ಸರಕಾರಿ ಪ್ರೌಢಶಾಲೆ ಮಾಣಿಲದಲ್ಲಿ ಜುಲೈ 04.ರಂದು ‘ವಾರದ ಬೆಳಕು’ ಸರಣಿ ಕಾರ್ಯಕ್ರಮದ ಅಂಗವಾಗಿ ‘ ಆಟಿಯ ಬದುಕು’ ವಿಷಯದ ಬಗ್ಗೆ ಉಪನ್ಯಾಸ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಮೇಶ ಎಂ ಬಾಯಾರು ಉಪನ್ಯಾಸ ನೀಡಿದರು. ಅವರು ಆಟಿ ತಿಂಗಳ ಸಾಂಸ್ಕೃತಿಕ ಮಹತ್ವ, ಆಚಾರ ವಿಚಾರಗಳು, ಖಾದ್ಯ ಪದಾರ್ಥಗಳು, ವಿವಿಧ ಆಚರಣೆಗಳ ಹಿಂದಿರುವ ನಂಬಿಕೆ ಮತ್ತು ಭಾವನೆಗಳ ಬಗ್ಗೆ ತಮ್ಮ ವಿಚಾರಗಳನ್ನು ಹಂಚಿಕೊಂಡರು. ಆಟಿಯ ಕುರಿತಾಗಿ ಮಕ್ಕಳಿಗೆ ರಸಪ್ರಶ್ನೆಯನ್ನು ನಡೆಸಿ ಬಹುಮಾನಗಳನ್ನು ವಿತರಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಎಂ.ಕೆ ಕುಕ್ಕಾಜೆ ಇವರು ತುಳುವರ ಸಂಸ್ಕೃತಿಯಲ್ಲಿ ಆಟಿ ತಿಂಗಳ ಮಹತ್ವದ ಬಗ್ಗೆ ವಿವರಿಸಿದರು. ಅತಿಥಿಗಳಾಗಿ ಗ್ರಾ.ಪಂ. ಉಪಾಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ನಿವೃತ್ತ ಶಿಕ್ಷಕ ಅನಂತ ಭಟ್ ಮುಜೂರು, ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್ ಕೆ.ಜಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎ೦ ಸಿ ಅಧ್ಯಕ್ಷರಾಗಿರುವ ಶಿವಪ್ರಸಾದ್ ಸೊರಂಪಳ್ಳ ವಹಿಸಿದ್ದರು.

ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಪರಿಣಿತರಾಗಿರುವ ಸ್ಥಳೀಯರಾದ ಮಾ೦ಕಪ್ಪ ಮೂಲ್ಯ ‘ ಕೊಮ್ಮುಂಜೆ ಮತ್ತು ಲಕ್ಷ್ಮಿ ನಾರ್ಜಲು ಇವರನ್ನು ಸನ್ಮಾನಿಸಲಾಯಿತು.

ಶ್ರೀಕಾಂತ್ ಮಾಣಿಲತ್ತಾಯ, ವಿಷ್ಣು ಕನ್ನಡಗುಳಿ ಎಸ್.ಡಿ.ಎಂ.ಸಿ. ಸದಸ್ಯರಾದ ಚಂದ್ರಶೇಖರ ರಾವ್ ಕೊಮ್ಮುಂಜೆ. ಗೋವಿಂದ ನಾಯ್ಕ. ಶಿಕ್ಷಕ ವರ್ಗ ಹಾಗೂ ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿದ್ಯಾರ್ಥಿನಿ ರಕ್ಷಿತಾ ಎಲ್ಲರನ್ನೂ ಸ್ವಾಗತಿಸಿದರೆ ರೂಪಶ್ರೀ ವಂದಿಸಿದರು. ವೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here