Sunday, April 7, 2024

ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ಹಾಗೂ ಸಾನ್ನಿಧ್ಯ ವೃದ್ಧಿಗಾಗಿ ಅಷ್ಟಮಂಗಳ ಪ್ರಶ್ನಾ ಚಿಂತನೆ

ಬಂಟ್ವಾಳ: ಬಂಟ್ವಾಳ ತಾ.ಕಾವಳಮೂಡೂರು ಗ್ರಾಮದ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ಹಾಗೂ ಸಾನ್ನಿಧ್ಯ ವೃದ್ಧಿಗಾಗಿ ಎರಡನೇ ಹಂತದ ಅಷ್ಟಮಂಗಳ ಪ್ರಶ್ನಾ ಚಿಂತನೆ ಕಾರ್ಯಕ್ರಮಕ್ಕೆ ಅ.13ರಂದು ಚಾಲನೆ ನೀಡಲಾಯಿತು.

ಪ್ರಧಾನ ದೈವಜ್ಞರಾಗಿ ಪಯ್ಯನ್ನೂರು ಜ್ಯೋತಿ ಸದನಂ ನಾರಾಯಣ ಪೊದುವಾಳ್ ಅವರು ಪ್ರಶ್ನಾ ಚಿಂತನೆ ನಡೆಸಿಕೊಟ್ಟರು. ಸಹ ಚಿಂತಕರಾಗಿ ಉಡುಪಿ ಗೋಪಾಲ ಜೋಯಿಸ ಅವರು ಭಾಗವಹಿಸಿದ್ದರು. ರೂಪೇಶ್ ಪೊದುವಾಳ್ ಮತ್ತಿತರರು ಸಹಕರಿಸಿದ್ದರು.

ದೇಗುಲದಲ್ಲಿ ನಡೆಯುತ್ತಿರುವ ಉತ್ಸವಗಳು, ಧಾರ್ಮಿಕ ಆಚರಣೆಗಳಲ್ಲಿ ತಪ್ಪು ಕಲ್ಪನೆಯಿಂದ ವ್ಯತ್ಯಾಸವಾಗಿದೆ. ಹಿಂದೆ ನಡೆಯುತ್ತಿದ್ದಂತಹ ಪದ್ಧತಿಗಳಿಗೂ, ನಂತರದ ಕಾಲದಲ್ಲಿ ನಡೆಸಲ್ಪಟ್ಟ ಆಚರಣೆಗಳಿಗೂ ವ್ಯತ್ಯಾಸ ಉಂಟಾಗಿದ್ದು, ಊರಿಗೆ ದೋಷ ಉಂಟಾಗಿದೆ. ಅದನ್ನು ಬದಲಿಸಿ ಮೊದಲಿನ ಸ್ಥಿತಿಗೆ ತರುವ ಅಗತ್ಯವಿದೆ ಎಂದು ಪ್ರಥಮ ದಿನದ ಚಿಂತನೆಯಲ್ಲಿ ಕಂಡು ಬಂದಿದೆ.

ಪಾರ್ವತಿ ಸನ್ನಿಧಿಯ ಬಗ್ಗೆ ಜಿಜ್ಞಾಸೆ ಕಂಡು ಬಂದಿದ್ದು, ಬದಲಾವಣೆಯ ಸಾಧ್ಯತೆ ಮುಂದಕ್ಕೆ ಪ್ರಶ್ನಾ ಚಿಂತನೆಯಲ್ಲಿ ತಿಳಿದು ಬರಬಹುದು. ಕ್ಷೇತ್ರದ ದೇವರ ಬಿಂಬವು ಪೂರ್ಣ ಪ್ರಮಾಣದಲ್ಲಿ ಪ್ರಕಾಶಿತವಾಗಿದ್ದು, ಸಾನ್ನಿಧ್ಯದಲ್ಲಿ ನಡೆಯುವ ವೈದಿಕ ವಿಧಿ, ವಿಧಾನಗಳಲ್ಲಿ ಲೋಪ ದೋಷ ಕಂಡುಬಂದಲ್ಲಿ ಅದನ್ನು ನಿವಾರಿಸುವುದು, ಆಂತರಿಕ ಮನಸ್ತಾಪಗಳು ಕೊನೆಗೊಂಡು ಶ್ರೀ ದೇವರಿಗೆ ಅನುಷ್ಠಾನಗಳು ಸರಿಯಾಗಿ ಸಲ್ಲಬೇಕು, ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲರೂ ಪಾಲ್ಗೊಳ್ಳುವಂತಾಗಬೇಕು ಮೊದಲಾದ ಸಮಸ್ಯೆ, ಪರಿಹಾರೋಪಾಯಗಳು ಅಷ್ಟಮಂಗಳ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂತು ಎಂದು ದೈವಜ್ಞರು ತಿಳಿಸಿದರು.

ಗ್ರಾಮಣಿಗಳಾದ ಗಣಪತಿ ಮುಚ್ಚಿನ್ನಾಯ, ಸುಬ್ರಹ್ಮಣ್ಯ ಪೆರಾಡಿತ್ತಾಯ, ವೆಂಕಟರಮಣ ಎಳಚಿತ್ತಾಯ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು ಮತ್ತು ಸದಸ್ಯರು, ಅರ್ಚಕರಾದ ಮಿಥುನ್‌ರಾಜ್ ಭಟ್, ಜಯಶಂಕರ ಉಪಾಧ್ಯಾಯ, ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

More from the blog

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...

ಮಿತಿ ಮೀರಿದ ತಾಪಮಾನ : ಖಡಕ್​ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಬಿರು ಬಿಸಿಲು ಹೆಚ್ಚಳವಾಗುತ್ತಿದ್ದು ಮುಂದಿನ 14 ದಿನಗಳ ಕಾಲ ಬಿಸಿಗಾಳಿ ಬೀಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್​...

ಮನೆಯ ಮಹಡಿಯಿಂದ ಬಿದ್ದು ಬಾಲಕ ಸಾವು

ಬಂಟ್ವಾಳ: ಮನೆಯ ಮಹಡಿಯ ಮೇಲಿಂದ ಕೆಳಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಎ.‌ ೧ರ ಮುಂಜಾನೆ ನಡೆದಿದೆ. ಬಂಟ್ವಾಳ ಜಕ್ರಿಬೆಟ್ಟು ನಿವಾಸಿ ದಿನೇಶ್ ಪೂಜಾರಿ ಅವರ ಪುತ್ರ ಆದಿಶ್(೧೫) ಮೃತಪಟ್ಟ ಬಾಲಕ. ಆತ ಮನೆಯಲ್ಲಿ ದೊಡ್ಡಮ್ಮನ...

ಮಾಂಸ ಪ್ರಿಯರಿಗೆ ಬೆಲೆ ಏರಿಕೆ ಶಾಕ್.. ಕೋಳಿ ಮಾಂಸದ ದರ ಏರಿಕೆ

ಮಂಗಳೂರು: ಕೋಳಿಮಾಂಸ, ಮೀನಿನ ದರ ಏರುಗತಿ ಯಲ್ಲಿ ಸಾಗುತ್ತಿದ್ದು ಮಾಂಸಾಹಾರ ಪ್ರಿಯರ ಜೇಬಿಗೂ ಕತ್ತರಿ ಬೀಳುವಂತಾಗಿದೆ. ಪ್ರಸ್ತುತ ಕೋಳಿಮಾಂಸಕ್ಕೆ (ವಿದ್‌ ಸ್ಕಿನ್‌) ಕೆ.ಜಿ.ಗೆ ಬ್ರಾಯ್ಲರ್‌ ಕೆಲವು ಕಡೆ 235-240 ರೂ., ಟೈಸನ್‌ 270 ರೂ....