ಸ್ವಾತಂತ್ರ್ಯ ಅಮೃತಮಹೋತ್ಸವ ಅಂಗವಾಗಿ ಬಂಟ್ವಾಳ ತಾಲೂಕು ಕೇಂದ್ರ ಬಿಸಿರೋಡಿನಲ್ಲಿರುವ ತಾಲೂಕು ಆಡಳಿತ ಸೌಧವು ತ್ರಿವರ್ಣ ಧ್ವಜ ದ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಗಮನಸೆಳೆಯುತ್ತಿದೆ.
*ಬಿಸಿರೋಡು ನಗರಕ್ಕೂ ಬಣ್ಣದ ರಂಗು*
ಬಿಸಿರೋಡಿನ ಪ್ಲೈ ಓವರ್ ಸೇರಿದಂತೆ ಕೈಕುಂಜೆ ರಸ್ತೆಯ ಡಿವೈಡಾರ್ ಭಾಗಕ್ಕೂ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು, ಬಹುತೇಕ ಪ್ರದೇಶವು ತ್ರಿವರ್ಣ ಧ್ವಜ ದ ರಂಗಿನಿಂದ ಕಂಗೋಳಿಸುತ್ತಿದೆ. ನಗರಕ್ಕೆ ಬಿಸಿರೋಡಿನ “ವಿಜಯಲಕ್ಷ್ಮಿ ಗ್ರೂಪ್ ” ಸಂಸ್ಥೆಯವರು ಬಣ್ಣದ ಅಲಂಕಾರ ಮಾಡಿದ್ದಾರೆ.