Tuesday, October 31, 2023

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಕಾರ್ಯ ಆಗಬೇಕು: ಮಾಣಿಲ ಶ್ರೀ

Must read

ವಿಟ್ಲ: ಅಮಲಿನಲ್ಲಿ ಜೀವನ ಸಾಗಿಸುವುದು ಸಮಾಜದ ಬಹಳ ದೊಡ್ಡ ದುರಂತವಾಗಿದೆ. ದುಶ್ಚಟ ಮುಕ್ತ ಸಮಾಜ ನಿರ್ಮಾಣದ ಕಾರ್ಯ ಎಲ್ಲರಿಂದ ನಡೆಯಬೇಕು ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಅವರು ಶ್ರೀಧಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ವಿಟ್ಲ ತಾಲೂಕು ಹಾಗೂ ವಿವಿಧ ಸಮಿತಿಗ ಸಹಯೋಗದದಲ್ಲಿ ನಡೆದ 1556ನೇ ಮದ್ಯವರ್ಜನ ಶಿಬಿರವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು 1556ನೇ ಮದ್ಯ ವರ್ಜನ ಶಿಬಿರ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ವಹಿಸಿದ್ದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದ. ಕ. ಜಿಲ್ಲೆ 2 ನಿರ್ದೇಶಕ ಪ್ರವೀಣ್ ಕುಮಾರ್, ಮಾಣಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಿತಾ, ಬಂಟ್ವಾಳ ತಾಲೂಕು ಜನ ಜಾಗೃತಿ ವೇದಿಕೆ ಅಧ್ಯಕ್ಷ ರೋನಾಲ್ಡ್ ಡಿಸೋಜ, ಕೇಪು ಜನ ಜಾಗೃತಿ ವೇದಿಕೆ ವಲಯಾದ್ಯಕ್ಷ ರಘುನಾಥ ಪಾತನಿಕೆ, ಕೇಪು ಪ್ರಗತಿ ಬಂಧು ಸ್ವಸಹಾಯ ಸಂಘ ಒಕ್ಕೂಟ ವಲಯಾಧ್ಯಕ್ಷ ಜಯಾನಂದ, ಮಾಣಿಲ ಪ್ರಗತಿ ಬಂಧು ಸ್ವಸಹಾಯ ಸಂಘ ಒಕ್ಕೂಟ ವಲಯಾಧ್ಯಕ್ಷ ಆನಂದ ಬಂಗೇರ, ಕಲ್ಲಡ್ಕ ವಲಯಾಧ್ಯಕ್ಷ ಭಟ್ಯಪ್ಪ ಶೆಟ್ಟಿ, ಪೆರುವಾಯಿ ವಲಯಾಧ್ಯಕ್ಷ ವಿದ್ಯಾಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

ಚೆನ್ನಪ್ಪ ಗೌಡ ಸ್ವಾಗತಿಸಿದರು. ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ತಿಮ್ಮಯ್ಯ ಪ್ರಸ್ತಾವನೆಗೈದರು. ವಿನೋದ ವಂದಿಸಿದರು. ಗಂಗಾಧರ ಕಾರ್ಯಕ್ರಮ ನಿರೂಪಿಸಿದರು.

More articles

Latest article