ವಿಟ್ಲ:ಸ್ವಾತಂತ್ರ್ಯಅಮೃತಮಹೋತ್ಸವದ ಸಂದರ್ಭದಲ್ಲಿ ವಿಟ್ಲ ಬಿಲ್ಲವ ಸಂಘದ ಬೆಳ್ಳಿ ಹಬ್ಬ ಸಂಭ್ರಮಾಚರಣೆಯ ಅಂಗವಾಗಿ ವಿಟ್ಲ ಸರಕಾರಿ ಮಾದರಿ ಶಾಲೆಯ ವಠಾರದಲ್ಲಿ ವನಮಹೋತ್ಸವ ಸ್ಥಬ್ಧ ಚಿತ್ರ, ಭವ್ಯ ಶೋಭಾಯಾತ್ರೆ, ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು.
ಮಾದರಿ ಶಾಲಾ ವಠಾರದಿಂದ ಹೊರಟ ಮೆರವಣಿಗೆಯಲ್ಲಿ ಪಾಲ್ಗೊಂಡ ನೂರಾರು ವಿದ್ಯಾರ್ಥಿಗಳು ಸಾಂಸ್ಕೃತಿಕ, ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣಗಳೊಂದಿಗೆ ಶೋಭಿಸಿದರು. ಮೆರವಣಿಗೆಯ ಬಳಿಕ ಶಿವಗಿರಿ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ವಿದ್ಯಾರ್ಥಿಗಳಿಗೆ ಛದ್ಮ ವೇಷ ಸ್ಪರ್ಧೆ ನಡೆಯಿತು.
ವಿಟ್ಲ ಬಿಲ್ಲವ ಸಂಘ ಅಧ್ಯಕ್ಷ ಹರೀಶ್ ಸಿ.ಹೆಚ್, ಪದಾಧಿಕಾರಿಗಳು, ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ಡಾ.ಗೀತಪ್ರಕಾಶ್ ಹಾಗೂ ಪದಾಧಿಕಾರಿಗಳು, ಮಾದರಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.