Tuesday, September 26, 2023

ರಸ್ತೆ ದಾಟುತ್ತಿದ್ದ ನರಿಗೆ ಕಾರು ಡಿಕ್ಕಿ : ಸ್ಥಳದಲ್ಲೇ ನರಿ ಸಾವು

Must read

ಉಪ್ಪಿನಂಗಡಿ: ವಾಹನ ಡಿಕ್ಕಿಯಾಗಿ ನರಿಯೊಂದು ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ದೇರಾಜೆ ಕ್ರಾಸ್ ನಲ್ಲಿ ನಡೆದಿದೆ.

ಹೊಸಮಠ ಸಮೀಪದ ದೇರಾಜೆ ಕ್ರಾಸ್ ನಲ್ಲಿ ರಸ್ತೆ ದಾಟುತ್ತಿದ್ದ ನರಿಗೆ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ನರಿ ಸಾವನ್ನೊಪ್ಪಿದೆ ಎನ್ನಲಾಗಿದೆ.

ಇನ್ನು ಅರಣ್ಯಾಧಿಕಾರಿಗಳು ಮೃತ ನರಿಯ ಮೃತದೇಹವನ್ನು ವಿಲೇವಾರಿ ಮಾಡಿದ ಬಗ್ಗೆ ಸದ್ಯ ಮಾಹಿತಿ ಲಭಿಸಿಲ್ಲ. ಆದರೆ ಈ ಭಾಗದಲ್ಲಿ ಅರಣ್ಯ ಇಲಾಖೆ ಜಾಗೃತಿ ಸೂಕ್ತ ಸೂಚನಾ ಫಲಕ ಹಾಕಿದರೆ ಕಾಡು ಪ್ರಾಣಿಗಳು ಸಾವನ್ನೊಪ್ಪುವುದನ್ನು ತಡೆಯಬಹುದೆಂದು ಪರಿಸರ ಪ್ರೇಮಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

More articles

Latest article