ದ.ಕ ಜಿಲ್ಲೆಯಲ್ಲಿ ನಾಳೆಯಿಂದ ನೈಟ್ ಕರ್ಪ್ಯೂನಲ್ಲಿ ಕೊಂಚ ವಿನಾಯಿತಿ ಮಾಡಲಾಗಿದೆ ಎಂದು
ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ ಮಾಡಿದ್ದಾರೆ.
ಅಂಗಡಿ ಬಂದ್ ಆದೇಶ ರಾತ್ರಿ 9 ಗಂಟೆಯಿಂದ ಜಾರಿಯಾಗಲಿದ್ದು, ರಾತ್ರಿ 9 ಗಂಟೆಯಿಂದ ಬೆ.6 ಗಂಟೆಯವರೆಗೆ ನೈಟ್ ಕರ್ಪ್ಯೂ ಜಾರಿ ಇರುತ್ತದೆ ಎಂದು ಅವರು ಅದೇಶದಲ್ಲಿ ತಿಳಿಸಿದ್ದಾರೆ.ನಾಳೆಯಿಂದ ರಾತ್ರಿ 9 ಗಂಟೆಯವರೆಗೆ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಅಗಸ್ಟ್ 5 ರಿಂದ ಮೂರು ದಿನಗಳ ಈ ಆದೇಶ ಜಾರಿ ಇರಲಿದ್ದು, ಮದ್ಯದಂಗಡಿಗಳು ನಾಳೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ತೆರೆಯಲು ಆದೇಶ ಹೊರಡಿಸಿದ್ದಾರೆ.