ಉಡುಪಿ: ಚಾಲಕನ ಅಜಾಗರೂಕತೆಯಿಂದ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸಾವನ್ನಪ್ಪಿರುವ ಘಟನೆ ಶಿರ್ವದ ನ್ಯಾರ್ಮಾದ ಜಯರಾಮ್ ಸರ್ವೀಸ್ ಸ್ಟೇಷನ್ ಬಳಿ ಅ.9 ರಂದು ರಾತ್ರಿ ಸಂಭವಿಸಿದೆ.

ಮೃತರನ್ನು ಶಿರ್ವ ಮಸೀದಿ ಬಳಿ ವಾಸವಾಗಿರುವ ದೂರುದಾರರಾದ ಸ್ಟ್ಯಾನಿ ಬ್ರಿಟ್ಟೋ ಅವರ ಕಿರಿಯ ಸಹೋದರ ಯುಜೀನ್ ಬ್ರಿಟ್ಟೋ ಮೃತ ದುರ್ದೈವಿ ಎಂದು ತಿಳಿದುಬಂದಿದೆ.
ಜಯರಾಮ ಸರ್ವೀಸ್ ಸ್ಟೇಷನ್ ಬಳಿಯ ರಸ್ತೆಯ ಫುಟ್ ಪಾತ್ ನಲ್ಲಿ ಯುಜೀನ್ ನಡೆದುಕೊಂಡು ಹೋಗುತ್ತಿದ್ದಾಗ ಅಲೆಕ್ಸ್ ಜೋಸೆಫ್ ಬಾರ್ಬೋಜಾ ಅವರು ಅಜಾಗರೂಕತೆಯಿಂದ ಪಿಕಪ್ ವಾಹನವನ್ನು ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ತೀವ್ರ ಗಾಯಗೊಂಡ ಯುಜೀನ್ ಅವರನ್ನು ಪಿಕಪ್ ಚಾಲಕ ಅಜ್ಜರಕಾಡು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ರಾತ್ರಿ 9.40ಕ್ಕೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.