ವಿಟ್ಲ: ಕೃಷಿ ಕಾಯ್ದೆಯ ಮೂಲಕ ರೈತರ ಬದುಕು ನಾಶ ಮಾಡಿದ ಕೇಂದ್ರ ಸರ್ಕಾರ, ಅಗ್ನಿಪಥ್ ಮೂಲಕ ಯುವ ಜನರ ಬದುಕು ಕಸಿಯಲು ಹೊರಟಿದೆ ಎಂದು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ. ಬಿ. ಹೇಳಿದರು.

ವರ್ಷಕ್ಕೆ ಎರಡು ಕೊಟಿ ಉದ್ಯೋಗದ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಮೋದಿ ಆಡಳಿತ ವೈಕರಿಯಿಂದ ಉದ್ಯೋಗಾವಕಾಶಗಳು ಬಾಗಿಲು ಹಾಕುತ್ತಿದೆ. ಪ್ರತಿ ವರ್ಷ ಎರಡು ಕೋಟಿ ನಿರುದ್ಯೋಗಿಗಳನ್ನು ಸೃಷ್ಠಿಸುವ ಗುಪ್ತ ಅಜೆಂಡ ಇದೆಯಾ ಎಂದು ವಿಟ್ಲ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.

ಸರ್ಕಾರದ ದಿವಾಳಿತನವನ್ನು ಮುಚ್ಚಿಡಲು ದೇಶದ ಭದ್ರತೆಯ ಜತೆಗೆ ಚೆಲ್ಲಾಟವಾಡುವುದು ಸರಿಯಲ್ಲ. ದೇಶದ ಯುವಕರನ್ನು ನಿರುದ್ಯೋಗದ ಕೂಪಕ್ಕೆ ತಳ್ಳುವ ಮತ್ತು ದೇಶದ ಭದ್ರತೆಗೆ ಅಪಾಯಕಾರಿಯಾಗಬಲ್ಲ ಅಗ್ನಿಪಥ್ ಯೋಜನೆಯನ್ನು ಕೇಂದ್ರ ತಕ್ಷಣ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಎಂ. ಎಸ್. ಮಹಮ್ಮದ್, ಮುರಳೀಧರ ರೈ, ಪ್ರವೀಣ್ ಚಂದ್ರ ಆಳ್ವ, ರಮಾನಾಥ ವಿಟ್ಲ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here