Thursday, October 19, 2023

ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ 

Must read

‘ಭಗವಂತನ ಸಾಮ್ರಾಜ್ಯದಲ್ಲಿ ಎಲ್ಲರೂ ಸಮಾನರು’- ಮಾಣಿಲ ಶ್ರೀ

ವಿಟ್ಲ: ಲೋಕ ಕಲ್ಯಾಣಕ್ಕಾಗಿ ಭಿಕ್ಷೆಬೇಡುವುದರಲ್ಲಿ ಅಸಹ್ಯ ಪಡಬಾರದು. ಭಗವಂತನ ಸಾಮ್ರಾಜ್ಯದಲ್ಲಿ ಎಲ್ಲರೂ ಸಮಾನರು. ನಿಸರ್ಗವನ್ನು ಪ್ರೀತಿಸುವ ಕಾರ್ಯ ಎಲ್ಲರಿಂದ ನಡೆಯಬೇಕು ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಅವರು ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಸಂದರ್ಭ ನಡೆದ ಧರ್ಮಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಸೇವೆ ಮತ್ತು ತ್ಯಾಗ್ಯ ಭಗವಂತನಿಗೆ ಪ್ರಿಯವಾದುದು. ಬಾಲಭೋಜನದ ತತ್ವ ಸಂದೇಶ ಐಕ್ಯಮತ, ಸಹಬಾಳ್ವೆಯಾಗಿದೆ. ತಂದೆ ತಾಯಿ ದೇವರಿಗೆ ಸಮಾನರಾಗಿದ್ದಾರೆ. ಸೋತವರನ್ನು ಮೇಲೆತ್ತುವವರಿಗೆ ಭಗವಂತನ ಅನುಗ್ರಹವಿರುತ್ತದೆ. ಎಂದು ಹೇಳಿದರು.

ರೇಖಾ ದೇಸಾಯಿ ಬೆಳಗಾವಿ, ಡಾ. ವಿ. ಕೆ. ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿ ಕಿಶೋರ್ ಅವತ್ ಶೇಕರ್ ಅವರನ್ನು ಗೌರವಿಸಲಾಯಿತು.

ಧಾರ್ಮಿಕ ಸಭೆಯಲ್ಲಿ ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಪುತ್ತೂರು ಶಾಸಕ ಸಂಜೀವ ಮಠಂದೂರು, ಉಡುಪಿ ಕೊಡವೂರು ನಿತ್ಯಾನಂದ ಆಶ್ರಮದ ಆಡಳಿತ ಮೊಕ್ತೇಸರ ದಿವಾಕರ ಶೆಟ್ಟಿ ಕೊಡವೂರು, ಡಾ. ಹರೀಶ್ ಕೊಟ್ಟಾರಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರತಿನಿಧಿಗಳಾದ ಸುಬ್ರಹ್ಮಣ್ಯ ಪ್ರಸಾದ್, ಸುರೇಂದ್ರ ಜೈನ್, ಉದ್ಯಮಿಗಳಾದ ಭಾಸ್ಕರ ಶೆಟ್ಟಿ ಪುಣೆ, ದಿವಾಕರ ಮೂಲ್ಯ, ಉಮೇಶ್ ಪೂಂಜಾ, ದೇವದಾಸ ಕುಲಾಲ್, ಗಿರೀಶ್ ಸಾಲ್ಯಾನ್ ಮುಂಬೈ, ಉಮೇಶ್ ನಾವೂರು, ಗಣೇಶ್ ಶೆಟ್ಟಿ (ಸಿಎ), ನಾಗೇಶ್ ಹೆಗ್ಡೆ, ಸಂಜಯ್ ಸುಬೇದಾರ್ ಮುಂಬೈ, ಹರೀಶ್ ಕೊಟ್ಟಾರಿ, ಉಮೇಶ್ ಮೂಲ್ಯ, ಸಂತೋಷ್ ಬೆಂಗಳೂರು, ಸ್ವರದಾ ಮುಂಬೈ, ರಘು ಮುಂಬೈ, ಜಿತೇಂದ್ರ ಕೊಟ್ಟಾರಿ, ಮಾಣಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಿತಾ ಮೂಲ್ಯ ಮತ್ತಿತರರು ಉಪಸ್ಥಿತರಿದ್ದರು.

ಕ್ಷೇತ್ರ ಟ್ರಸ್ಟಿ ತಾರನಾಥ ಕೊಟ್ಟಾರಿ ಸ್ವಾಗತಿಸಿದರು. ಎಚ್. ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ಅಪ್ಪಣ್ಣ ಆಚಾರ್ಯ ನೇತೃತ್ವದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು.

More articles

Latest article