Thursday, October 19, 2023

*ಬಂಟ್ವಾಳ ತಾಲೂಕಿನ ವಾಮದಪದವಿನಲ್ಲಿ ವಲಯ ಮಟ್ಟದ ಪ್ರಾಥಮಿಕ ವಿಭಾಗದ ಥ್ರೋಬಾಲ್ ಕ್ರೀಡಾಕೂಟ*

Must read

ವಾಮದಪದವು ವಲಯಮಟ್ಟದ ಪ್ರಾಥಮಿಕ ವಿಭಾಗದ *ಥ್ರೋಬಾಲ್* ಪಂದ್ಯಾಟವು ದಿನಾಂಕ *08/08/2022* ನೇ *ಸೋಮವಾರದಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಚೆನ್ನೈತೋಡಿಯಲ್ಲಿ* ನಡೆಯಿತು ಕ್ರೀಡಾಕೂಟದ ಉದ್ಘಾಟನೆಯನ್ನು ಚೆನ್ನೈತೋಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ *ಶ್ರೀಮತಿ ಭಾರತಿ ರಾಜೇಂದ್ರ, ಗ್ರಾಮ ಪಂಚಾಯತ್ ಸದಸ್ಯರಾದ ಆನಂದ್ ಆಚಾರ್ಯ, ತಾಲೂಕಿನ ಶಿಕ್ಷಕ ಸಂಘದ ಸದಸ್ಯರು, ಚೆನ್ನೈ ತೋಡಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರ ವೃಂದ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸರ್ವ ಸದಸ್ಯರ* ಸಮ್ಮುಖದಲ್ಲಿ ಕ್ರೀಡಾಕೂಟದ ಉದ್ಘಾಟನೆಯಾಯಿತು. ಸಂಜೆಯ ವೇಳೆ ಕ್ರೀಡಾಕೂಟದ ಸಮಾರೂಪ ಸಮಾರಂಭ ನಡೆಯಿತು ಸಮಾರೂಪ ಸಮಾರಂಭದಲ್ಲಿ *ಚೆನ್ನೈ ತೋಡಿ ಗ್ರಾಮ ಪಂಚಾಯತ್ ಸದಸ್ಯರಾದ ಲಿತೇಶ್, ವಾಮದಪದವು ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಗಳಾದ ನಾರಾಯಣಶೆಟ್ಟಿ ಹಾಗೂ ಶಿಕ್ಷಕ ವೃಂದ ಮತ್ತು ಹಳೆ ವಿದ್ಯಾರ್ಥಿಗಳ* ಉಪಸ್ಥಿತಿಯಲ್ಲಿ ವಿಜೇತ ಶಾಲಾ ತಂಡಗಳಿಗೆ ಬಹುಮಾನವನ್ನು ವಿತರಿಸಲಾಯಿತು.

1. ವಲಯಮಟ್ಟದ ಪ್ರಾಥಮಿಕ *ಬಾಲಕರ* ವಿಭಾಗದಲ್ಲಿ.

A. ಪ್ರಥಮ ಸ್ಥಾನವನ್ನು *ವಾಮದಪದವು ಚೆನ್ನೈ ತೋಡಿ ಶಾಲೆ ಪಡೆದುಕೊಂಡಿದೆ*

B.ದ್ವಿತೀಯ ಸ್ಥಾನವನ್ನು *ಹಿರಿಯ ಪ್ರಾಥಮಿಕ ಶಾಲೆ ಉಳಿ ಕಕ್ಕೆಪದವು* ಪಡೆದುಕೊಂಡಿದೆ

2. ವಲಯ ಮಟ್ಟದ ಪ್ರಾಥಮಿಕ *ಬಾಲಕಿಯರ* ವಿಭಾಗದಲ್ಲಿ

A.ಪ್ರಥಮ ಸ್ಥಾನವನ್ನು*ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವಸ್ಯ ಪಡೂರು* ಪಡೆದುಕೊಂಡಿದೆ

B.ದ್ವಿತೀಯ ಸ್ಥಾನವನ್ನು *ಸೆಂಟ್ ಜೋಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅಲ್ಲಿಪಾದೆ ( ಕನ್ನಡ ಮಾಧ್ಯಮ)* ಪಡೆದುಕೊಂಡಿದೆ.

ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕರ ವಿಭಾಗದಲ್ಲಿ *13* ತಂಡಗಳು ಭಾಗವಹಿಸಿದ್ದವು ಬಾಲಕಿಯರ ವಿಭಾಗದಲ್ಲಿ *9* ತಂಡಗಳು ಭಾಗವಹಿಸಿದ್ದವು ಯಾವುದೇ ಕ್ರೀಡಾಕೂಟದಲ್ಲಿ ಸೋಲು ಗೆಲುವು ಎಂಬುದು ಯಾವತ್ತಿಗೂ ನಿಶ್ಚಿತ. ಕ್ರೀಡೆಯಲ್ಲಿ ಸೋತರು ಮುಂದೆ ಒಂದಲ್ಲ ಒಂದು ದಿನ ಗೆಲುವೆನೆಂಬ ಹಠ ದೊಂದಿಗೆ ಮುಂದುವರಿಯಬೇಕು. ಇಂದಿನ ಕ್ರೀಡಾಕೂಟಕ್ಕೆ ಸ್ಮರಣಿಕೆಯನ್ನು *ಚೆನ್ನೈತೋಡಿ ಗ್ರಾಮ ಪಂಚಾಯತ್ ಸದಸ್ಯರಾದ ಲಿತೀಶ್ ರವರು ಕೊಡುಗೆಯಾಗಿ ನೀಡಿರುತ್ತಾರೆ.* ಥ್ರೋಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲಾ ಶಾಲೆಗಳ ಮಕ್ಕಳಿಗೂ ಶುಭವನ್ನು ಹಾರೈಸುವವರು ವಾಮದಪದವು ಚೆನ್ನೈ ತೋಡಿ ಶಾಲೆಯ *ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರ ವೃಂದ ಹಾಗು ಶಾಲಾ ಸಮಿತಿಯ ಸರ್ವ ಸದಸ್ಯರು,ಶಾಲಾ ವಿದ್ಯಾರ್ಥಿಗಳು.*

More articles

Latest article