ಬಂಟ್ವಾಳ: ಸ್ವಾತಂತ್ರ್ಯ ಅಮೃತಮಹೋತ್ಸವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟವನ್ನು ನೆನಪಿಸುವ ನಿಟ್ಟಿನಲ್ಲಿ ಆ.23 ರಂದು ಮಂಗಳವಾರ ಬಂಟ್ವಾಳ ದಲ್ಲಿ ಕಾಂಗ್ರೇಸ್ ಪಕ್ಷದ ವತಿಯಿಂದ ಪಾದಾಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.ಅವರು ಪಕ್ಷದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಾವೂರ ಗ್ರಾಮದ ಮಣಿಹಳ್ಳ ಜಂಕ್ಷನ್ ನಲ್ಲಿ ಪಾದಾಯಾತ್ರೆ ಗೆ ಚಾಲನೆಯನ್ನು ಬೆಳಿಗ್ಗೆ 9 ಗಂಟೆಗೆ ನೀಡಲಾಗುತ್ತದೆ. ಅ ಬಳಿಕ ಹೆದ್ದಾರಿ ಮೂಲಕ ಮೆಲ್ಕಾರ್ ಗೆ ಸಾಗುತ್ತದೆ.
ಮಧ್ಯಾಹ್ನ ಆಲಡ್ಕದಲ್ಲಿ ವಿಶ್ರಾಂತಿ. ಊಟದ ಬಳಿಕ ಪಾಣೆಮಂಗಳೂರು ಪೇಟೆಯ ಮೂಲಕ ಗೂಡಿನ ಬಳಿ ಯಾಗಿ ಬಿಸಿರೋಡು ವೃತ್ತಕ್ಕೆ ಸಾಗಿ ಅಬಳಿಕ ಸರ್ವೀಸ್ ರಸ್ತೆಯ ಮೂಲಕ ಸಾಗಿ ಕೈಕಂಬದಲ್ಲಿ ಪಾದಾಯಾತ್ರೆ ಸಮಾಪ್ತಿ ಮಾಡಲಿದ್ದೇವೆ.
ದೇಶ ಪ್ರೇಮದ ಸಂಗೀತದ ಜೊತೆಯಲ್ಲಿ, ರಾಷ್ಟ್ರ ಧ್ವಜವನ್ನು ಹಿಡಿದು ಸ್ವಾತಂತ್ರ್ಯ ಸಂಗ್ರಾಮದ ನೆನಪನ್ನು ಮಾಡಿಸುವ ಕೆಲಸ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
*ಖಂಡನೆ*
ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿಯವರಿಗೆ ಬಿಸಿರೋಡಿನಲ್ಲಿ ಸ್ವಾತಂತ್ರ್ಯ ಆಚರಣೆ ವೇಳೆ ಅವಮಾನ ಮಾಡಲಾಗಿದ್ದು ಇದನ್ನು ಬಂಟ್ವಾಳ ಕಾಂಗ್ರೇಸ್ ಖಂಡಿಸುತ್ತದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀಪ್ ಶೆಟ್ಟಿ, ಪ್ರಮುಖರಾದ ಸುದರ್ಶನ ಜೈನ್,ಪದ್ಮಶೇಖರ್ ಜೈನ್, ಅಬ್ಬಾಸ್ ಆಲಿ, ಸದಾಶಿವ ಬಂಗೇರ, ವೆಂಕಪ್ಪ ಪೂಜಾರಿ,ಜನಾರ್ಧನ ಚೆಂಡ್ತಿಮಾರ್ , ನವಾಜ್ ಬೆಂಜನಪದವು, ಸುಧಾಕರ ಶೆಣೈ, ಉಪಸ್ಥಿತರಿದ್ದರು.