ವಿಟ್ಲ: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಸೇತುವೆ ಸಮೀಪ ಮೀನು ಸಾಗಾಟದ ಕಂಟೈನರ್ ಹಾಗೂ ಟ್ಯಾಂಕರ್ ನಡುವೆ ಅಪಘಾತ ನಡೆದ ಬಗ್ಗೆ ವರದಿಯಾಗಿದೆ.
ಬೆಂಗಳೂರು ಕಡೆಗೆ ತೆರಳುತ್ತಿದ್ದ ಮೀನು ಸಾಗಾಟದ ಕಂಟೈನರ್ ಹಾಗೂ ಮಂಗಳೂರು ಕಡೆ ತೆರಳುತ್ತಿದ್ದ ಟ್ಯಾಂಕರ್ ಮಧ್ಯೆ ಈ ಅಪಘಾತ ಸಂಭವಿಸಿದೆ.
ಘಟನೆಯಿಂದ ಮೀನು ಸಾಗಾಟದ ಕಂಟೈನರ್ ಸೇತುವೆಯ ಮೇಲಿಂದ ಕೆಳಗೆ ಬೀಳುವ ಹಂತದಲ್ಲಿದ್ದು, ಕೂದಳೆಲೆ ಅಂತರದಿಂದ ಪಾರಾಗಿದೆ. ಹೆದ್ದಾರಿಯಲ್ಲಿ ಸ್ವಲ್ಪ ಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿತ್ತು.