ದೇಶಾಭಿಮಾನವು ಮಕ್ಕಳಲ್ಲಿ ಎಳೆಯ ವಯಸ್ಸನಲ್ಲಿ ಬೆಳೆಯಬೇಕು ಯುವಜನಾಂಗವು ಉಚಿತ ಶಿಕ್ಷಣದೊದಿಗೆ ದೇಶದ ಅಭಿವೃದ್ದಿಯಲ್ಲಿ ತೊಡಗಿ ಕೊಂಡಾಗ ಸವ೯ಜನಾಂಗದ ಶಾಂತಿಯತೋಟದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಶ್ರೀ ಮಾತಾ ಡೆವಲಪ್ಪರ್ಸನ ಮಾಲಿಕರೂ ಮಜಿ ಶಾಲಾ ದತ್ತು ಸಮಿತಿಯ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಹೇಳಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬ ಇಲ್ಲಿ 75 ನೇ ವಷ೯ದ ಸ್ವಾತಂತ್ರ್ಯ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು. ಧ್ವಜಾರೋಹಣ ಮಾಡಿದ ಮಜಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಸಂಜೀವ ಯೂಲ್ಯ ರವರು ಕಾರ್ಯಕ್ರಮದ ಸಭಾ ಅಧ್ಯಕ್ಷತೆ ವಹಿಸಿದ್ದರು.
ಕೆಎಂ.ಎಫ್. ವಿಸ್ತರಣಾಧಿಕಾರಿ ಜಗದೀಶ್ ಮಜಿ ಮಾತನಾಡಿ ದೇಶದ ಉನ್ನತಿಯಲ್ಲಿ ಯುವಜನಾಂಗದ ಪಾತ್ರ ಮಹತ್ತರವಾದುದು ದುಶ್ಚಟಗಳಿಗೆ ದಾಸರಾಗದೇ ಅಗ್ನಿಪಥ್ ನಂತಹ ಯೋಜನೆಗಳಲ್ಲಿ ತೊಡಗಿಕೊಳ್ಳಬೇಕು ಭಾರತದ ಜನಸಂಖ್ಯೆಯು ಅತಿಹೆಚ್ಚಿನ ದಾಗಿದ್ದು ಇದನ್ನು ಸಂಪನ್ಮೂಲವಾಗಿ ಬಳಸಿಕೊಂಡಾಗ ಯಾವುದೇ ರೀತಿಯ ತೊಡಕು ಉಂಟಾಗಲಾರದು ಎಂದು ತಿಳಿಸಿದರು.
ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ರವರು ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದಭ೯ದಲ್ಲಿ ಘರ್ ಘರ್ ತಿರಂಗಾದ ಮೂಲಕ ಪ್ರತಿಮನೆಯಲ್ಲೂ ಮೂರುದಿನಗಳಿಂದ ನಡೆಸಲಾದ ಸ್ವಾತಂತ್ರದಿನಾಚರಣೆಯ ಬಗ್ಗೆ ತಿಳಿಸಿದರು.
ಮಜಿಶಾಲಾ ಶತಮಾನೋತ್ಸವ ಸಮಿತಿಯ ಪ್ರಧಾನ ಕಾಯ೯ದಶಿ೯ಯವರಾದ ವಿಶ್ವನಾಥರವರು ಮಾತೃಶ್ರೀ ಗೆಳೆಯರ ಬಳಗದ ಅಧ್ಯಕ್ಷ ಸುಧಾಕರ ಮೈರಾ ,ಗ್ರಾಮ ಪಂಚಾಯತ್ ಸದಸ್ಯರಾದ ಜಯಂತಿ ಜನಾರ್ಧನ್, ಸುನಿಲ್ ಮೀನಾಕ್ಷಿ, ಅನಂತಾಡಿ ಬಂಟ್ರಿಂಜ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಸುಂದರಿ ಟೀಚರ್ ಉಪಸ್ಥಿತರಿದ್ದರು.
ಮಖ್ಯ ಶಿಕ್ಷಕ ನಾರಾಯಣ ಪೂಜಾರಿಯವರು ಸ್ವಾಗತಿಸಿ , ಶಿಕ್ಷಕಿ ಅನುಷಾರವರು ವಂದಿಸಿದರು. ಶಿಕ್ಷಕಿ ಸಂಗೀತ ಶಮ೯ರವರು ಕಾಯ೯ಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು, ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪದಾಧಿಕಾರದೇಶದ ಹಾಗೂ ಸದಸ್ಯರುಗಳು, ಮಕ್ಕಳ ಪೋಷಕರು ಉಪಸ್ಥಿತರಿದ್ದರು, ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.