ಅಮ್ಟಾಡಿ; ಅಮ್ಟಾಡಿ ಗ್ರಾಮಪಂಚಾಯತ್ ನಲ್ಲಿ 75ನೇ ಸ್ವಾತಂತ್ರೋತ್ಸವದ ದ್ವಜಾರೋಹಣವನ್ನು ಗ್ರಾಮ ಪಂಚಾಯತ್ ಆಧ್ಯಕ್ಷರಾದ ಶ್ರೀಮತಿ ಮೋಹಿನಿ ಇವರು ನೆರವೇರಿಸಿದರು.
ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರಾದ ಶ್ರೀ ವಲೇರಿಯನ್ ಡಿಸೋಜಾ, ಶ್ರೀ ಲಿಯೋ ಪೌಲ್ ಡೇಸಾ, ಶ್ರೀ ಲೂಯಿಸ್ ಪಿಂಟೋ, ಹಾಗೂ ಶ್ರೀ ನಾಗೇಶ್ ಇವರುಗಳನ್ನು ಮತ್ತು ಹಿರಿಯ ಪಂಪ್ ಚಾಲಕರಾದ ಶ್ರೀ ಡೊಂಬಯ್ಯ ಪೂಜಾರಿ ಹಾಗೂ ಶ್ರೀ ಕೃಷ್ಣಪ್ಪ ಪೂಜಾರಿ ಇವರನ್ನು ಗ್ರಾಮ ಪಂಚಾಯತ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಬಳಿಕ ನಿವೃತ್ತ ಸೈನಿಕರು ಹಾಗೂ ಸೇರಿದ ಜನರಿಂದ ಗ್ರಾಮ ಪಂಚಾಯತ್ ಆವರಣದಲ್ಲಿ ಅರಣ್ಯ ಸಸಿಗಳನ್ನು ನೆಡಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಶ್ರೀ ಕೆ ಸುನೀಲ್ ಕುಮಾರ್, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಹರೀಶ್ ಶೆಟ್ಟಿ ಪಡು,ರೂಪೇಶ್ ಕುಮಾರ್, ಫೆಲಿಕ್ಸ್ ಡಿಸೋಜಾ,ಬಾಬು ಭಂಡಾರಿ, ಶ್ರೀಮತಿ ಪೂರ್ಣಿಮಾ,ಶ್ರೀಮತಿ ಯಶೋಧರೆ, ಅಶ್ವಿನಿ ಶೆಟ್ಟಿ, ಪ್ರಕಾಶ್, ಕಾರ್ಯದರ್ಶಿಯವರು,ಪಂಚಾಯತ್ ಸಿಬ್ಬಂದಿಗಳು,ಅಂಗನವಾಡಿ ಕಾರ್ಯಕರ್ತೆಯರು,ಮುಂತಾದವರು ಉಪಸ್ಥಿತರಿದ್ದರು. ಪಂ ಅ ಅಧಿಕಾರಿ ಸ್ವಾಗತಿಸಿ ,ಸ್ವಾತಂತ್ರೋತ್ಸವ ದಿನಾಚರಣೆಯ ಕುರಿತು ಮಾತನಾಡಿ ಕೊನೆಯಲ್ಲಿ ವಂದಿಸಿದರು.