Saturday, April 13, 2024

ಸುರಿಬೈಲ್ ಉಸ್ತಾದರ ಆಂಡ್ ನೇರ್ಚೆ: ಸ್ವಾಗತ ಸಮಿತಿ ರಚನೆ

 

ಬಂಟ್ವಾಳ, ಸೆ.12: ಮರ್ ಹೂಂ ಶೈಖುನಾ ಸುರಿಬೈಲ್ ಉಸ್ತಾದ್ (ನ.ಮ.) ಅವರ 21ನೇ ಆಂಡ್ ನೇರ್ಚೆ ಮತ್ತು ಶೈಖುನಾ ಪಿ.ಎ. ಉಸ್ತಾದ್ (ನ.ಮ.) ಅವರ 4ನೇ ಅನುಸ್ಮರಣೆ ಹಾಗೂ ಸನದು ದಾನ ಸಮ್ಮೇಳನ ನ.25, 26ರಂದು ಸುರಿಬೈಲ್ ಅಶ್ ಅರಿಯ್ಯ ನಗರದಲ್ಲಿ ನಡೆಯಲಿದ್ದು, ಇದರ ಸ್ವಾಗತ ಸಮಿತಿ ರಚನೆ ಸಭೆ ಇತ್ತೀಚೆಗೆ ಸುರಿಬೈಲ್ ನಲ್ಲಿ ನಡೆಯಿತು.

ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಹಾಜಿ ಸುಲೈಮಾನ್ ಸಿಂಗಾರಿ ನಾರ್ಶ, ಕನ್ವೀನರ್ ಆಗಿ ಅಬೂಬಕ್ಕರ್ ಲತೀಫಿ ಎಣ್ಮೂರು, ಕೋಶಾಧಿಕಾರಿಯಾಗಿ ಇಕ್ಬಾಲ್ ಬರಖ ಒಮಾನ್, ಉಪಾಧ್ಯಕ್ಷರಾಗಿ ಮುಹಮ್ಮದ್ ಸಖಾಫಿ ಸುರಿಬೈಲ್, ಇಬ್ರಾಹೀಂ ಇಬ್ಬಾ ಮಂಚಿ, ಶರೀಫ್ ಹಾಜಿ ನಾಡಾಜೆ ನೇಮಕಗೊಂಡರು.

ಆರ್ಥಿಕ ಸಮಿತಿ ಅಧ್ಯಕ್ಷರಾಗಿ ಮುತ್ತಲಿಬ್ ಹಾಜಿ, ಪ್ರಚಾರ ಸಮಿತಿ ಅಧ್ಯಕ್ಷರಾಗಿ ಇಬ್ರಾಹೀಂ ಖಲೀಲ್ ಮಾಲಿಕಿ ಬೋಳಂತೂರು, ಕನ್ವೀನರ್ ಆಗಿ ಇಬ್ರಾಹೀಂ ಸಖಾಫಿ ಸೆರ್ಕಳ, ವರ್ಕಿಂಗ್ ಕನ್ವೀನರ್ ಆಗಿ ಅಬ್ದುಲ್ ಹಕೀಮ್ ಹನೀಫಿ ನಿಡಿಗಲ್, ಸಂದಲ್ ಸಂಯೋಜಕರಾಗಿ ಯೂಸುಫ್ ಮದನಿ ಅಶ್ ಅರಿಯ, ಅಧ್ಯಕ್ಷರಾಗಿ ಸಿ.ಎಚ್.ಅಬೂಬಕ್ಕರ್ ಸೆರ್ಕಳ, ಕನ್ವೀನರ್ ಆಗಿ ಅಕ್ಬರ್ ಅಲಿ ಮದನಿ ಅಲಂಪಾಡಿ ಅಯ್ಕೆ ಯಾದರು.

ಗೆಸ್ಟ್ ಸ್ವೀಕಾರ ಅಧ್ಯಕ್ಷರಾಗಿ ಅಶ್ರಫ್ ನಾರ್ಶ, ಮೀಡಿಯಾ ಸಂಚಾಲಕರಾಗಿ ಆರೀಫ್ ಕಲ್ಕಟ್ಟ, ಹನೀಫ್ ವಿಷನ್, ಬಶೀರ್ ಹನೀಫಿ ಅಶ್ ಅರಿಯ, ಮುಝಮ್ಮಿಲ್ ಹನೀಫಿ ಅಶ್ ಅರಿಯ ನೇಮಕಗೊಂಡರು.

ಸಭೆಯಲ್ಲಿ ಸಯ್ಯದ್ ಚಟ್ಟೆಕಲ್ ತಂಙಳ್, ಸಯ್ಯದ್ ಮದಕ ತಂಙಳ್, ಸಯ್ಯದ್ ನಡಿಬೈಲ್ ತಂಙಳ್, ಶೈಖುನಾ ವಾಲೆಮುಂಡೋವು ಉಸ್ತಾದ್, ಶೈಖುನಾ ಬೊಳ್ಮಾರ್ ಉಸ್ತಾದ್, ಶೈಖುನಾ ಬಾಖವಿ ಉಸ್ತಾದ್, ಅಶ್ಅರಿಯ ಮುಹಮ್ಮದ್ ಅಲಿ ಸಖಾಫಿ, ಸೇರಾಜೆ ಅಬ್ದುಲ್ ಹಮೀದ್ ಲತೀಫಿ, ಎಣ್ಮೂರು ಅಬೂಬಕ್ಕರ್ ಲತೀಫಿ, ಬೊಳ್ಮಾರು ಅಬ್ದುಲ್ಲಾ ಮುಸ್ಲಿಯಾರ್, ಮಲ್ಲೂರು ಅಶ್ರಫ್ ಸಅದಿ, ಅಬ್ದುಲ್ ಖಾದಿರ್ ಸಖಾಫಿ ಮಂಜನಾಡಿ, ಮುಹಮ್ಮದಲಿ ಸಖಾಫಿ ಸುರಿಬೈಲು, ಅಬ್ದುಲ್ ಹಮೀದ್ ಕೊಡಂಗಾಯಿ ಸಾಮಣಿಗೆ ಮುಹಮ್ಮದ್ ಕುಂಞ್ಞಿ ಮದನಿ ಉಪಸ್ಥಿತರಿದ್ದರು.

ಇಬ್ರಾಹೀಂ ಖಲೀಲ್ ಮಾಲಿಕಿ, ಇಬ್ರಾಹಿಂ ಸಖಾಫಿ ಸೆರ್ಕಳ, ಅಕ್ಬರಲಿ ಮದನಿ ಮಂಚಿಬೈಲು, ಅಬ್ದುಲ್ ರಝಾಕ್ ಸಖಾಫಿ ಮಂಚಿ, ಅಶ್ರಫ್ ಬೊಳ್ಮಾರ್ ಸಹಕರಿಸಿದರು. ನಡಿಬೈಲ್ ತಂಙಳ್ ದುಅ ನೆರವೇರಿಸಿದರು. ವಾಲೆಮೊಂಡೋವು ಉಸ್ತಾದ್ ಉದ್ಘಾಟಿಸಿದರು. ಸಿ.ಎಚ್.ಮುಹಮ್ಮದ್ ಅಲಿ ಸಖಾಫಿ ಅಶ್ ಅರಿಯ ಸ್ವಾಗತಿಸಿದರು. ಸೇರಾಜೆ ಉಸ್ತಾದ್ ಧನ್ಯವಾದಗೈದರು. ಸಭೆಯಲ್ಲಿ 2023ರ ಕ್ಯಾಲೆಂಡರ್ ಅನ್ನು ಬಿಡುಗಡೆ ಗೊಳಿಸಲಾಯಿತು.

More from the blog

ನಾಳೆ ಮಂಗಳೂರಿಗೆ ಪ್ರಧಾನಿ ಮೋದಿ : ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿರವರು ಏಪ್ರಿಲ್ 14 ರಂದು ಮಂಗಳೂರಿನ ಲೇಡಿಹಿಲ್ ಬಳಿಯ ಶ್ರೀ ನಾರಾಯಣಗುರು ವೃತ್ತದಿಂದ ನವಭಾರತ ಸರ್ಕಲ್‌ವರೆಗೆ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಮಂತ್ರಿಗಳ ಭದ್ರತೆಯ ದೃಷ್ಟಿಯಿಂದ ಹಾಗೂ ಸಂಚಾರ ಸುವ್ಯವಸ್ಥೆಗೆ...

ಯುವಮೋರ್ಚಾ ಬಂಟ್ವಾಳ ವತಿಯಿಂದ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಬಿ. ಸಿ ರೋಡಿನ ರಕ್ತೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ

ಯುವಮೋರ್ಚಾ ಬಂಟ್ವಾಳ ವತಿಯಿಂದ ನರೇಂದ್ರ ಮೋದಿ ಮತೊಮ್ಮೆ ಪ್ರಧಾನಿಯಾಗಲೆಂದು ರಕ್ತೇಶ್ವರಿ ದೇವಸ್ಥಾನ ಬಿ. ಸಿ ರೋಡಿನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಎಳನೀರು ಸೇವಿಸಿ 136 ಮಂದಿ ಅಸ್ವಸ್ಥ ಪ್ರಕರಣ : ಬೊಂಡ ಫ್ಯಾಕ್ಟರಿ ಬಂದ್‌ ಗೆ ಆದೇಶ

ಮಂಗಳೂರು: ನಗರದ ಹೊರವಲಯದ ಅಡ್ಯಾರ್‌ನಲ್ಲಿರುವ ಬೊಂಡ ಫ್ಯಾಕ್ಟರಿಯ ಬೊಂಡ ನೀರು ಸೇವಿಸಿ ನೂರಾರು ಮಂದಿ ಅಸ್ವಸ್ಥಗೊಂಡ ಘಟನೆ ವರದಿಯಾಗಿದ್ದು, ಈ ಪ್ರಕರಣದ ಹಿನ್ನೆಲೆಯಲ್ಲಿ ಅಧಿಕಾರಿಗಳು ಗುರುವಾರ ಬೊಂಡ ಫ್ಯಾಕ್ಟರಿಗೆ ಬೀಗ ಜಡಿದಿದ್ದಾರೆ. ದ.ಕ.ಜಿಲ್ಲಾ ಆರೋಗ್ಯ...

ಸ್ವಿಮ್ಮಿಂಗ್​ ಪೂಲ್​ ನೀರಿಗೆ ಬಿದ್ದು 4ನೇ ತರಗತಿ ವಿದ್ಯಾರ್ಥಿ ಸಾವು

ಉಡುಪಿ‌: ಸ್ವಿಮ್ಮಿಂಗ್​ ಫೂಲ್​ನಲ್ಲಿ ಮುಳುಗಿ 4ನೇ ತರಗತಿಯ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಕುಂದಾಪುರ ತಾಲೂಕಿನ ಹೆಂಗವಳ್ಳಿ ಸಮೀಪದ ಟಿನ್ ಟಾನ್ ಎನ್ವೆಂಚರ್ಸ್ ರೆಸಾರ್ಟ್​​ನಲ್ಲಿ ನಡೆದಿದೆ. ಉಡುಪಿ‌ಯ ಹೊಡೆ ಮೂಲದ ಮುಹಮ್ಮದ್ ಅರೀಝ್ ಮೃತ ವಿದ್ಯಾರ್ಥಿ. ದಾರುಸ್ಸಲಾಮ್...