ಬಂಟ್ವಾಳ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದ.ಕ.ಜಿಲ್ಲಾಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಬಂಟ್ವಾಳ ಇದರ ಆಶ್ರಯದಲ್ಲಿ
ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟದ ಅಂಗವಾಗಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಮೈದಾನದಲ್ಲಿ ನಡೆದ ಪುರುಷ ಮತ್ತು ಮಹಿಳೆಯರ ಕಬಡ್ಡಿ ಹಾಗೂ ಖೋಖೊ ಪಂದ್ಯಾಟದಲ್ಲಿ ಖೋಖೋ ಪಂದ್ಯಾವಳಿಯಲ್ಲಿ ಪೀಲಾತಬೆಟ್ಟು ಗ್ರಾಮ ಪಂಚಾಯತಿ ಬಾಲಕ, ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟ ಅಯ್ಕೆಯಾಗಿದೆ.
ಪುರುಷರ ವಿಭಾಗದಲ್ಲಿ ಉತ್ತಮ ಆಟಗಾರ ಸುಹಾಸ್ ನೈನಾಡು, ಮೈಹಿಳಾ ವಿಭಾಗದಲ್ಲಿ ವಿದ್ಯಾ ನಯನಾಡು ಪುರಸ್ಕಾರ ಲಭಿಸಿದೆ.