ಸುಳ್ಯ: ಸ್ಕೂಟಿ ಮತ್ತು ಕಾರು ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟಿ ಯಲ್ಲಿದ್ದ ಅಣ್ಣ ಮತ್ತು ತಂಗಿ ಸಾವನ್ನಪ್ಪಿರುವ ದಾರುಣ ಘಟನೆ ಇಂದು ಸುಬ್ರಹ್ಮಣ್ಯ – ಜಾಲ್ಸೂರು ರಾಜ್ಯ ಹೆದ್ದಾರಿಯ ಸುಳ್ಯ ತಾಲೂಕಿನ ಎಲಿಮಲೆ ಸಮೀಪ ಸಂಭವಿಸಿದೆ.

ಕಡಪಾಲ ಬಾಜಿನಡ್ಕ ದೇವಿದಾಸ್ ಎಂಬವರ ಪುತ್ರ ನಿಶಾಂತ್ ಚಲಾಯಿಸುತ್ತಿದ್ದ ಸ್ಕೂಟಿ ಮತ್ತು ಮಾರುತಿ ಕಾರು ಮಧ್ಯೆ ಅಪಘಾತ ಸಂಭವಿಸಿದೆ. ಇನ್ನು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟಿ ಸವಾರ ನಿಶಾಂತ್ ಹಾಗೂ ಆತನ ಸಹೋದರಿ ಮೋಕ್ಷಾರನ್ನು ಸ್ಥಳೀಯರು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆದ್ರೆ ಆಸ್ಪತ್ರೆಗೆ ತಲುಪುವಷ್ಟರಲ್ಲೇ ನಿಶಾಂತ್ ಸಾವನ್ನಪ್ಪಿದ್ದರೆ, ಆತನ ತಂಗಿ ಮೋಕ್ಷಾಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಆಕೆಯೂ ಸಾವನ್ನಪ್ಪಿದಳೆಂದು ತಿಳಿದು ಬಂದಿದೆ.
ಸಧ್ಯ ಮೃತ ನಿಶಾಂತ್ ಸುಳ್ಯ ಜೂನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಮೋಕ್ಷಾ ದೇವಚಳ್ಳ ಸ.ಮಾ.ಹಿ.ಪ್ರಾ. ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಎಂದು ತಿಳಿದುಬಂದಿದೆ