ಬಂಟ್ವಾಳ: ಊರಿನ ಎಲ್ಲಾ ಸಮುದಾಯದವರು ಸೇರಿ ನಡೆಸುತ್ತಿದ್ದ ಕೃಷಿ ಪದ್ಧತೆ ಇಂದು ಬದಲಾವಣೆ ಕಂಡಿದೆ. ಹಿಂದಿನ ಕಾಲದ ಕಷ್ಟದ ದಿನಗಳು ಕೂಡ ಇಂದು ಇಲ್ಲವಾಗಿದೆ. ಆದರೆ ನಮ್ಮ ತುಳುನಾಡಿನ ಪರಂಪರೆಯನ್ನು ಮುಂದಿನ ಜನಾಂಗಕ್ಕೆ ಪರಿಚಿಸುವ ಕಾರ್ಯ ಅತಿ ಅಗತ್ಯವಾಗಿ ನಡೆಯಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಅವರು ಬಂಟ್ವಾಳ ವಿಧಾನಸಭಾ ಕ್ಷೇತ್ರ ಆಟಿದ ಕೂಟ ಸಮಿತಿಯ ವತಿಯಿಂದ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಪ್ರಯುಕ್ತ ಪಂಜಿಕಲ್ಲು ಬಾಲೇಶ್ವರ ಗರಡಿ ಗದ್ದೆಯಲ್ಲಿ ಆಟಿಡ್ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಾರಂಭದಲ್ಲಿ ಪಂಜಿಕಲ್ಲು ಬಸದಿ ಹಾಗೂ ಗರಡಿಯಲ್ಲಿ ಪ್ರಾರ್ಥನೆ ನೆರವೇರಿಸಲಾಯಿತು. ಕಂಬಳಗದ ಕೋಣಗಳು ಸಹಿತ ಮೆರವಣಿಗೆ ನಡೆಸು ಕೋಣೆಗಳನ್ನು ಕೆಸರುಗದ್ದೆಗೆ ಇಳಿಸಲಾಯಿತು.
ಆಟಿದ ಕೂಟ ಸಮಿತಿಯ ಅಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂಜಿಕಲ್ಲು ಗರಡಿ ಆಡಳಿತ ಪ್ರಮುಖರಾದ ಪ್ರಕಾಶ್‌ಕುಮಾರ್ ಜೈನ್, ಪ್ರಮುಖರಾದ ಬೇಬಿ ಕುಂದರ್, ಸುದೀಪ್‌ಕುಮಾರ್ ಶೆಟ್ಟಿ, ಬಿ.ಪದ್ಮಶೇಖರ್ ಜೈನ್, ಎಂ.ಎಸ್.ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಡಿ.ಎಸ್.ಮಮತಾ ಗಟ್ಟಿ, ವಾಸು ಪೂಜಾರಿ, ಗಂಗಾಧರ ಪೂಜಾರಿ, ಲೋಲಾಕ್ಷ ಶೆಟ್ಟಿ, ಪ್ರಸಾದ್ ಕೌಶಲ್ ಶೆಟ್ಟಿ, ಅಬ್ಬಾಸ್ ಆಲಿ, ಪದ್ಮನಾಭ ರೈ, ಜಗದೀಶ್ ಕೊಯಿಲ, ಸುರೇಶ್ ಜೋರಾ, ಮೋಹನ್ ಗೌಡ ಕಲ್ಮಂಜ, ರಮೇಶ್ ನಾಯಕ್ ರಾಯಿ, ರಾಜೀವ ಶೆಟ್ಟಿ ಎಡ್ತೂರು ಮೊದಲಾದವರಿದ್ದರು.
ಪ್ರಧಾನ ಕಾರ್ಯದರ್ಶಿ ಸುದರ್ಶನ್ ಜೈನ್ ಸ್ವಾಗತಿಸಿದರು. ಕೋಶಾಧಿಕಾರಿ ದೇವಪ್ಪ ಕುಲಾಲ್ ವಂದಿಸಿದರು. ಮಾಣಿ ಗ್ರಾ.ಪಂ.ಅಧ್ಯಕ್ಷ ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರ್ವಹಿಸಿದರು. ಕೆಸರುಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳು, ತುಳುನಾಡಿನ ತಿಂಡಿ ತಿನಸುಗಳು ಗಮನ ಸೆಳೆದವು.