ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಅಂಗವಾಗಿ ಅಂಗನವಾಡಿಯನ್ನು ದತ್ತು ಪಡೆದುಕೊಂಡ ಬಿಜೆಪಿ ಮಹಿಳಾ ಮೋರ್ಚಾ.
ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಹಿಳಾ ಮೋರ್ಚಾದ ವತಿಯಿಂದ ನರೇಂದ್ರ ಮೋದಿಜಿಯವರ ಜನ್ಮದಿನವನ್ನು ಆದರ್ಶ ಅಂಗನವಾಡಿ ಕಾರ್ಯಕ್ರಮದಲ್ಲಿ ನರಿಕೊಂಬು ಮಹಾಶಕ್ತಿ ಕೇಂದ್ರದ ಗೊಳ್ತಾಮಜಲು ಗ್ರಾಮದ ಕಲ್ಲಡ್ಕ ಶಾಲಾ ಅಂಗನವಾಡಿಯನ್ನು ದತ್ತು ತೆಗೆದುಕೊಳ್ಳುವ ಮೂಲಕ ವಿಶೇಷ ರೀತಿಯಲ್ಲಿ ಆಚರಿಸಿದರು.
ಕಾರ್ಯಕ್ರಮ ವನ್ನು ದೀಪ ಬೆಳಗುವ ಮೂಲಕ ಉದ್ಘಾಟನೆಯನ್ನು ಶಾಸಕ ರಾಜೇಶ್ ನಾಯ್ಕ್ ರವರು ಮಾಡಿ ಬಳಿಕ ಮಾತನಾಡಿದ ಅವರು ವಿಶ್ವನಾಯಕ ನರೇಂದ್ರ ಮೋದಿಯವರ ಕನಸನ್ನು ಸಾಕಾರ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಅಂಗನವಾಡಿಗೆ ಬೇಕಾಗುವ ಎಲ್ಲಾ ಸಹಕಾರವನ್ನು ನೀಡುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಬೇಟಿ ಪಡಾವೋ ಬೇಟಿ ಬಚಾವೋ ಕಾರ್ಡನ್ನು ಬೇಬಿ ಹಾರ್ದಿವಿಗೆ ಶಾಸಕರು ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಎರಡು ಅಂಗವಿಕಲರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ ಮತ್ತು ರವಿ ಶ್ ಶೆಟ್ಟಿ ಕರ್ಕಳ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಒಳಚರಂಡಿ ಮಂಡಳಿ ರಾಜ್ಯ ನಿರ್ದೇಶಕಿ ಸುಲೋಚನಾ ಜಿಕೆ ಭಟ್ , ಪ್ರಮುಖರಾದ ಚಂದ್ರಾವತಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಭಾರತಿ ಚೌಟ ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಸುಧಾ ಹಿರಿಯರಾದ ಕಮಲಾಕ್ಷಿ ಗೋಳ್ತಮಜಲು ಪಂಚಾಯತ್ ಅಧ್ಯಕ್ಷ ಅಭಿಷೇಕ್ ಉಪಾಧ್ಯಕ್ಷೆ ಲಕ್ಷ್ಮಿ ವಿ ಪ್ರಭು ಗ್ರಾಮ ಪಂಚಾಯತ್ ಸದಸ್ಯರು ಮತ್ತು ಶ್ರೀ ಶಕ್ತಿ ಗುಂಪಿನ ಸದಸ್ಯರು ಉಪಸ್ಥಿತರಿದ್ದರು.
ಮೋರ್ಚಾದ ಪ್ರಧಾನ ಕಾರ್ಯದರ್ಶಿ ಲಖಿತಾ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸೀಮಾ ಧನ್ಯವಾದ ನೀಡಿದರು.