ಸೆಪ್ಟೆಂಬರ್ 1 ಈ ದಿನ ಹಾವೇರಿಯಲ್ಲಿ ನಡೆಯುವ *ಅಗ್ನಿವೀರ್* ಆಯ್ಕೆ ಶಿಬಿರದಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವ ಬಂಟ್ವಾಳ ತಾಲೂಕಿನ ಅಭ್ಯರ್ಥಿಗಳನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹಾಗೂ ಪುತ್ತೂರು ವಿವೇಕಾನಂದ ಕಾಲೇಜಿನ ಅಧ್ಯಕ್ಷ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಅವರು ಬಿಸಿರೋಡಿನ ರಕ್ತೇಶ್ವರಿ ದೇವಿ ದೇವಾಸ್ಥಾನದ ಮುಂಭಾಗದಲ್ಲಿ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಅವರು ವಿದ್ಯಾರ್ಥಿಗಳಿಗೆ ಶಿಬಿರದ ಮಹತ್ವದ ಬಗ್ಗೆ ಮತ್ತು ಯಾವ ರೀತಿಯಲ್ಲಿ ಶಿಬಿರದಲ್ಲಿ ಪ್ರಯೋಜನ ಪಡೆಯಬೇಕು ಎಂಬುರ ಕುರಿತು ಮಾಹಿತಿ ನೀಡಿದರು .
ಜೊತೆಗೆ ವಿದ್ಯಾರ್ಥಿಗಳಿಗೆ ಸಕಾರಾತ್ಮಕ ರೀತಿಯಲ್ಲಿ ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಮುಂದಿನ ಜೀವನದಲ್ಲಿ ಯಶಸ್ಸು ಗಳಿಸಿರಿ ಎಂದು ಶುಭ ಹಾರೈಸಿದರು.
ಹಾವೇರಿಗೆ ತೆರಳಲಿರುವ ಅಭ್ಯರ್ಥಿಗಳಿಗೆ ಬಂಟ್ವಾಳ ಶಾಸಕರು ಉಚಿತ ಬಸ್ಸ್ ನ ವ್ಯವಸ್ಥೆ ಮಾಡಿದ್ದರು.
.ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ನಿಕಟಪೂರ್ವ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಪ್ರಮುಖ ರಾದ ರಂಜಿತ್ ಮೈರ, ಸುದರ್ಶನ ಬಜ, ದಿನೇಶ್ ಶೆಟ್ಟಿ ದಂಬೆದಾರ್, ಸತೀಶ್ ಶೆಟ್ಟಿ ಕೊಳತ್ತಮಜಲು, ಗಣೇಶ್ ರೈ ಮಾಣಿ, ಕಾರ್ತಿಕ್ ಬಲ್ಲಾಳ್,ಹಾಗೂ ವಿದ್ಯಾರ್ಥಿಗಳನ್ನು ಶಿಬಿರಕ್ಕೆ ಕರೆದುಕೊಂಡು ಹೋಗುವ ಜವಬ್ದಾರಿಯನ್ನು ವಹಿಸಿದ್ದ ಪ್ರಣಾಮ್ ರಾಜ್ ಅಜ್ಜಿಬೆಟ್ಟು ಉಪಸ್ಥಿತರಿದ್ದರು.