ವಿಟ್ಲ: ಸೇವೆ, ಹೃದಯ ಶ್ರೀಮಂತಿಕೆ ಹೆಚ್ಚಬೇಕು. ದೇಶದ ಉನ್ನತಿಗೆ, ಸಮಾಜದ ಹಿತಕ್ಕಾಗಿ, ಲೋಕಕಲ್ಯಾಣಕ್ಕಾಗಿ ನಿರಂತರ ಪ್ರಾರ್ಥನೆ ಮಹಾಲಕ್ಷ್ಮಿ ಗೆ ಸಲ್ಲಿಸಲಾಗುತ್ತದೆ.

ಗುರುವಿನ ಅರಿವು ನಮ್ಮೊಳಗಿನ ಅರಿವಿನ ಜ್ಞಾನ.

ಗುರು ಎಂದರೆ ಜ್ಞಾನದ ದೀಮಂತಿಕೆ ಎಂದು ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಹೇಳಿದರು. ಅವರು ಶ್ರೀಧಾಮ ಮಾಣಿಲದಲ್ಲಿ ಆ.೫ರಂದು ನಡೆಯಲಿರುವ ವರಮಹಾಲಕ್ಷ್ಮೀ ವೃತಾಚರಣೆಯ ಅಂಗವಾಗಿ ಒಂದು ಮಂಡಲ ನಡೆದ ಬಾಲಭೋಜನದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಹಿಂದೂ ಧರ್ಮದ ಆಚಾರ ವಿಚಾರದ ಉಳಿವಿಗೆ ಬಾಲಭೋಜನದಲ್ಲಿ ಭಾಗವಹಿಸಿದ ಮಕ್ಕಳ ಪಾತ್ರ ಅಪಾರವಿದೆ. ಮಹಾಲಕ್ಷ್ಮೀ ವೃತಾಚರಣೆಯಿಂದ ಮಾನವೀಯ ಮೌಲ್ಯ‌ ಹೆಚ್ಚಾಗುತ್ತದೆ. ತ್ಯಾಗ ಮತ್ತು ಸೇವೆಗೆ ತಾಯಂದಿರ ಪಾತ್ರ ಅಪಾರ. ಆನಂದದ ಸಮ್ಮಿಲನ ಎಲ್ಲಾಕಡೆ ಉಂಟಾಗಿ ಲೋಕ ಕಲ್ಯಾಣವಾಗಲಿ. ನಮ್ಮಲ್ಲಿರುವ ಕೆಡುನ್ನು ಹೊರಹಾಕಿ ಉತ್ತಮ ಗುಣವನ್ನು ಮೈಗೂಡಿಸಿಕೊಳ್ಳಿ. ಪ್ರಕೃತಿಯನ್ನು ಪ್ರೀತಿಸುವ ಮನಸ್ಸು ನಿಮ್ಮದಾಗಲಿ ಎಂದರು.

ಶ್ರೀಗಳ ಶಿಷ್ಯರಾದ ಶ್ರೀ ಚಿದಾನಂದ ಸ್ವಾಮೀಜಿ ಚಿಕ್ಕಮಂಗಳೂರು, ಟ್ರಸ್ಟಿ ಬಾಸ್ಕರ್ ಶೆಟ್ಟಿ ಪುಣೆ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಸೇರಾಜೆ ಗಣಪತಿ ಭಟ್ , ಒಡಿಯೂರು ಶ್ರೀ ಗುರುದೇವ‌ ವಿದ್ಯಾಪೀಠದ ಮುಖ್ಯ ಶಿಕ್ಷಕಿ ರೇಣುಕಾ ಎಸ್.ರೈ, ಕುಲದೀಪ್ ಸಿಂಗ್ ಮುಂಬೈ, ರೇವತಿ ವಾಮಯ್ಯ ಶೆಟ್ಟಿ ಮುಂಬೈ, ಸ್ವರದಾ ಮುಂಬೈ, ರೇಖಾ ದೇಸಾಯಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನೂರಾರು ಮಕ್ಕಳು ಬಾಲಭೋಜನದಲ್ಲಿ ಪಾಲ್ಗೊಂಡಿದ್ದು, ಈ ಪೈಕಿ ನಿರೀಕ್ಷಾ, ಶ್ರೇಯ, ಸಮೀಕ್ಷಾ, ನಿಶಾ, ದೀಕ್ಷಾ,‌ ಗೀತಾಲಕ್ಷ್ಮೀ, ಚೈತ್ರರವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಗೀತಾ ಪುರುಷೋತ್ತಮ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಟ್ರಸ್ಟಿ ತಾರಾನಾಥ ಕೊಟ್ಟಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಶ್ರೀಧಾಮ ಸೇವಾ ಸಮಿತಿಯ ಪೃಥ್ವಿರಾಜ್ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here