ವಿಟ್ಲ: ಅಕ್ರಮ ಚಟುವಟಿಕೆಗಳ ಕೇಂದ್ರ ಎನಿಸಿಕೊಳ್ಳುತ್ತಿರುವ ನೇರಳಕಟ್ಟೆ ಸಮೀಪದ ಮಿತ್ತೂರು ಫ್ರೀಡಮ್ ಕಮ್ಯುನಿಟಿ ಹಾಲ್ ಅನ್ನು ಜಿಲ್ಲಾಧಿಕಾರಿ ಆದೇಶದ ಮೇರೆಗೆ ಮುಚ್ಚಿ ವಶಪಡಿಸಿಕೊಳ್ಳಲಾಯಿತು.

ಪಿ.ಎಫ್.ಐ. ನೇತೃತ್ವದಲ್ಲಿ ನೇರಳಕಟ್ಟೆ ಸಮೀಪದ ಮಿತ್ತೂರು ಹಾಲ್ ನಲ್ಲಿ ಅಕ್ರಮ ಚಟುವಟಿಕೆಗಳಿಗೆ ತರಬೇತಿ ನೀಡಲಾಗುತ್ತಿತ್ತು ಎಂಬ ಕಾರಣ ನೀಡಿ ಬಂದ್ ಮಾಡಲಾಗಿದೆ ಎನ್ನಲಾಗಿದೆ.
ಜಿಲ್ಲಾಧಿಕಾರಿ ಆದೇಶದಂತೆ ವಿಟ್ಲ ನಾಡಕಚೇರಿಯ ಕಂದಾಯ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ. ವಿಟ್ಲ ಪೊಲೀಸರು ಬಂದೋಬಸ್ತ್ ಮಾಡಿದ್ದರು.