Tuesday, April 9, 2024

ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ದಿ ಸಂಘ ಆರ್.ಡಿ.ಪಿ.ಎರ್. (ರಿ) ಜಿಲ್ಲಾ ಸಮಿತಿಯ ಜಿಲ್ಲಾ ಮಟ್ಟದ ಸಮಾಲೋಚನಾ ಸಭೆ

ಬಂಟ್ವಾಳ: ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ದಿ ಸಂಘ ಆರ್.ಡಿ.ಪಿ.ಎರ್. (ರಿ) ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಮಟ್ಟದ ಸಮಾಲೋಚನಾ ಸಭೆ ರಾಜ್ಯಾಧ್ಯಕ್ಷ ದೇವಿಪ್ರಸಾದ್ ಬೊಲ್ಮೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು ಸೆ.24 ರಂದು ಬಿಸಿರೋಡಿನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ನಡೆಯಿತು.
ಕನಿಷ್ಠ ವೇತನಕ್ಕೆ ಗರಿಷ್ಠ ಸೇವೆಯನ್ನು ಗ್ರಾಮಪಂಚಾಯತ್ ನಲ್ಲಿ ನೀಡುತ್ರಾಬಂದಿದ್ದೇವೆ.
ಗ್ರಾಮಪಂಚಾಯತ್ ನಲ್ಲಿ ಸೇವೆ ಮಾಡುವ ಕಾರ್ಮಿಕರ ನ್ನು ಖಾಯಂಗೊಳಿಸಬೇಕು, ಹಾಗೂ ಸಿ.ಹಾಗೂ ಡಿ.ಗ್ರೂಪ್ ನೌಕರರಾಗಿ ನೇಮಕ ಮಾಡಬೇಕು ಎಂಬ ಒತ್ತಾಯ ಹಾಗೂ
ಮುಂದಿನ ದಿನಗಳಲ್ಲಿ ಶ್ರೇಯಕ್ಕೆ ಹಾಗೂ ಅಭಿವೃದ್ಧಿಗಾಗಿ ಹಾಗೂ ಅಗತ್ಯ ಮೂಲ ಸೌಕರ್ಯಗಳ ಪಡೆಯಲು ರಾಜ್ಯಮಟ್ಟದಲ್ಲಿ ಹೋರಾಟ ಮಾಡುವ ಬಗ್ಗೆ ಯೋಜನೆ ಹಮ್ಮಿಕೊಳ್ಳುವ ತೀರ್ಮಾನ ಮಾಡಿದ್ದೇವೆ.
ಇದಕ್ಕೆ ಇತರ ಸರಕಾರಿ ಸಂಘಟನೆಗಳ ಬೆಂಬಲವನ್ನು ಪಡೆಯಲಾಗುವುದು, ನಿಮ್ಮೆಲ್ಲರ ಸಂಪೂರ್ಣ ಸಹಕಾರ ಹೋರಾಟಕ್ಕೆ ನೀಡುವಂತೆ ಮನವಿ ಮಾಡಿದ ಅವರು,2016 ರಿಂದ ಸದಸ್ಯರ ಸಮಸ್ಯೆಗಳನ್ನು ಬಗೆಹರಿಸಲು ಮನವಿ ಹಾಗೂ ಮಾತುಕತೆಯ ಮೂಲಕ ಸಾಧ್ಯವಾದಷ್ಟು ಹೋರಾಟ ಮಾಡುತ್ತಾ ಬಂದಿದ್ದೇವೆ.
ಗ್ರಾಮ ಪಂಚಾಯತ್ ನೌಕರರ ಪ್ರತಿ ಸಮಸ್ಯೆ ಗಳ ಬಗ್ಗೆ ನನಗೆ ಅರಿವಿದ್ದು, ಹೋರಾಟದ ಮೂಲಕ ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದೇವೆ.
ಆರ್ಥಿಕ ಹಾಗೂ ಜನಬೆಂಬಲವಿದ್ದು ಮುಂದಿನ ಪ್ರತಿಯೊಂದು ಹೋರಾಟಗಳಿಗೆ ನಮಗೆ ಜಯ ಸಿಗಲಿದೆ, ಸಂಘದ ಸದಸ್ಯರು ಒಗ್ಗಟ್ಟಿನ ಬಲಪ್ರದರ್ಶನ ಮಾಡಿದಾಗ ಸರಕಾರ ಎಚ್ಚೆತ್ತುಕೊಂಡು ನಮ್ಮ ಕೂಗಿಗೆ ಬೆಲೆ ನೀಡಬಹುದು ಎಂದು ಅವರು ತಿಳಿಸಿದರು.

ಗ್ರಾಮ ಪಂಚಾಯತ್ ನೌಕರರು ನೌಕರಿಯಲ್ಲಿದ್ದಾರೆ ಎಂಬುದನ್ನು ಸರಕಾರಕ್ಕೆ ಮುಟ್ಟಿಸುವ ಕೆಲಸ ಸಂಘದ ಮೂಲಕ ಮಾಡಲಾಗಿದೆ.
ನೌಕರರ ವೈಯಕ್ತಿಕ ಸಮಸ್ಯೆ ಗಳಿಗೆ ಸಂಘಟನೆ ಸ್ಪಂದಿಸಿದ್ದು, ಮುಂದಿನ ದಿನಗಳಲ್ಲಿ ಇದಕ್ಕಿಂತ ಲೂ ಉತ್ತಮ ರೀತಿಯಲ್ಲಿ ಸದಸ್ಯರ ಸೇವೆಗಾಗಿ ಸದಾ ಸಿದ್ದವಿದೆ ಎಂದು ಅವರು ಭರವಸೆ ನೀಡಿದರು.
ಸದಸ್ಯರ ಆಶಯದಂತೆ
ಆರ್.ಡಿ.ಪಿ.ಆರ್ ವಿಭಾಗದಲ್ಲಿ ದೊಡ್ಡ ಸಂಘಟನೆ ಯಾಗಿ ಬೆಳೆದು ಬಂದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ
ರಾಜ್ಯ ಕಾರ್ಯದರ್ಶಿ ಪದ್ಮನಾಭ ಕುಲಾಲ್, ಜಿಲ್ಲಾ ಕಾರ್ಯದರ್ಶಿ ಯಶೋಧರ,ಉಡುಪಿ ಜಿಲ್ಲಾ ಉಪಾಧ್ಯಕ್ಷ ಹೇಮಚಂದ್ರ, ಉಡುಪಿ ಜಿಲ್ಲಾ ಕೋಶಾಧಿಕಾರಿ ಸಚಿನ್, ಉಡುಪಿ ಜಿಲ್ಲಾ ಸದಸ್ಯ ನಿತೇಶ್, ಮೂಡಬಿದರೆ ತಾ.ಅಧ್ಯಕ್ಷ ರಾಕೇಶ್ ಕುಮಾರ್, ಬಂಟ್ವಾಳ ತಾ.ಅಧ್ಯಕ್ಷ ಮೋಹನ್, ಪುತ್ತೂರು ತಾ.ಅಧ್ಯಕ್ಷ ಹೊನ್ನಪ್ಪ, ಸುಳ್ಯ ತಾ.ಅಧ್ಯಕ್ಷ ನೇತ್ರಾವತಿ, ಕಡಬ ತಾ.ಅಧ್ಯಕ್ಷ ಪುಷ್ಪಾ, ಜಿಲ್ಲಾ ಸಂಘದ ಸದಸ್ಯ ಲಕ್ಷಣ್ , ಬೆಳ್ತಂಗಡಿ ತಾ.ಕಾರ್ಯದರ್ಶಿ ರುಕೇಶ್ , ಕಾರ್ಕಳ ತಾ.ಸಂಘದ ಮಾಜಿ ಅಧ್ಯಕ್ಷ ಸೈಪುಲ್ಲಾ, ಸುಳ್ಯ ಕಾರ್ಯದರ್ಶಿ ಯಶವಂತ, ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯ ಮಟ್ಟದ ಸಂಘದ ಪ್ರಮುಖರ ಜೊತೆಯಲ್ಲಿ ಗ್ರಾ.ಪಂ.ನೌಕರರ ಸಮಸ್ಯೆಗಳ ಬಗ್ಗೆ ಎರಡು ತಾಸಿಗಿಂತಲೂ ಅಧಿಕ‌ಕಾಲ ಮುಕ್ತವಾಗಿ ಚರ್ಚೆ ನಡೆಸಲಾಯಿತು.
ನೌಕರರ ಪ್ರತಿ ಸಮಸ್ಯೆಗಳ ವಿವರ ಪಡೆದುಕೊಂಡ ಸಂಘದ ಪ್ರಮುಖರು ಕೆಲವೊಂದು ವಿಚಾರಗಳಿಗೆ ಸಂಬಂಧಿಸಿದಂತೆ ಸಮಸ್ಯೆ ಪರಿಹಾರಕ್ಕೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಹಾಗೂ ತಾಲೂಕು ಸಮಿತಿಯನ್ನು ರಚನೆ ಮಾಡಲಾಯಿತು.

More from the blog

ಬಿಜೆಪಿ ಬಂಟ್ವಾಳ ಮಂಡಲದ ವತಿಯಿಂದ ನಾರಿಶಕ್ತಿ ಮಹಿಳಾ ಸಮಾವೇಶ

ಬಂಟ್ವಾಳ: ನಾರಿ ಶಕ್ತಿ ಸಶಕ್ತರಾಗಬೇಕು ಎಂಬುದು ಮಹತ್ವದ ಕನಸು ಮತ್ತು ಪರಿಕಲ್ಪನೆಯಾಗಿದ್ದು, ರಾಜಕೀಯವಾಗಿ ಮಹಿಳೆಯರನ್ನು ಸಬಲೀಕರಣ ಮಾಡಿದ ಪಕ್ಷ ಬಿಜೆಪಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರದ...

ವಿಕಸಿತ ಭಾರತ ಸಂಕಲ್ಪದೊಂದಿಗೆ ಗ್ರಾಮ, ಮನೆ, ಮನ ಅಭಿಯಾನ ಸಂಪರ್ಕಕ್ಕೆ ಶಾಸಕ ರಾಜೇಶ್ ನಾಯ್ಕ್ ಚಾಲನೆ

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು, ದ.ಕ.ಜಿಲ್ಲಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಪ್ರಚಂಡ ಬಹುಮತದೊಂದಿಗೆ ಗೆಲುವು ಸಾಧಿಸಬೇಕು ಎಂಬ ಯೋಚನೆಯಿಂದ ಶಾಸಕ ರಾಜೇಶ್ ನಾಯ್ಕ್ ಅವರು ವಿಕಸಿತ ಭಾರತ ಸಂಕಲ್ಪದೊಂದಿಗೆ ಗ್ರಾಮ ,ಮನೆ,...

ವೀರಕಂಬ ಗ್ರಾಮದ ಗ್ರಾಮದೈವ ಶ್ರೀ ಗಿಳಿಕಿಂಜತಾಯಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ

ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ಗ್ರಾಮದೈವ ಶ್ರೀ ಗಿಳಿಕಿಂಜತಾಯಿ ದೇವಸ್ಥಾನದ ವರ್ಷವದಿ ಜಾತ್ರೆಯು ಊರ ಪರವೂರ ಭಕ್ತದಿಗಳ ಸೇರಿಗೆಯಲ್ಲಿ ವಿಜೃಂಭಣೆಯಿಂದ ಜರಗಿತು. ದಿನಾಂಕ 7-4-2024 ರ ರಾತ್ರಿ ಗಿಳಿಕಿಂಜ ಬಂಡಾರ ಮನೆಯಿಂದ ದೈವದ ಬಂಡಾರ...

ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ : ಇವತ್ತಿನ ‌ಬೆಲೆ ಎಷ್ಟು ಗೊತ್ತಾ…?

ಯುಗಾದಿ ಹಬ್ಬ. ಇದು ಸಂಬಂಧ ಬೆಸೆಯುವ ಹಬ್ಬ. ಅಂದಹಾಗೆಯೇ ದೇಶದಾದ್ಯಂತ ಜನರು ಇಂದು ಸಂಭ್ರಮದಲ್ಲಿದ್ದಾರೆ. ಆದರೆ ಇದರ ನಡುವೆ ಚಿನ್ನದ ಬೆಲೆ ಏರಿಕೆಯ ಬಿಸಿಯಿಂದ ಕೊಂಚ ಬೇಸರವು ಅವರಲ್ಲಿ ಆವರಿಸಿದೆ. ಕಳೆದ ಎರಡು ದಿನಗಳ...