ವಿಟ್ಲ: ವಿಟ್ಲ: ಅಕ್ಷಯ ಚಾರಿಟೇಬಲ್ ಟ್ರಸ್ಟ್ ದಕ್ಷಿಣ ಕನ್ನಡ ಹಾಗೂ ಇಂಡಿಯನ್ ಆಸ್ಪತ್ರೆ ಮಂಗಳೂರು ಇದರ ವತಿಯಿಂದ ಮಾಜಿ ಸಚಿವ ಬಿ. ರಮಾನಾಥ ರೈ ಹುಟ್ಟು ಹಬ್ಬದ ಪ್ರಯುಕ್ತ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಬೋಳಂತೂರು ಸರಕಾರಿ ಶಾಲೆಯಲ್ಲಿ ನಡೆಯಿತು.
ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ ಭಾರತ ಸುಂದರ ಶಾಂತಿಯ ದೇಶವಾಗಿದೆ ಧರ್ಮದ ಹೆಸರಿನಲ್ಲಿ ಜಾತಿ ಹೆಸರಿನಲ್ಲಿ ಸಂಘರ್ಷಣೆ ನಡೆಯುತ್ತಿದೆ. ಸಮಾಜದಲ್ಲಿ ಸಾಮರಸ್ಯ ನೆಲೆಗೊಳ್ಳಬೇಕು. ಶಿಬಿರಗಳು ಬಡವರಿಗೆ ತುಂಬನೇ ಪ್ರಯೋಜಕಾರಿಯಾಗಿದೆ. ನಾನು ಮಂತ್ರಿಯಾಗಿ ಪ್ರಮಾಣಿಕವಾಗಿ ಬದುಕಿದ್ದೇನೆ. ಯಾವುದೇ ಆಮಿಷಗಳಿಗೆ ಬಲಿಯಾಗಿಲ್ಲ. ಅಪಪ್ರಚಾರ ಮಾಡುವುದನ್ನು ಬಿಟ್ಟು ಸೌಹಾರ್ಧತೆಯ ಸಮಾಜ ಕಟ್ಟುವ ಕೆಲಸ ಮಾಡಬೇಕು ಎಂದರು.
ಸಾಲೆತ್ತೂರು ಧರ್ಮಗುರು ಹೆನ್ರಿ ಡಿ ಸೋಜ ಮಾತನಾಡಿ ಹಳ್ಳಿಗೆ ಪ್ರಯೋಜನ ಆಗುವ ರೀತಿಯ ಕಾರ್ಯಕ್ರಮ ಸಮಾಜಕ್ಕೆ ಶಾಘ್ಲನೀಯವಾಗಿದೆ.
ಮನಸ್ಸಿನಲ್ಲಿ ಶಾಂತಿ ಸಮಾಧಾನ ಇಲ್ಲದಿದ್ದರೆ ಏನು ಸಾಧಿಸಲು ಸಾಧ್ಯವಿಲ್ಲ. ಎಲ್ಲರೂ ಸಮಾನತೆಯಿಂದ ಜೀವನ ನಡೆಸಬೇಕು ಎಂದರು.
ಅಸ್ಸಯ್ಯಿದ್ ಮದಕ ತಂಙಳ್ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೋಳಂತೂರು ಮತ್ತು ನಾರ್ಶ ಸರಕಾರಿ ಶಾಲೆಗಳಿಗೆ ಆಟದ ಸಾಮಾಗ್ರಿ ವಿತರಿಸಲಾಯಿತು. ಕ್ರೀಡಾಪಟುಗಳಿಗೆ ಜೆರ್ಸಿ ವಿತರಿಸಲಾಯಿತು. ಮಾಜಿ ಸಚಿವ ರಮಾನಾಥ ರೈ, ಸಮಾಜ ಸೇವಕ ಹ್ಯಾರಿಸ್ ಅಡ್ಕ, ಸಿದ್ದಿಕ್ ಗೂನಡ್ಕ, ಎಂಜಿನಿಯರ್ ಅಶ್ರಪ್ ಪರ್ತಿಪ್ಪಾಡಿ, ಅಬ್ದುಲ್ ರಹಿಮಾನ್ ಮೊಗರ್ಪಣೆ, ಶಂಕರ್ ಮಾಸ್ಟರ್ ಬೋಳಂತೂರು ಸೇರಿದಂತೆ ಮೊದಲಾದವರನ್ನು ಸನ್ಮಾನಿಸಲಾಯಿತು. ಸುಮಾರು ೫೦೦ಕ್ಕಿಂತಲೂ ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.
ಎಸ್ ವೈಎಸ್ ವೆಸ್ಟ್ ಅಧ್ಯಕ್ಷ ನವಾಝ್ ಸಖಾಫಿ, ಇಬ್ರಾಹಿಂ ಅಮ್ಜದಿ, ಫೈಝಲ್ ಝಹ್ರಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಂ ಎಸ್ ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಕೊಳ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಅಬ್ಬಾಸ್ ಅಲಿ, ಇಂಡಿಯನ್ ಆಸ್ಪತ್ರೆಯ ಅಲಿ ಕುಂಬಳೆ, ಚಿತ್ತರಂಜನ್ ಶೆಟ್ಟಿ, ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಪದ್ಮನಾಭ ರೈ, ಲತೀಪ್ ಪರ್ತಿಪ್ಪಾಡಿ, ಹರ್ಷದ್ ಸರವು, ಚಂದ್ರಶೇಖರ್ ರೈ ಬೋಳಂತೂರು, ಸಿದ್ದೀಕ್ ಸರಾವು, ಯಾಕುಬ್ ದಂಡೆಮಾರ್, ಅಶ್ರಪ್ ನಾರ್ಶ, ಸಿದ್ದೀಕ್ ಸಖಾಪಿ, ಸಿ.ಎಚ್ ಅಬೂಬಕ್ಕರ್, ಅಬ್ದುಲ್ ರಝಾಕ್ ಇರಾ, ವಿಶ್ವಜೀತ್ ಶೆಟ್ಟಿ, ಅಬ್ದುಲ್ ಖಾದರ್ ಮಂಚಿ, ರಫೀಕ್ ಸಖಾಪಿ ಬಳ್ಳಾರಿ, ತಮೀಮ್, ಇಬ್ರಾಹಿಂ ಜಿ.ಎಂ, ಶರೀಫ್ ಕುಡುಂಬಕೋಡಿ, ಅನ್ಸರ್ ಬಿ.ಜಿ, ಅಶ್ರಪ್ ಶೆಡ್, ಸಿ.ಎಚ್ ಅಬ್ದುಲ್ ರಝಾಕ್, ಹಮೀದ್ ಸುರಿಬೈಲು, ಇಸ್ಮಾಯಿಲ್ ಕೊಕ್ಕೆಪುಣೆ, ರಾಜೇಶ್, ಕರೀಮ್ ಕದ್ಕರ್, ಝಕಾರಿಯಾ ನಾರ್ಶ ಮೊದಲಾದವರು ಉಪಸ್ಥಿತರಿದ್ದರು.
,,,,,,,