Sunday, April 7, 2024

ಬಂಟ್ವಾಳ ಜಂಇಯತುಲ್ ಫಲಾಹ್ ಅಧ್ಯಕ್ಷರಾಗಿ ರಶೀದ್ ವಿಟ್ಲ

 

33 ವರ್ಷಗಳ ಇತಿಹಾಸ ಹೊಂದಿರುವ ಅವಿಭಜಿತ ದ.ಕ. ಜಿಲ್ಲೆಯ ಪ್ರತಿಷ್ಟಿತ ಶೈಕ್ಷಣಿಕ ಉತ್ತೇಜನಾ ಸೇವಾ ಸಂಸ್ಥೆ ಜಂಇಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾಗಿ ಯುವ ಉದ್ಯಮಿ, ಸಂಘಟಕ, ಬರಹಗಾರ ರಶೀದ್ ವಿಟ್ಲ ಅವರು ಆಯ್ಕೆಯಾಗಿದ್ದಾರೆ.

ಮೆಲ್ಕಾರ್ ಎಂ.ಎಚ್. ಕಂಪೌಂಡಲ್ಲಿ ಶುಕ್ರವಾರ ಸಂಜೆ (23/09/2022) ನಡೆದ ಜಂಇಯತುಲ್ ಫಲಾಹ್ ಮಹಾಸಭೆಯಲ್ಲಿ 2022 ರಿಂದ 2024ನೇ ಸಾಲಿಗೆ ಈ ಆಯ್ಕೆ ನಡೆಯಿತು. ಜಿಲ್ಲಾ ಘಟಕದ ಉಸ್ತುವಾರಿಯಾಗಿ ಆಗಮಿಸಿದ ಸಲೀಮ್ ಹಂಡೇಲ್ ಆಯ್ಕೆ ಪ್ರಕ್ರಿಯೆ ನಡೆಸಿದರು. ಆಡಳಿತಾಧಿಕಾರಿ ಜಮಾಲುದ್ದೀನ್, ವ್ಯವಸ್ಥಾಪಕರಾದ ಆದಮ್ ಅವರು ನೂತನ ಸಮಿತಿಯ ಚುನಾವಣೆ ಪ್ರಕ್ರಿಯೆಗೆ ಸಹಕರಿಸಿದರು. 21 ಸದಸ್ಯರ ನೂತನ ಸಮಿತಿಯನ್ನು ಅವಿರೋಧವಾಗಿ ಆರಿಸಲಾಯಿತು.

ನೂತನ ಸಮಿತಿಯ ಉಪಾಧ್ಯಕ್ಷರಾಗಿ ಅಬ್ದುಲ್ಲತೀಫ್ ನೇರಳಕಟ್ಟೆ, ಶೇಖ್ ರಹ್ಮತುಲ್ಲಾ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಕೆ. ಶಾಹುಲ್ ಹಮೀದ್, ಜೊತೆ ಕಾರ್ಯದರ್ಶಿಗಳಾಗಿ ಸುಲೈಮಾನ್ ಸೂರಿಕುಮೇರು, ಕೋಶಾಧಿಕಾರಿಯಾಗಿ ಎಂ.ಎಚ್. ಇಕ್ಬಾಲ್, ಸಂಘಟನಾ ಕಾರ್ಯದರ್ಶಿಯಾಗಿ ಪಿ. ಮಹಮ್ಮದ್, ಪತ್ರಿಕಾ ಕಾರ್ಯದರ್ಶಿಯಾಗಿ ಬಿ.ಎಂ. ತುಂಬೆ, ಕಾರ್ಯಕಾರೀ ಸದಸ್ಯರಾಗಿ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ರಫೀಕ್ ಹಾಜಿ ಆಲಡ್ಕ, ಎಫ್.ಎಂ. ಬಶೀರ್, ಅಬೂಬಕರ್ ನೋಟರಿ ವಿಟ್ಲ, ಮಹಮ್ಮದಲಿ ಎಸ್.ಎಂ., ಆಸಿಫ್ ಇಕ್ಬಾಲ್, ಹಾಜಿ ಉಸ್ಮಾನ್ ಕರೋಪಾಡಿ, ಅಬ್ದುಲ್ ರಝಾಕ್ ಅನಂತಾಡಿ, ಅಬ್ಬಾಸ್ ಅಲಿ ಬಿ.ಎಂ., ಎನ್. ಮಹಮ್ಮದ್, ಅಹ್ಮದ್ ಮುಸ್ತಫಾ ಗೋಳ್ತಮಜಲು, ಮಹಮ್ಮದ್ ವಳವೂರು, ಅಬ್ದುಲ್ ಹಕೀಂ ಕಲಾಯಿ ಅವರನ್ನು ಆರಿಸಲಾಯಿತು.

More from the blog

ಬಂಟ್ವಾಳ: ನಿಯಮ ಮೀರಿ ಚಾಲನೆ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ….

ಬಂಟ್ವಾಳ: ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡಿದರೆ ಜೋಕೆ, ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ : ಚೆಂಡಿನ ಗದ್ದೆಯಲ್ಲಿ ಪ್ರಥಮ ಚೆಂಡು

ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ದೇವಳದ ಚೆಂಡಿನ ಗದ್ದೆಯಲ್ಲಿ ಇಂದು ಪ್ರಥಮ ಚೆಂಡು ನಡೆಯಿತು. ‌ ಇವತ್ತಿನಿಂದ ಮುಂದಿನ ಐದು ದಿನಗಳ ಕಾಲ ಇಲ್ಲಿ ಚೆಂಡು...

ಏಪ್ರಿಲ್ 7ರಂದು ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ

ಬಂಟ್ವಾಳ: ಏಪ್ರಿಲ್ 7ರಂದು ಅಪರಾಹ್ನ 3 ಗಂಟೆಗೆ ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ತಾಲೂಕು ಘಟಕದ...

ದ್ವಿಚಕ್ರ ವಾಹನಕ್ಕೆ ರಿಕ್ಷಾ ಡಿಕ್ಕಿ : ಸಹಸವಾರ ಸ್ಥಳದಲ್ಲೇ ಮೃತ್ಯು

ಬಂಟ್ವಾಳ: ರಿಕ್ಷಾ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುತ್ತಿದ್ದ ಸಹಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನರಿಕೊಂಬು ಎಂಬಲ್ಲಿ ನಡೆದಿದೆ. ನರಿಕೊಂಬು ನಿವಾಸಿ ನೀಲಪ್ಪ ಪೂಜಾರಿ ಅವರ ಮಗ ಪವನ್ ( 17) ಮೃತಪಟ್ಟ ಬಾಲಕ. ಮನೆಯಿಂದ...