ವಿಟ್ಲ: ಕಾರು ಹಾಗು ದ್ವಿಚಕ್ರ ವಾಹನದ ಮಧ್ಯೆ ಅಪಘಾತ ಸಂಭವಿಸಿದ ಘಟನೆ ಮಿತ್ತೂರು ಸಮೀಪ ಆ.೨೩ರಂದು ನಡೆದ ಬಗ್ಗೆ ವರದಿಯಾಗಿದೆ.
ಘಟನೆಯಿಂದಾಗಿ ದ್ವಿಚಕ್ರ ಸವಾರ ಕೋಲ್ಪೆ ಸಮೀಪದ ಸೂರ್ಯ ನಿವಾಸಿ ವಾಸಪ್ಪ ಸಪಲ್ಯರವರು ಗಂಭೀರ ಗಾಯಗೊಂಡಿದ್ದು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.
ಕಾರು ಮಂಗಳೂರು ಕಡೆಯಿಂದ ಪುತ್ತೂರು ಭಾಗಕ್ಕೆ ತೆರಳುತ್ತಿತ್ತು ಎಂದು ಮಾಹಿತಿ ಲಭಿಸಿದೆ.