ಬಂಟ್ವಾಳ: ಪಾಕೃತಿಕ ವಿಕೋಪದಲ್ಲಿ ಅನೇಕ ಕುಟುಂಬಕ್ಕೆ ಸಾಕಷ್ಟು ಕಷ್ಟನಷ್ಟವುಂಟಾಗಿದ್ದು, ಅಂತಹವರ ಬಾಳಿಗೆ ಸಹಾಯ ಮಾಡುವ ಉದ್ದೇಶದಿಂದ ಅಂತರಾಷ್ಟ್ರೀಯ ಲಯನ್ಸ್ ಕ್ಲಬ್ ಆಹಾರ ಕಿಟ್ ನೀಡುತ್ತಿದೆ ಎಂದು ಜಿಲ್ಲಾ ರಾಜ್ಯಪಾಲ ಸಂಜಿತ್ ಶೆಟ್ಟಿ ಅವರು ಹೇಳಿದರು.
ಅವರು ಬಿಸಿರೋಡು ಲಯನ್ಸ್ ಸೇವಾ ಮಂದಿರದಲ್ಲಿ ಲಯನ್ಸ್ ಇಂಟರ್ ನ್ಯಾಷನಲ್ ಫೌಂಡೇಶನ್ ವತಿಯಿಂದ ಜಿಲ್ಲಾ ಲಯನ್ಸ್ 317 ಡಿ. ನೇತೃತ್ವದಲ್ಲಿ
ಮಳೆ ಹಾನಿಗೊಳಗಾದ ಬಡ ನಿರ್ಗತಿಕರಿಗೆ ತುರ್ತು ಪರಿಹಾರ ಆಹಾರ ಕಿಟ್ ವಿತರಿಸಿ ಮಾತನಾಡಿದರು.
ಸಮಾಜದಲ್ಲಿ ನೊಂದವರಿಗೆ ಸಹಾಯ ಮಾಡುವುದೇ ಲಯನ್ಸ್ ಕ್ಲಬ್ ನ ಮೂಲ ಉದ್ದೇಶವಾಗಿದ್ದು, ನಿರಂತರವಾಗಿ ಇಂತಹ ಸಮಾಜ ಸೇವೆಯ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ಅವರು ಹೇಳಿದರು.
ಕೌನ್ಸಿಲ್ ಚೇರ್ ಪರ್ಸನ್ ವಸಂತ ಶೆಟ್ಟಿ ಮಾತನಾಡಿ, ಸಮಾಜದಲ್ಲಿ ನೊಂದವರಿಗೆ ಸಹಾಯ ಮಾಡಿದಾಗ ಸಮಾಜ ಬದಲಾವಣೆ ಸಾಧ್ಯ. ಅನಿಟ್ಟಿನಲ್ಲಿ ಲಯನ್ಸ್ ಕ್ಲಬ್ ನಿರಂತರವಾಗಿ ಸೇವೆ ಮೂಲಕ ಜನರ ಕಣ್ಣೀರೊರಸುವ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
ವೇದಿಕೆಯಲ್ಲಿ
ಲಯನ್ಸ್ ಕ್ಲಬ್ ಬಂಟ್ವಾಳ ಅಧ್ಯಕ್ಷ ಉಮೇಶ್ ,ಜಿಲ್ಲಾ ಕಾರ್ಯದರ್ಶಿ ಅನಿಲ್ ಕುಮಾರ್, ಜಿಲ್ಲಾ ರಾಜ್ಯಪಾಲರ ಸಂಯೋಜಕ ಶ್ರೀನಿವಾಸ ಪೂಜಾರಿ, ಜಿಲ್ಲಾ ಸಂಯೋಜಕ ರಾದ ನೇಮಿರಾಜ್ ಶೆಟ್ಟಿ, ನಿಕಿಲ್ ಶೆಟ್ಟಿ, ಬಂಟ್ವಾಳ ಕ್ಲಬ್ ಕೋಶಾಧಿಕಾರಿ ಜಗದೀಶ್ ಬಿ.ಎಸ್, ಪ್ರಮುಖರಾದ ಮೋಹನ್ ದಾಸ್, ರಾಘವೇಂದ್ರ ಕಾರಂತ,ಸತ್ಯನಾರಾಯಣ ರಾವ್, ಪ್ರಶಾಂತ್ ಕೋಟ್ಯಾನ್, ಹಾಗೂ
ವಿಶೇಷ ಸಹಕಾರ ಸುರೇಶ್ ಕೋಟ್ಯಾನ್ ನರಿಕೊಂಬು , ಬ್ರಿಜೇಶ್ ಮತ್ತು ಋ್ವಿತಿಕ್ ಶೆಟ್ಟಿ, ಪ್ರತೀಶ್ ಪಕಳ, ಮೋಹನ್ ದಾಸ್ ಕಿಲ್ಲೆ ಉಪಸ್ಥಿತರಿದ್ದರು.