Wednesday, April 10, 2024

ಜನೌಷದಿ ಕೇಂದ್ರದ ವತಿಯಿಂದ ಗೂಡುದೀಪ ಸ್ಪರ್ಧೆ

ಸಿದ್ಧಕಟ್ಟೆಯಲ್ಲಿನ ಪ್ರಧಾನ ಮಂತ್ರಿ ಭಾರತೀಯ ಜನೌಷದಿ ಕೇಂದ್ರದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಗೂಡುದೀಪ ಸ್ಪರ್ಧೆ ನಡೆಯಿತು..
ಮುಖ್ಯ ಅತಿಥಿಯಾಗಿ ಸಿದ್ಧಕಟ್ಟೆ ಯ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರಭಾಕರ ಪ್ರಭುರವರು ಸ್ಪರ್ಧಿಗಳನ್ನು ಉದ್ದೇಶಿಸಿ ಮಾತನಾಡಿ, ಬಹುಮಾನ ಪಡೆಯುವುದು ಮುಖ್ಯವಲ್ಲ ಸ್ಪರ್ಧೆಗೆ ಭಾಗವಹಿಸುವುದು ಮುಖ್ಯ ಇದರಿಂದ ಮನಸ್ಸಿಗೆ ಉತ್ಸಾಹ ಮೂಡುತ್ತದೆ ಮತ್ತು ಸಂಘಟಿತರಾಗುತ್ತೇವೆ ಹಾಗು ಮನಸ್ಸಿನ ಆರೋಗ್ಯಕ್ಕೆ ಉತ್ತಮ ಎಂದು ಕಿವಿಮಾತು ಹೇಳಿದರು.
ಗೂಡುದೀಪ ಸ್ಪರ್ಧೆ ಗೆ ತೀರ್ಪುಗಾರರಾಗಿ ಸಿದ್ಧಕಟ್ಟೆ ಯು ಪದವಿ ಪೂರ್ವ ಕಾಲೇಜ್ ನ ಉಪನ್ಯಾಸಕರಾದ ಶೀನಪ್ಪ ಎನ್, ಸಿದ್ಧಕಟ್ಟೆಯ ಗುಣಶ್ರೀ ವಿದ್ಯಾಲಯದ ಶಿಕ್ಷಕಿ ನಯನ, ಗಾಡಿಪಲ್ಕೆಯ ಪದವೀಧರೆ ಸಂಜನಾ ಮೋಹನ್, ಇವರು ತೊಡಗಿದ್ದರು. ಈ ಸ್ಪರ್ಧೆಯಲ್ಲಿ ಪಾಲ್ಗೂಂಡ ಎಲ್ಲಾ ಸ್ಪರ್ಧಿಗಳಿಗೆ ಜನೌಷದಿಯಿಂದ ಪ್ರಮಾಣ ಪತ್ರ, ಹಿರಿಯ, ಕಿರಿಯ, ವಿಭಾಗದಲ್ಲಿ ಪ್ರಥಮ, ದ್ವಿತೀಯ ಬಹುಮಾನ ಮತ್ತು ವಿಶೇಷ ಒಂದು ಬಹುಮಾನವನ್ನು ನೀಡಲಾಗಿತ್ತು,


ನಳಿನಿ ಚಂದ್ರಹಾಸ ಸಾಲೆತ್ತೂರು, ಸುರೇಶ್ ಕುಲಾಲ್ ಸದಸ್ಯರು ಗ್ರಾಮ ಪಂಚಾಯತ್ ಸಂಗಬೆಟ್ಟು, ರಕ್ಷಿತ್ ಕುಲಾಲ್ ವ್ಯವಸ್ಥಾಪಕರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ(ನಿ)ವಾಣಿಶ್ರೀ ಅಂಚೆ ಸಿಬ್ಬಂದಿ ಮೂಡುಬಿದಿರೆ, ಹರೀಶ್ ಕುಲಾಲ್ ಸಿದ್ಧಕಟ್ಟೆ, ರೋ.ಮೋಹನ್ ಮೂಲ್ಯ ನಿವೃತ್ತ ಯೋಧ, ಮತ್ತಿತ್ತರು ಉಪಸ್ಥಿತರಿದ್ದರು.
ಜನೌಷದಿಯ ಮಾಲೀಕ ಮನೋಜ್ ಕುಲಾಲ್ ಕಾರ್ಯಕ್ರಮ ವನ್ನು ಆಯೋಜಿಸಿ ಸ್ವಾಗತಿಸಿದರು, ಹೊನ್ನಯ್ಯ ಕಾಟಿಪಳ್ಳ ರವರು ನಿರೂಪಿಸಿದರು, ಅಕ್ಷತಾ ಧನ್ಯವಾದ ಅರ್ಪಿಸಿದರು

More from the blog

ಎ.14ರ ಪ್ರಧಾನಿ ಮೋದಿ ಸಮಾವೇಶ ರದ್ದು : ರೋಡ್ ಶೋದಲ್ಲಿ ಮಾತ್ರ ಭಾಗಿ

ಮಂಗಳೂರು: ಏಪ್ರಿಲ್ 14 ರಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಧಾನಿ ಮೋದಿ ಬೃಹತ್ ಸಮಾವೇಶಕ್ಕೆ ಆಯೋಜನೆ ಮಾಡಲಾಗಿತ್ತು. ಆದರೆ ಇದೀಗ ಕೊನೆ ಕ್ಷಣದಲ್ಲಿ ಈ ಸಮಾವೇಶ ರದ್ದುಪಡಿಸಲಾಗಿದೆ. ಏಪ್ರಿಲ್ 14ರಂದು ಮಂಗಳೂರಿನಲ್ಲಿ...

ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ….?​ ಇಲ್ಲಿದೆ ಮಾಹಿತಿ

ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶೇ 81.15 ಮಂದಿ ಉತ್ತೀರ್ಣಗೊಂಡಿದ್ದಾರೆ. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ...

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ....

ಶಾಲಾ ಸಮುದಾಯದತ್ತ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮಾಣಿ: ಶೈಕ್ಷಣಿಕ ವಿಚಾರಗಳ ಸಂಬಂಧಿತವಾದ ಒಳ್ಳೆಯ ಚಚೆ೯ಗಳು ಮೂಡಿಬಂದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ಮೂಡಲು ಸಾಧ್ಯ ‌. ಪ್ರತಿಯೊಬ್ಬ ವಿದ್ಯಾರ್ಥಿ, ಪೋಷಕರು,ತನ್ನ ಶಾಲೆಯ ಬಗ್ಗೆ ಒಳ್ಳೆಯ ಭಾವನೆ, ಸಂಬಂಧ ಇರಬೇಕು...