ಬಂಟ್ವಾಳ: ಕೋವಿಡ್ ಮಹಾಮಾರಿಯ ಬಳಿಕ ಜಾಗತಿಕ ಮಟ್ಟದಲ್ಲಿ ಜಿಡಿಪಿಯಲ್ಲಿ ಅತ್ಯಂತ ವೇಗವಾಗಿ ಬೆಳೆಯುವ ದೇಶ ಭಾರತವಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಬಂಟ್ವಾಳ ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಸ್ವಾತಂತ್ರ್ಯ ಅಮೃತಮಹೋತ್ಸವದ ಸಭಾ ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಅನೇಕ ಕಾರ್ಯಕ್ರಮ ಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೀಡಿದ್ದಾರೆ. ಅವರ ಮಾತಿಗೆ ಬೆಲೆ ನೀಡಿ ದೇಶದಲ್ಲಿ ಕೋಟಿ ಕೋಟಿ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು.
ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಗೊಂದಲಗಳಿಂದ ಶಾಂತಿಯ ನೆಲೆವೀಡು ಆಗಿ ಕಾಣಲು ಕಾರಣವಾಗಿರಲು ಈ ಕ್ಷೇತ್ರದ ಜನತೆಯ ಸಹಕಾರ ದಿಂದ ಸಾಧ್ಯ ವಾಗಿದೆ.ಇದಕ್ಕೆ ಕ್ಷೇತ್ರದ ಜನತೆಯ ಪ್ರತಿ ಯೊಬ್ಬರಿಗೂ ಧನ್ಯವಾದ ನೀಡುತ್ತೇನೆ ಎಂದು ಅವರು ಹೇಳಿದರು
ಕೋವಿಡ್ ಸಂದರ್ಭದಲ್ಲಿ ಜನರಿಗೆ ಉಚಿತ ರೇಷನ್ ಹಾಗೂ ಉಚಿತ ವ್ಯಾಕ್ಸಿನೇಷನ್ ನೀಡಿ ದೇಶದ ಜನರ ಜೀವ ಹಾಗೂ ಜೀವನಕ್ಕೆ ಪ್ರಧಾನಿ ಮೋದಿಯವರು ಕಾರಣರಾಗಿದ್ದಾರೆ.
ಧ್ವಜಾರೋಹಣ ನೆರವೇರಿಸಿದ ತಾಲೂಕಿನ ತಹಶಿಲ್ದಾರ್ ಡಾ|ಸ್ಮಿತಾರಾಮು ಅವರು ಸ್ವಾತಂತ್ರ್ಯದ ಸಂದೇಶ ನೀಡಿ ವೈವಿಧ್ಯತೆ ಯಲ್ಲಿ ಏಕತೆ ಭಾರತದ ವೈಶಿಷ್ಟ್ಯ ವಾಗಿದೆ.ಸ್ವಾತಂತ್ರ್ಯ ದ ಹಿಂದೆ ಹಲವಾರು ಸ್ವಾತಂತ್ರ್ಯ ಹೋರಾಟಗಾರ ರ ಶ್ರಮವಿದೆ.
ಇತಿಹಾಸದಲ್ಲಿ ದಾಖಲಾಗದ ಅದೆಷ್ಟೋ ದೇಶ ಪ್ರೇಮಿಗಳ ತ್ಯಾಗಬಲಿದಾನವೂ ನಮ್ಮ ಇಂದಿನ ಸ್ವಾತಂತ್ರ್ಯ ದ ಅಮೃತಮಹೋತ್ಸವದ ಸಂದರ್ಭದಲ್ಲಿ ನೆನಪಿಸಿ ಗೌರವಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಅವರು ಹೇಳಿದರು. ಹರ್ ಘರ್ ತಿರಂಗ ನಮ್ಮ ಅದೃಷ್ಟ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಶಾಸಕರ ಕನಸಾಗಿರುವ ಬಂಟ್ವಾಳದ ಸುಂದರೀಕರಣಕ್ಕೆ ಎಲ್ಲರೂ ಕೈ ಜೋಡಿಸಿ ಅವರು ಮನವಿ ಮಾಡಿದರು. ಅಭಿವೃದ್ಧಿ ಯಲ್ಲಿ ಬಂಟ್ವಾಳ ಇತರರಿಗೆ ಮಾದರಿಯಾಗಲಿ ಎಂದು ಶುಭಹಾರೈಸಿದರು. ನಿವೃತ್ತ ಶಿಕ್ಷಕ ಸಂಕಪ್ಪ ಶೆಟ್ಟಿ ಅವರು ಸ್ವಾತಂತ್ರ್ಯ ದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಕಳೆದ 20 ವರ್ಷಗಳಿಂದ ಪುರಸಭೆಯಲ್ಲಿ ನಿರಂತರವಾಗಿ ಕಸವಿಲೇವಾರಿ ಕೆಲಸದಲ್ಲಿ ತೊಡಗಿಕೊಂಡಿರುವ ಸತೀಶ್ ಹಾಗೂ ಸೇಸಪ್ಪ ಅವರನ್ನು ಗೌರವಿಸಲಾಯಿತು. ಅಮೃತಮಹೋತ್ಸವ ಅಂಗವಾಗಿ ಬಿಸಿರೋಡಿನ ನಗರಕ್ಕೆ ವಿದ್ಯುತ್ ದೀಪಾಲಂಕಾರ ಮಾಡಿದ ಸಮಾಜಸೇವಕ ರಾಘವೇಂದ್ರ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತ , ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಂಟ್ವಾಳ ಡಿ.ವೈ.ಎಸ್.ಪಿ.ಪ್ರತಾಪ್ ಸಿಂಗ್ ಥೋರಾಟ್, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಉಪಸ್ಥಿತರಿದ್ದರು.
ಧ್ವಜಾರೋಹಣಕ್ಕೂ ಮುನ್ನ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ,ಸ್ಕೌಟ್ಸ್ ಗೈಡ್ಸ್, ಗೃಹ ರಕ್ಷಕದಳ, ಹಾಗೂ ಪೋಲೀಸರ ಆಕರ್ಷಕ ಪಂಥ ಸಂಚಲನ ನಡೆಯಿತು ತಾಲೂಕು ಪಂಚಾಯತ್ ಮುಖ್ಯಾಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿದರು.ಬಿ.ಒ.ಜ್ಞಾನೇಶ್ ವಂದಿಸಿದರು. ಕಲಾವಿದ ಮಂಜುವಿಟ್ಲ ಕಾರ್ಯಕ್ರಮ ನಿರೂಪಿಸಿದರು.