Wednesday, September 27, 2023

ಗರ್ಭಿಣಿಯರಿಗೆ ಅವಹೇಳನ ಆರೋಪ : ಸಾಮಾಜಿಕ ಕಾರ್ಯಕರ್ತ ಅರೆಸ್ಟ್

Must read

ಮಂಗಳೂರು: ಚಿರತೆಯ ಮುಖವನ್ನು ಬಳಸಿ ಗರ್ಭಿಣಿಯರಿಗೆ ಅವಹೇಳನ ಮಾಡಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ಸುನಿಲ್ ಬಾಜಿಲಕೇರಿ ಅವರನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

ಸುನೀಲ್ ಬಜಿಲಕೇರಿ ಅವರು ಫೇಸ್‌ಬುಕ್‌ನಲ್ಲಿ ಗರ್ಭಿಣಿಯ ಫೋಟೋಗೆ ಚೀತಾದ ಮುಖ ಎಡಿಟ್ ಮಾಡಿ ‌ನಮೀಬಿಯಾ ಚೀತಾಗೆ ಸೀಮಂತ ಯಾವಾಗ..? ಎಂದು ಪೋಸ್ಟ್ ಹಾಕಿದ್ದರು. ಇದು ಗರ್ಭಿಣಿಯರಿಗೆ ಮತ್ತು ಭಾರತೀಯ ಸಂಸ್ಕೃತಿಗೆ ಮಾಡುವ ಅವಮಾನವಾಗಿದೆ ಎಂದು ಎಡಪದವು ಮೂಲದ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು.

ಈ ಹಿಂದೆ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಸುನೀಲ್ ಬಾಜಿಲಕೇರಿ , ಸದ್ಯ ಬಿಜೆಪಿ ನಾಯಕರು ಮತ್ತು ಬಿಜೆಪಿ ಸರ್ಕಾರದ ಕಟುಟೀಕಾಕರರಾಗಿದ್ದಾರೆ.

ಇನ್ನು ಕಳೆದ ವರ್ಷ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಂದರ್ಶನದ ಆಡಿಯೋ ತುಣುಕು ತಿರುಚಿದ ಪ್ರಕರಣದಲ್ಲಿ ಸುನೀಲ್ ಬಾಜಿಲಕೇರಿ ಅವರನ್ನು ಬಂಧಿಸಲಾಗಿತ್ತು

More articles

Latest article