ಸುಬ್ರಹ್ಮಣ್ಯ ದಲ್ಲಿನಿನ್ನೆ ಸಂಜೆ 5 ಗಂಟೆಯಿಂದ ಸುರಿದ ಭಾರಿ ಮಳೆಗೆ ಕುಕ್ಕೆ ಸುಬ್ರಹ್ಮಣ್ಯ ಅಕ್ಷರಶಃ ಕುಸಿದು ಬಿದ್ದಿದೆ.
ಸುಬ್ರಹ್ಮಣ್ಯ ಇತಿಹಾಸದಲ್ಲಿ ಈ ರೀತಿ ಮಳೆಯಾಗಿಲ್ಲ ಎಂದು ಹಿರಿಯರು ಹೇಳುತ್ತಿದ್ದಾರೆ.__ಇಂದಿನ ಧಾರಾಕಾರ ಮಳೆಗೆ ಆದಿಸುಬ್ರಹ್ಮಣ್ಯ ದೇವಸ್ಥಾನದೊಳಗೆ ನೀರು ನುಗ್ಗಿದ್ದು, ದೇವಸ್ಥಾನ ಮುಳುಗಡೆಯಾಗುವ ಆತಂಕ ಎದುರಾಗಿದೆ. ಮತ್ತೊಂದೆಡೆ ದರ್ಪಣ ತೀರ್ಥ ನದಿಯ ನೀರು ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಸೇರಲಾರಂಭಿಸಿದೆ. ದೇವರಗದ್ದೆ, ಮಾನಾಡಿಯಲ್ಲಿ ನದಿಗಳು ಉಕ್ಕಿ ಹರಿದು ಹಲವು ಮನೆಗಳಿಗೆ ನೀರು ನುಗ್ಗಿದ್ದು, ನೂಚಿಲದ ಕೆಲ ಮನೆಗಳಿಗೂ ನೀರು ನುಗ್ಗಿದೆ. ಕುಮಾರಧಾರ ಸೇತುವೆ ಹೊರತುಪಡಿಸಿ ಉಳಿದೆಲ್ಲ ಸೇತುವೆಗಳು ಮುಳುಗಡೆಯಾಗದಿದ್ದರೂ ಅಪಾಯದ ಮಟ್ಟ ಮೀರಿದೆ. ಕುಮಾರಧಾರವೂ ಮುಳುಗಡೆಯಾದರೆ ರಸ್ತೆ ಸಂಪರ್ಕವೇ ಇಲ್ಲದೆ ಕುಕ್ಕೆ ಸುಬ್ರಹ್ಮಣ್ಯ ದ್ವೀಪವಾಗುವ ಸಾಧ್ಯತೆ ಇದೆ.__ ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.