ಬಂಟ್ವಾಳ : ಪ್ರಸ್ತುತ ಶಿಕ್ಷಣವು ಮುಖ್ಯವಾಗಿ ಜ್ಞಾನಾಧಾರಿತ ಹಾಗೂ ಕೌಶಲ್ಯಾಧಾರಿತವಾಗಿದ್ದು ಪ್ರತಿಯೊಬ್ಬರೂ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ. ಸರಕಾರದ ನಾಗರಿಕ ಸೇವೆಗಳ ಪರೀಕ್ಷೆಗಳನ್ನು ಎಲ್ಲರೂ ಬರೆಯಬೇಕು ಎಂದು ಕನ್ನಡ ಪ್ರಾಧ್ಯಾಪಕ ಚೇತನ್ ಮುಂಡಾಜೆ ಹೇಳಿದರು.
ಅವರು ಆದಿತ್ಯವಾರ ಲಯನ್ಸ್ ಕ್ಲಬ್ ಬಂಟ್ವಾಳ, ಲಿಯೋ ಕ್ಲಬ್ ಬಂಟ್ವಾಳ ಗೋಲ್ಡ್ ಮತ್ತು ಯುನಿಕ್ ಎಜುಕೇರ್ ಇದರ ಜಂಟಿ ಆಶ್ರಯದಲ್ಲಿ ನಡೆದ ಸಿಇಟಿ, ನೀಟ್, ಜೆಇಇ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಕಾರ್ಯಾಗಾರ ವಿಷನ್ ೨೦೨೨ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ರಸಾಯನ ಶಾಸ್ತ್ರ ಉಪನ್ಯಾಸಕಿ ಹರ್ಷಿತಾ ಪಿ. ಮಾತನಾಡಿ ವೃತ್ತಿಪರ ಶಿಕ್ಷಣಕ್ಕೆ ನೀಡುವ ಪ್ರವೇಶ ಪರೀಕ್ಷೆಗಳಾದ ಸಿಇಟಿ, ನೀಟ್, ಜೆಇಇ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಗಣಿತಶಾಸ್ತ್ರ ಉಪನ್ಯಾಸಕಿ ಕವಿತಾಯಾದವ್ ಮಾತನಾಡಿ ಕೆಲವು ಸರಳ ವಿಚಾರಗಳನ್ನು, ಬಹು ಆಯ್ಕೆ ಪ್ರಶ್ನೆಗಳನ್ನು ಉತ್ತರಿಸಲು ಬೇಕಾಗುವ ಕೆಲವು ಸರಳ ಸೂತ್ರಗಳ ಬಗ್ಗೆ ತಿಳಿಸಿದರು.
ಸಭಾಕಾರ್ಯಕ್ರಮವನ್ನು ಅಧ್ಯಕ್ಷತೆಯನ್ನು ಬಂಟ್ವಾಳ ಲಯನ್ಸ್ ಕ್ಲಬ್ನ ಅಧ್ಯಕ್ಷ ಉಮೇಶ್ ಆಚಾರ್ಯ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಲಿಯೋ ಅಧ್ಯಕ್ಷೆ ಭುವಿ ಕಾರಂತ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಲಿಯೋ ಕೋರ್ಡಿನೇಟರ್ ಪ್ರೀತಮ್ ಪೊನ್ನಪ್ಪ ಎನ್. ಜಿ., ಜಿಲ್ಲಾ ಲಿಯೋ ಅಧ್ಯಕ್ಷ ಕವನ ಕುಬೆವೂರು, ಜಿಲ್ಲಾ ಲಿಯೋ ಎಡ್ವೈಸರ್ ಡಾ| ದಿವ್ಯ ವಿ. ಶೆಟ್ಟಿ ಭಾಗವಹಿಸಿದ್ದರು.