಕರ್ ಶೆಟ್ಟಿ ಕಲ್ಲಡ್ಕ , ಅಜಿತ್ ಹೊಸಮನೆ, ಜಿಲ್ಲಾ ಸಹ ಸಂಯೋಜಕರಾದ ನರಸಿಂಹ ಮಾಣಿ, ಬಾಲಕೃಷ್ಣ ಕಲಾಯಿ ಹಾಗು ತಾಲೂಕು ಪ್ರಮುಖರು ಪರಿವಾರ ಸಂಘಟನೆಯ ಪ್ರಮುಖರು ಮತ್ತು ಸ್ಥಳೀಯ ಹಿರಿಯರು ಉಪಸ್ಥಿತರಿದ್ದರು.