ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 100 ಅಧಿಕ ಪ.ಜಾತಿ, ಪ.ಪಂಗಡ ಮನೆಗಳಿದ್ದು, ಸಮುದಾಯಕ್ಕೆ ಎಂದು ಇರಿಸಲಾಗಿದ್ದು ಪಂಚಾಯತ್ ಅನುದಾನವನ್ನು , ಮೂಲಭೂತ ಸೌಕರ್ಯಗಳನ್ನು ನೀಡದೆ ಗ್ರಾಮ ಪಂಚಾಯತ್ ದುರುಪಯೋಗ ಮಾಡಿದ್ದಲ್ಲದೆ, ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದ್ದಲ್ಲದೆ ಈ ಬಗ್ಗೆ ಜಿ.ಪಂ.ಸಿ.ಒ.ಅವರು ತನಿಖೆ ನಡೆಸುವಂತೆ ದೂರು ನೀಡಲಾಗಿದೆ ಎಂದು ಪುದು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಠಲ ಸಾಲಿಯಾನ್ ಅವರು ಹೇಳಿದ್ದಾರೆ.
ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.
2016-2020 ರವರೆಗಿನ ಸುಮಾರು 60 ಲಕ್ಷಕ್ಕೂ ಅಧಿಕ ಅನುದಾನದ ದುರ್ಬಳಕೆ ಮಾಡಲಾಗಿದೆ ಎಂದು ಅವರು ಆರೋಪ ವ್ಯಕ್ತಪಡಿಸಿದರು.
ಪ.ಜಾತಿ,ಪ.ಪಂಗಡಕ್ಕೆ ಮೀಸಲು ಇರಿಸಿದ ಅನುದಾನವನ್ನು ಇತರ ಕಡೆಗಳಿಗೆ ಬಳಕೆ ಮಾಡಿದ್ದು ಇದು ಸಮುದಾಯಕ್ಕೆ ಮಾಡಿದ ಅನ್ಯಾಯ ವಾಗಿದೆ ಎಂದು ಆರೋಪಿಸಿ ಈ ಬಗ್ಗೆ ಸೂಕ್ತ ವಾದ ತನಿಖೆ ನಡೆಸುವಂತೆ ತಾ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಜಿ.ಪಂ.ಸಿ.ಒ.ಗೆ ದೂರು ನೀಡಲಾಗಿದೆ ಎಂದು ಅವರು ತಿಳಿಸಿದರು.
ಆಡಳಿತ ಪಕ್ಷದ ಸದಸ್ಯೆಯೋರ್ವರು ಸಮುದಾಯದ ಅನುದಾನವನ್ನು ದುರ್ಬಳಕೆ ಮಾಡಿದ ಬಗ್ಗೆ ದೂರು ನೀಡಿದ್ದು, ಅಬಗ್ಗೆಯೂ ಯಾವುದೇ ತನಿಖೆ ನಡೆದಿಲ್ಲ ಎಂದು ಅವರು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ.ಮಾಜಿ ಸದಸ್ಯ ರವೀಂದ್ರ ಕಂಬಳಿ, ತಾ.ಪಂ.ಮಾಜಿ ಸದಸ್ಯ ಗಣೇಶ್ ಸುವರ್ಣ, ಸತೀಶ್ ನಾಯ್ಗ,ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು.