ಶ್ರೀ ಮಹಾದೇವ ದೇವೇಶ್ವರ ದೇವಸ್ಥಾನ ಕಜೆಕಾರು ಇಲ್ಲಿ 75ನೇ ಸ್ವತಂತ್ರೋತ್ಸವದ ಅಮೃತಮಹೋತ್ಸವ ಆಚರಿಸಲಾಯಿತು…
ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಗುಣಶೇಖರ ಕೊಡಂಗೆ ಇವರು ಸಭೆಯನ್ನುದ್ದೇಶಿಸಿ ನಮ್ಮ ದೇಶ ಬ್ರಿಟಿಷರ ದಾಸ್ಯದಿಂದ ಮುಕ್ತಿಹೊಂದಿ ಸ್ವಾತಂತ್ರ್ಯವನ್ನು ಪಡೆಯಿತು ಈ ಸ್ವತಂತ್ರ್ಯಕ್ಕಾಗಿ ಸಾವಿರಾರು ಮಂದಿಯ ಬಲಿದಾನವಾಗಿದೆ ಆದರೆ ಈಗ ರಾಜಕೀಯ ಉದ್ದೇಶಕ್ಕಾಗಿ ಧರ್ಮ-ಧರ್ಮಗಳ ನಡುವೆ ಅಭದ್ರತೆ ಸೃಷ್ಟಿಯಾಗುತ್ತಿದೆ ಇದು ನಮ್ಮ ದೇಶಕ್ಕೆ ಮಾರಕವಾಗಿದೆ ಎಲ್ಲರು ಜಾಗೃತರಾಗಬೇಕು ನಮ್ಮ ದೇಶ ಭಾರತ ಎಂಬ ಭಾವನೆಯೊಂದಿಗೆ ಒಂದೇ ಸೂರಿನಡಿಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಎಂದು ತಿಳಿಸಿದರು. ಕ್ಷೇತ್ರದ ಆಡಳಿತ ಮೊಕ್ತೇಸರರಾದ ಯಶೋಧರ ಕಜೆಕಾರು, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ಪ್ರವೀಣ್ ಅಬುರ, ಗ್ರಾಮ ಪಂಚಾಯತ್ ಸದಸ್ಯರಾದ ದೇವದಾಸ್ ಅಬುರ ಹಾಗೂ ದೇಶಾಭಿಮಾನಿಗಳು, ಶಾಲಾ ಮಕ್ಕಳು ಪಾಲ್ಗೊಂಡರು.. ರಾಷ್ಟ್ರಗೀತೆಯೊಂದಿಗೆ ದ್ವಜಕ್ಕೆ ಗೌರವ ಸಲ್ಲಿಸಲಾಯಿತು. ಸಿಹಿ ಹಂಚಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು.