ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ 3 ನೆ ವಾರ್ಷಿಕ ಮಹಾಸಭೆ ಬಿ ಸಿ ರೋಡ್ ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಶೇಷಪ್ಪ ಮಾಸ್ಟರ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಹಿರಿಯ ನಾಗರಿಕರು ವಿಶ್ರಾಂತ ಜೀವನದಲ್ಲಿ ಸಮಾಜಮುಖಿ ಚಟುವಟಿಕೆಗಳ ಮೂಲಕ ಕ್ರಿಯಾಶೀಲರಾಗಿದ್ದರೆ ಮಾನಸಿಕ ವಾಗಿಯೂ ದೈಹಿಕ ವಾಗಿಯೂ ಅರೋಗ್ಯ ವಾಗಿದ್ದು ನೆಮ್ಮದಿಯ ಜೀವನ ನಮ್ಮದಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಯಾಗಿದ್ದ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ನಾರಾಯಣ್ ಸಿ ಪೆರ್ನೆ ಇಂತಹ ಹಿರಿಯರ ಸಂಘಟನೆಗಳಿಂದ ಹಿರಿಯರಿಗೆ ತೊಂದರೆಯಾದಾಗ ಸಂಘಟಿತರಾಗಿ ನ್ಯಾಯ ಕೇಳುವುದರೊಂದಿಗೆ ಹಿರಿಯರಿಗೆ ಚಟುವಟಿಕೆಗಳಲ್ಲಿ ತೊಡಗಲು ಪ್ರೇರಣೆಯಾಗುತ್ತದೆ ಮಾತ್ರವಲ್ಲ ಕಿರಿಯರಿಗೂ ಸಮಾಜ ಸೇವೆಗೆ ಪ್ರೇರಣೆ ದೊರೆಯುತ್ತದೆ ಎಂದು ತಿಳಿಸಿದರು. ಮಾಜಿ ಯೋಧ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಉದ್ಯೋಗದಲ್ಲಿರುವ ಬಾಲಚಂದ್ರ, ಕೇಂದ್ರ ತೆರಿಗೆ ಆಯುಕ್ತರ ಕಚೇರಿಯ ರಾಜೇಶ್ ನಾಣ್ಯ, ಬಂಟ್ವಾಳ ಕುಲಾಲ ಯುವ ವೇದಿಕೆ ಅಧ್ಯಕ್ಷ ಸಂತೋಷ್ ಮರ್ತಾಜೆ ಮುಖ್ಯ ಅತಿಥಿಗಳಾಗಿದ್ದರು. ಕಳೆದ ವರ್ಷ ನಿಧನರಾದ ವಿಠ್ಠಲ್ ಬಂಗೇರ, ರೇವತಿ, ಸುರೇಶ ಮಾಸ್ಟರ್, ಬಾಬು ಮೂಲ್ಯ, ಗುರುವಪ್ಪ ಮೂಲ್ಯ ಕೃಷ್ಣ ಜಿ ಯವರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.ದಿವಂಗತರ ವಿವರವನ್ನು ಜತೆ ಕಾರ್ಯದರ್ಶಿ ಲಕ್ಷ್ಮಣ ಮೂಲ್ಯ ನೀಡಿದರು.ಸಮಾಜ ಸೇವಕರಾದ ಭಾಸ್ಕರ್ ಕೊಳ್ನಾಡ್ ಗುಣವತಿ ದಂಪತಿಗಳನ್ನು,75 ವರ್ಷ ಮೇಲ್ಪಟ್ಟ ಸಂಘದ ಸದಸ್ಯರಾದ ರುಕ್ಮಯ ಮೂಲ್ಯ, ಪೂವಪ್ಪ ಮೂಲ್ಯ, ಲಕ್ಷ್ಮಣ ಮೂಲ್ಯ, ಎಂ ಬಾಬು, ಜನಾರ್ಧನ ಬಂಗೇರ, ಲಕ್ಷ್ಮೀ, ಸಂಜೀವ ಎಂ ಹಾಗೂ ಸಿ ಎಚ್ ಜನಾರ್ಧನ ಮೂಲ್ಯರನ್ನು ಸನ್ಮಾನಿಸಲಾಯಿತು. ಸಂಘದ ಕಾ. ಕಾ. ಸಮಿತಿ ಸದಸ್ಯರಾದ ಶ್ರೀಮತಿ ವೀಣಾ ಸುಂದರ್, ರತ್ನಾವತಿ, ರೋಹಿಣಿಯವರು ದೀಪ ಬೆಳಗಿಸಿ ಹಿರಿಯರ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕ್ರೀಡಾಕೂಟವನ್ನು ಭಾರತಿ ಶೇಷಪ್ಪ ಹಾಗೂ ಸುಕುಮಾರ್ ಬಂಟ್ವಾಳ್ ನಡೆಸಿಕೊಟ್ಟರು. ಸಂಘದ ಚಂದಪ್ಪ ಮೂಲ್ಯ ಬಿ ಎಸ್ ಎಫ್ ನಿವೃತ್ತ ಡೆಪ್ಯೂಟಿ ಕಮಾಂಡೆಂಟ್ ಉಚಿತವಾಗಿ ಕಳುಹಿಸಿಕೊಟ್ಟ ಭಗವದ್ಗೀತೆ ಪುಸ್ತಕಗಳನ್ನು ಸನ್ಮಾನಿತರಿಗೆ ಹಾಗೂ ಆಸಕ್ತ ಸದಸ್ಯರಿಗೆ ಹಂಚಲಾಯಿತು. ಶಾಂಬವಿ ಸೋಮಯ್ಯ ಪ್ರಾರ್ಥಿಸಿದರು. ಕೃಷ್ಣಶ್ಯಾಮ್ ಸ್ವಾಗತಿಸಿದರು. ಕಾರ್ಯದರ್ಶಿ ಪದ್ಮನಾಭ ಎಂ ವರದಿ ಮಂಡಿಸಿದರು. ಗೌರವಾಧ್ಯಕ್ಷ ಸುಂದರ್ ಬಿ ಪ್ರಸ್ತಾವಿಸಿದರು. ಕೋಶಾಧಿಕಾರಿಸೋಮಯ್ಯ ಮೂಲ್ಯ ಹನೈನಡೆ ಲೆಕ್ಕ ಪತ್ರ ಮಂಡಿಸಿದರು.ಉಪಾಧ್ಯಕ್ಷರಾದ ಶೀನ ಮೂಲ್ಯ, ಸದಸ್ಯರಾದ ಡೊಂಬಯ್ಯ ಮೂಲ್ಯ, ಓಬಯ್ಯ ಮೂಲ್ಯ, ವಿಶ್ವನಾಥ ಸಾಲಿಯಾನ್, ವಿಠ್ಠಲ ಮೂಲ್ಯ ಜಕ್ರಿಬೆಟ್ಟು, ನೀಲಪ್ಪ ಸಾಲಿಯಾನ್ ಸಹಕರಿಸಿದರು. ಸಂಘಟನಾ ಕಾರ್ಯದರ್ಶಿ ಕಿಟ್ಟು ಮೂಲ್ಯ ವಂದಿಸಿದರು. ಉಪಾಧ್ಯಕ್ಷ ಸೋಮಪ್ಪ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು.